ಘಟಪ್ರಭಾ: ಲೋಕ ರೂಡಿಯಲ್ಲಿ ನಾವೆಲ್ಲಾ ಹೇಳುತ್ತೇವೆ ಬರುವಾಗ ಏನು ತೆಗೆದುಕೊಂಡು ಬರುವುದಿಲ್ಲ, ಹೋಗುವಾಗ ಏನು ತೆಗೆದುಕೊಂಡು ಹೋಗುವುದಿಲ್ಲ ಎಂದು ಆದರೆ ಇತಿಹಾಸಕಾರರು ಹೇಳುತ್ತಾರೆ ಬರುವಾಗ ಏನು ತರುವುದಿಲ್ಲ ನಿಜ ಹೋಗುವಾಗ ಬದುಕಿನಲ್ಲಿ ಮಾಡಿದ ಸಾಧನೆ ನಮ್ಮ ಜತೆ ಬರುತ್ತದೆ ಆದ್ದರಿಂದ ಜೀವನದಲ್ಲಿ ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನವೆಂದು ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಡಾ|| ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ಅವರು ಇಲ್ಲಿನ ಕರ್ನಾಟಕ ಆರೋಗ್ಯಧಾಮದ ಸಾಂಸ್ಕೃತಿಕ ಭವನದಲ್ಲಿ ಇತ್ತೀಚಿಗೆ ವಿಜಯಕರ್ನಾಟಕ, ಟೈಮ್ಸ್ ಆಪ್ ಇಂಡಿಯಾ ಮತ್ತು ಬೆಂಗಳೂರು ಮಿರರ್ ಸಮೂಹ ಸಂಸ್ಥೆಗಳು ಆಯೋಜಿಸಿದ ಕಾರ್ಯಕ್ರಮದಲ್ಲಿ ಆದರ್ಶ ಮಹಿಳೆ ಶ್ರೇಷ್ಠತಾ ಗೌರವ ಪಡೆದ ಆರೋಗ್ಯಧಾಮದ ಮುಖ್ಯವೈದ್ಯಾಧಿಕಾರಿಗಳಾಗಿರುವ ಡಾ|| ಸ್ವಾತಿ ವೈದ್ಯರಿಗೆ ಆಸ್ಪತ್ರೆ ಹಾಗೂ ಸಾರ್ವಜನಿಕರು ಏರ್ಪಡಿಸಿದ ಅಭಿನಂದನಾ ಸಮಾರಂಭದ ಸಾನಿದ್ಯವಹಿಸಿ ಮಾತನಾಡಿ ಡಾ|| ಸ್ವಾತಿ ವೈದ್ಯರು ಎಲೆ ಮರೆಯ ಕಾಯಿಯಂತೆ ಇಲ್ಲಿ ಸೇವೆ ಸಲ್ಲಿಸುತ್ತಿದ್ದರು ಅವರನ್ನು ವಿಜಯಕರ್ನಾಟಕದ ಸಮೂಹ ಸಂಸ್ಥೆಗಳು ಅವರನ್ನು ಗುರುತಿಸಿ ಪುರಸ್ಕಾರ ನೀಡಿರುವುದು ಈ ಭಾಗದ ಜನರಿಗೆ ತುಂಬಾ ಸಂತೋಷವಾಗಿದೆ. ಅವರಿಗೆ ಸಿಕ್ಕಿರುವ ಗೌರವ ಇಡಿ ಊರಿಗೆ ಸಿಕ್ಕಂತಾಗಿದೆ ಅವರ ವೈದ್ಯಕೀಯ ಸೇವೆ ವೈದ್ಯ ಲೋಕಕ್ಕೆ ಮಾದರಿಯಾಗಿದೆ. ಡಾ|| ಸ್ವಾತಿ ವೈದ್ಯರಿಗೆ ಪ್ರಶಸ್ತಿ ಸಿಕ್ಕಿರುವುದರಿಂದ ಪ್ರಶಸ್ತಿಯ ಗೌರವು ಹೆಚ್ಚಾಗಿದೆ ಅವರು ಎಂದು ಪ್ರಚಾರ ಬಯಸಿದವರಲ್ಲ, ರೋಗಿಗಳ ಸೇವೆಯೆ ದೇವರ ಸೇವೆ ಎಂದು ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿರುವ ಡಾ|| ಸ್ವಾತಿ ವೈದ್ಯರು ಆದರ್ಶ ಮಹಿಳೆ ಪ್ರಶಸ್ತಿ ಸಿಕ್ಕಿರುವುದು ನಮ್ಮ ಕುಟುಂಬಕ್ಕೆ ತುಂಬಾ ಸಂತೋಷವಾಗಿದೆ. ಇಲ್ಲಿನ ಜನರು ತುಂಬಾ ಸಂತೋಷದಿಂದ ಅಭಿನಂದನೆ ಕಾರ್ಯಕ್ರಮ ಏರ್ಪಡಿಸಿದ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ನನ್ನ ಆಯ್ಕೆ ಮಾಡಿರುವ ಸಮೂಹ ಸಂಸ್ಥೆಗಳಿಗೆ ಹಾಗೂ ಊರಿನ ಜನರಿಗೆ ಧನ್ಯವಾದವನ್ನು ಅರ್ಪಿಸುತ್ತಿದ್ದೇನೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಹೊಸಮಠದ ವಿರುಪಾಕ್ಷ ಮಹಾಸ್ವಾಮಿಗಳು, ಡಾ|| ವಿಲಾಸ ನಾಯಿಕವಾಡಿ, ಡಾ|| ಶಶಿಧರ ಕಟ್ಟಿಮನಿ, ರಾಮಣ್ಣ ಹುಕ್ಕೇರಿ, ಮಾಜಿ ಸಚಿವ ಆರ್.ಎಮ್.ಪಾಟೀಲ, ಸುರೇಶ ಪಾಟೀಲ, ಪ್ರೋ. ಶೋಭಾ ನಾಯ್ಕರ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ|| ಅಲ್ಕಾನಂದ ವೈದ್ಯ, ಡಾ|| ರೋಹಿತ ವೈದ್ಯ ಕಾರ್ಯಕ್ರಮವನ್ನು ಭಾರತ ಸೇವಾದಳದ ನಿವೃತ್ತ ದಳಪತಿ ಬಸವರಾಜ ಹಟ್ಟಿಗೌಡರ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಜಿ.ಪ ಮಾಜಿ ಸದಸ್ಯ ವಂದನಾ ಕತ್ತಿ, ರಾಜು ಕತ್ತಿ, ಕಾಡಪ್ಪ ಕರೋಶಿ, ಶ್ರೀಕಾಂತ ಮಹಾಜನ, ಮತ್ತು ಊರಿನ ಹಿರಿಯರು, ಆಸ್ಪತ್ರೆಯ ಸಿಬ್ಬಂದಿ ವರ್ಗ, ವೈದ್ಯರು ಇದ್ದರು.
ಪೋಟೋ:೦೩ಜಿಪಿಬಿ೧
ಘಟಪ್ರಭಾ: ಡಾ|| ಸ್ವಾತಿ ವೈದ್ಯರಿಗೆ ಶ್ರೀಗಳು ಹಾಗೂ ಹಿರಿಯರು ಸತ್ಕಾರಿಸುತ್ತಿರುವುದು.


