ಶಿವಾಪೂರ ಅರ್ಬನ್ ಸೊಸೈಟಿಗೆ ೨೮.೦೪ ಲಕ್ಷ ಲಾಭ

Pratibha Boi
ಶಿವಾಪೂರ ಅರ್ಬನ್ ಸೊಸೈಟಿಗೆ ೨೮.೦೪ ಲಕ್ಷ ಲಾಭ
WhatsApp Group Join Now
Telegram Group Join Now

ಮೂಡಲಗಿ : ?ರುದಾರರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸೊಸೈಟಿ ೨೦೨೬ ಮಾರ್ಚ್ ಅಂತ್ಯಕ್ಕೆ ೨೮.೦೪ ಲಕ್ಷ ಲಾಭಗಳಿಸಿ ಪ್ರಗತಿ ಹೊಂದಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸೊಸೈಟಿ ಅಧ್ಯಕ್ಷ ಸಿದ್ದಪ್ಪ ಗಿಡ್ಡನ್ನವರ ಹೇಳಿದರು.
ತಾಲೂಕಿನ ಶಿವಾಪೂರ(ಹ) ಗ್ರಾಮದ ಶಿವಾಪೂರ ಅರ್ಬನ್ ಸೊಸೈಟಿಯ ಸಭಾ ಭವನದಲ್ಲಿ ಜರುಗಿದ ೨೦೨೫-೨೬ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ೨೦೨೬ನೇ ಮಾರ್ಚ ಅಂತ್ಯಕ್ಕೆ ಸೊಸೈಟಿ ರೂ.೩೨.೩೦ ಲಕ್ಷ ಶೇರು ಬಂಡವಾಳ ಹೊಂದಿದ್ದು, ಒಟ್ಟು ನಿಧಿಗಳು ೧.೧೪ ಕೋಟಿ ರೂಗಳು, ೧೭.೧೪ ಕೋಟಿ ರೂ ಠೇವು ಸಂಗ್ರಹಿಸಿ, ೧೦.೩೪ ಕೋಟಿ.ರೂ ವಿವಿಧ ರೀತಿಯ ಸಾಲಗಳನ್ನು ವಿತರಿಸಿ, ೧೯.೩೦ ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದರು. ಮುಖ್ಯ ಕಾರ್ಯನಿರ್ವಾಹಕ ದರೇಪ್ಪಾ ಸುಣದೊಳಿ ಮಾತನಾಡಿ, ಗ್ರಾಹಕರ ಸಹಕಾರದಿಂದ ನಮ್ಮ ಸೊಸೈಟಿಯು ಪ್ರಗತಿಯತ್ತ ಸಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷ ಉಮೇಶ ಮುಧೋಳ, ನಿರ್ದೇಶಕರಾದ ಕಲ್ಲಪ್ಪ ಬೆಂಡವಾಡ, ಶಿವಬಸು ಶೇಕ್ಕಿ, ಮಲ್ಲಪ್ಪ ಜುಂಜರವಾಡ, ಈಶ್ವರ ಗೋರಗುದ್ದಿ, ಮಲ್ಲಪ್ಪ ಪಾಟೀಲ, ಈರಪ್ಪ ಜುಂಜರವಾಡ, ಎಲ್.ಎಂ ಪಾಟೀಲ, ಹುವಕ್ಕ ಎಂ. ಶೀಳನ್ನವರ, ಶಕುಂತಲ ಕದಂ, ಸಂಸ್ಥೆಯ ಮಾರ್ಗದರ್ಶಕರಾದ ಮಹಾದೇವ ಶಿಳನವರ, ಸಿಬ್ಬಂದಿ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article