“ಪರಿಸರ ಸಮತೋಲನಕ್ಕೆ ಗಿಡಮರಗಳನ್ನು ಬೆಳೆಸುವುದು ಅವಶ್ಯವಿದೆ”

Pratibha Boi
“ಪರಿಸರ ಸಮತೋಲನಕ್ಕೆ ಗಿಡಮರಗಳನ್ನು ಬೆಳೆಸುವುದು ಅವಶ್ಯವಿದೆ”
Oplus_16908288
WhatsApp Group Join Now
Telegram Group Join Now

ಮೂಡಲಗಿ: ‘ಗಿಡಮರಗಳನ್ನು ಸಂರಕ್ಷಿಸಿ ಬೆಳೆಸುವುದು ಪರಿಸರಕ್ಕೆ ಕೊಡುವ ಬಹುದೊಡ್ಡ ಕೊಡುಗೆಯಾಗಿದೆ’ ಎಂದು ತಹಶೀಲ್ದಾರ್ ಶ್ರೀಶೈಲ್ ಗುಡಮೆ ಹೇಳಿದರು.
ಮೂಡಲಗಿಯ ನಿಸರ್ಗ ಫೌಂಡೇಶನ್, ಸತ್ಯ ಸಾಯಿ ಸೇವಾ ಸಮಿತಿ ಹಾಗೂ ಯುವ ಜೀವನ ಸೇವಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಈರಪ್ಪ ಢವಳೇಶ್ವರ ಇವರ ಪುತ್ರಿ ಸಾದ್ವಿ ಇವಳ ೧೦ನೇ ವ?ದ ಹುಟ್ಟು ಹಬ್ಬದ ಅಂಗವಾಗಿ ಸಾಯಿ ಮಂದಿರ ರಸ್ತೆಯ ಎರಡೂ ಬದಿಯಲ್ಲಿ ಸಸಿ ನೆಡುವ ಹಾಗೂ ಅಲಂಕಾರಿಕ ಹೂಕುಂಡಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವೃಕ್ಷ ಪ್ರೇಮಿ ಈರಪ್ಪ ಢವಳೇಶ್ವರ ಕಳೆದ ೧೨ ವ?ಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ಬೆಳಿಸಿರುವುದು ಶ್ಲಾಘನೀಯ ಕಾರ್ಯಕವಾಗಿದೆ ಎಂದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ ಅವರು ಮಾತನಾಡಿ ಪರಿಸರ ಸಮತೋಲನಕ್ಕೆ ಗಿಡಮರಗಳನ್ನು ಬೆಳೆಸುವುದು ಅವಶ್ಯವಿದೆ. ಈರಪ್ಪ ಢವಳೇಶ್ವರ ಅವರ ಸಸಿ ನೆಡುವ ಕಾರ್ಯವು ಇತರ ಯುವಕರಿಗೆ ಪ್ರೇರಣೆಯಾಗಿದೆ ಎಂದರು.
ತಹಶೀಲ್ದಾರ್ ಶ್ರೀಶೈಲ್ ಗುಡಮೆ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಸಿಡಿಪಿಒ ಯಲ್ಲಪ್ಪ ಗದಾಡಿ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಅರಣ್ಯ ಇಲಾಖೆಯ ಕವನ ನಂದಿ ಹಾಗೂ ಈರಪ್ಪ ಢವಳೇಶ್ವರ ಅವರನ್ನು ಸಾಯಿ ಮಂದಿರದ ಪರವಾಗಿ ಸನ್ಮಾನಿಸಿದರು. ಸತ್ಯ ಸಾಯಿ ಸೇವಾ ಸಮಿತಿಯ ಕೆ.ಬಿ. ನಾವಳ್ಳಿ ಅಧ್ಯಕ್ಷತೆವಹಿಸಿದ್ದರು.
ಅತಿಥಿಗಳಾಗಿ ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಸಿಡಿಪಿಒ ಯಲ್ಲಪ್ಪ ಗದಾಡಿ, ಅರಣ್ಯ ಇಲಾಖೆಯ ಕವನ ನಂದಿ, ಆರ್ಚಕ ಸಂಗಮೇಶ ಹಿರೇಮಠ, ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಬಿಆರ್‌ಸಿ ರೇಣುಕಾ ಆನಿ, ಬಸವಪ್ರಭು ನಿಡಗುಂದಿ, ಎಸ್.ಆರ್. ಸೋನವಾಲಕರ, ನಿವೃತ್ತ ಪ್ರಾಚಾರ್ಯ ಎಸ್.ಡಿ. ತಳವಾರ, ಪ್ರಕಾಶ ಮಾದರ, ಕಸಾಪ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ, ಕಲ್ಮೇಶ ಗೋಕಾಕ, ಚಂದ್ರಶೇಖರ ಪತ್ತಾರ, ಭಗೀರಥ ಉಪ್ಪಾರ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಈಶ್ವರ ಕಂಕಣವಾಡಿ, ಶಂಕರ ಚಿಪ್ಪಲಕಟ್ಟಿ, ಬಸವರಾಜ ಮುಧೋಳ, ಸಾಲೀನಿ ಪೂಜೇರಿ, ರವಿ ನಂದಗಾಂವ ಇದ್ದರು. ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು, ಮಲ್ಲು ಬೋಳನ್ನವರ ಸ್ವಾಗತಿಸಿದರು, ಈರಪ್ಪ ಢವಳೇಶ್ವರ ವಂದಿಸಿದರು.

 

 

 

WhatsApp Group Join Now
Telegram Group Join Now
Share This Article