ಸ್ವಯಂ ಗಣತಿ: ಮಾಹಿತಿ ದಾಖಲಿಸಿದ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್

MK HasiruKranti
ಸ್ವಯಂ ಗಣತಿ: ಮಾಹಿತಿ ದಾಖಲಿಸಿದ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್
WhatsApp Group Join Now
Telegram Group Join Now

ಬಳ್ಳಾರಿ,ಏ.04: ಡಿಜಿಟಲ್ ಜನಗಣತಿ- 2027 ರ ಅಂಗವಾಗಿ ಸ್ವಯಂ ಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಕಂಪ್ಯೂಟರ್ ಮೂಲಕ ಮಾಹಿತಿಯನ್ನು ದಾಖಲಿಸಿದರು.
ನಿಗದಿತ ಜನಗಣತಿ ಪೋರ್ಟಲ್‌ಗೆ ಲಾಗಿನ್ ಆಗುವ ಮೂಲಕ, ಕುಟುಂಬದ ಸದಸ್ಯರ ವಿವರಗಳು, ವಸತಿ ಸೌಕರ್ಯ ಮತ್ತು ಇತರ ಅಗತ್ಯ ಮಾಹಿತಿಗಳನ್ನು ಆನ್‌ಲೈನ್ ಮೂಲಕವೇ ದಾಖಲಿಸುವ ಅವಕಾಶ ಈ ಪ್ರಕ್ರಿಯೆಯಲ್ಲಿ ಒದಗಿಸಲಾಗಿದೆ.
ಇದೇ ಏಪ್ರಿಲ್ 15 ರವರೆಗೆ ಎಲ್ಲಾ ನಾಗರಿಕರು ಅಧಿಕೃತ ಪೋರ್ಟಲ್ https://se.census.gov.in ಮೂಲಕ ತಮ್ಮ ಮಾಹಿತಿಯನ್ನು ಆನ್ ಲೈನ್ ನಲ್ಲಿ ದಾಖಲಿಸಿಕೊಳ್ಳಬಹುದು.
ಸರ್ಕಾರವು ಒದಗಿಸಿರುವ ಈ ‘ಸ್ವಯಂ ಗಣತಿ’ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ನಿಖರವಾದ ಮಾಹಿತಿ ನೀಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.

WhatsApp Group Join Now
Telegram Group Join Now
Share This Article