ಭಾರತ್ ಗೌರವ್ ಕಾಶಿ ದರ್ಶನ ರೈಲು ಘಟಪ್ರಭಾದಲ್ಲಿ ನಿಲುಗಡೆಗೆ ಆದೇಶ : ಈರಣ್ಣಾ ಕಡಾಡಿ

MK HasiruKranti
WhatsApp Group Join Now
Telegram Group Join Now

ಘಟಪ್ರಭಾ,ಎ,೦೪: ನೈರುತ್ಯ ರೈಲ್ವೆ ಇಲಾಖೆಯಿಂದ ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ ಸಂಚರಿಸುತ್ತಿರುವ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ರೈಲನ್ನು ಇಲ್ಲಿನ ಪ್ರವಾಸಿಗರ ವಿನಂತಿ ಮೇರೆಗೆ ೫ ನಿಮಿಷದ ಹೋಗುವಾಗ ಮತ್ತು ಬರುವಾಗ ನಿಲುಗಡೆಗೆ ಆದೇಶಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏಪ್ರಿಲ್ ೬ರಂದು ಘಟಪ್ರಭಾ ನಿಲ್ದಾಣದಲ್ಲಿ ೫ ನಿಮಿಷ ಹಾಗೂ ಏಪ್ರಿಲ್ ೧೪ರಂದು ವಾಪಸು ಬರುವಾಗ ೫ ನಿಮಿಷ ನಿಲುಗಡೆಯಾಗುತ್ತದೆ ಇಲ್ಲಿನ ಭಕ್ತರು ಮನವಿಯ ಮೇರೆಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಹಾಗೂ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣರವರಿಗೆ ವಿನಂತಿ ಮಾಡಿಕೊಂಡಿದ್ದರಿಂದ ಅವರು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿ ಆದೇಶವನ್ನು ನೀಡಿದ್ದಾರೆ. ಆದ್ದರಿಂದ ಇಲ್ಲಿನ ಸುತ್ತ-ಮುತ್ತಲಿನ ಸದ್ಭಕ್ತರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ

WhatsApp Group Join Now
Telegram Group Join Now
Share This Article