ಸಿಂದಗಿ: ಸಿಂದಗಿ ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ನಗರದ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಮೇಲ್ಛಾವಣೆ ಕಟ್ಟಡದ ಸಿಮೆಂಟ್ ಪದರು ಕುಸಿದು ಬಿದ್ದಿದ್ದು, ಇದರಿಂದ ಅಲ್ಲಿದ್ದ ಕೆಲವು ಸಾಮಗಿಗಳು ಹಾಳಾಗಿದ್ದು, ಅದೃಷ್ಟವಶಾತ್ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ. ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಕಡೆಗೆ ಗಮನ ಹರಿಸಿ ಹೈಟೆಕ್ ಗ್ರಂಥಾಲಯ ನಿರ್ಮಿಸಿಬೇಕು ಎಂಬುದು ಓದುಗರ ಆಶಯವಾಗಿದೆ.
ಕೋಟ್ಸ್: ಪ್ರತಿನಿತ್ಯ ನಾನು ಓದುವುದಕ್ಕಾಗಿ ಗ್ರಂಥಾಲಯಲಕ್ಕೆ ಹೋಗುತ್ತೇನೆ. ಪ್ರತಿನಿತ್ಯ ಅಲ್ಲಿಯೇ ಕುಳಿತು ಓದುತ್ತಿದ್ದೆ. ಅದೃಷ್ಟವಶಾತ್ ಅಲ್ಲಿ ಕುಳಿತುಕೊಂಡಿರಲಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯ ಹಿತದೃಷ್ಠಿಯಿಂದ ಇಂದಿನ ಯುವ ಜನಾಂಗಕ್ಕೆ ಉನ್ನತ ಶ್ರೇಣಿಯ ಗ್ರಂಥಾಲಯದ ಅವಶ್ಯಕತೆಯಿದ್ದು, ನೂತನ ಗ್ರಂಥಾಲಯ ಕಟ್ಟಡ ಅವಶ್ಯಕತೆ ಇದೆ. ಇನ್ನಾದರೂ ನಗರಕ್ಕೆ ಒಂದು ಸುಸಜ್ಜಿತ ಗ್ರಂಥಾಲಯ ನಿರ್ಮಾಣವಾಗಲಿ ಎಂದು ಓದುಗರ ಆಶಯ.
ಶಿಥಿಲಾವಸ್ಥೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಕಟ್ಟಡ


