ಉಪ ಚುನಾವಣೆ : ಪಿಆರ್‌ಓ, ಎಪಿಆರ್‌ಓ & ಪಿಓಗಳಿಗೆ ತರಬೇತಿ ತರಬೇತಿ ಕೇಂದ್ರಕ್ಕೆ ಡಿಸಿ, ಸಾಮಾನ್ಯ ವೀಕ್ಷಕರ ಭೇಟಿ 

MK HasiruKranti
ಉಪ ಚುನಾವಣೆ : ಪಿಆರ್‌ಓ, ಎಪಿಆರ್‌ಓ & ಪಿಓಗಳಿಗೆ ತರಬೇತಿ ತರಬೇತಿ ಕೇಂದ್ರಕ್ಕೆ ಡಿಸಿ, ಸಾಮಾನ್ಯ ವೀಕ್ಷಕರ ಭೇಟಿ 
WhatsApp Group Join Now
Telegram Group Join Now
ಬಾಗಲಕೋಟೆ: ಎಪ್ರೀಲ್ ೦೩ (ಕರ್ನಾಟಕ ವಾರ್ತೆ) : ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆ ಹಿನ್ನಲೆಯಲ್ಲಿ ನವನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಪಿ.ಆರ್.ಓ, ಎ.ಪಿ.ಆರ್.ಓ ಹಾಗೂ ಪಿಓಗಳ ತರಬೇತಿ ಕೇಂದ್ರಕ್ಕೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಚುನಾವಣಾ ಸಾಮಾನ್ಯ ವೀಕ್ಷಕರಾದ ಪಾರುಲ್ ಪಟವಾರಿ ಅವರು ಭೇಟಿ ನೀಡಿ ವೀಕ್ಷಣೆ ಮಾಡಿದರು.
ಜಿಲ್ಲಾ ಚುನಾವಣಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಈ ತರಬೇತಿಯಲ್ಲಿ ಮತಗಟ್ಟೆ ನಿರ್ವಹಣೆ, ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳ ಬಳಕೆ, ಮತದಾರರ ಗುರುತಿನ ಚೀಟಿ ಪರಿಶೀಲನೆ, ಮಾದರಿ ನೀತಿ ಸಂಹಿತೆಯ ಅನುಸರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿವರವಾಗಿ ತಿಳಿಸಲಾಯಿತು. ಮತದಾನ ದಿನದ ಕರ್ತವ್ಯಗಳು, ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿರ್ವಹಿಸುವ ವಿಧಾನಗಳು ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಪ್ರದರ್ಶನದೊಂದಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾನ್ಯ ವೀಕ್ಷಕರಾದ ಪಾರುಲ್ ಪಟವಾರಿ ಅವರು ತರಬೇತಿ ಕೊಠಡಿಗಳಿಗೆ ತೆರಳಿ ಚುನಾವಣಾ ಕರ್ತವ್ಯಗಳನ್ನು ನಿಷ್ಠೆಯಿಂದ ಮತ್ತು ನಿಯಮಾನುಸಾರ ನಿರ್ವಹಿಸಬೇಕು. ಪ್ರಿಸೆಡಿಂಗ್ ಅಧಿಕಾರಿಗಳು ಪಿಆರ್‌ಓ ಆಪ್‌ಯನ್ನು ತಪ್ಪದೇ ಡೌನ್‌ಲೋಡ ಮಾಡಿಕೊಂಡು ಚುನಾವಣಾ ದಿನದಂದು ಮಾಕ್ ಪೋಲ್, ಮತದಾನ ಪ್ರಾರಂಭಿಸಿದ ಬಗ್ಗೆ ಹಾಗೂ ಪ್ರಾರಂಭದಿಂದ ಮುಕ್ತಾಯದವರೆಗೆ ಮತದಾನ ಪ್ರಕ್ರಿಯೆಯನ್ನು ಅಂಶವನ್ನು ಆಪ್‌ನಲ್ಲಿ ಮಾಹಿತಿ ಅಪಲೋಡ್ ಮಾಡಬೇಕಾಗುತ್ತದೆ. ಆದ್ದರಿಂದ ಈ ಆಪ್ ಬಗ್ಗೆ ಸಮಪೂರ್ಣವಾಗಿ ತರಬೇತಿಯಲ್ಲಿ ಪಡೆದುಕೊಳ್ಳಲು ತಿಳಿಸಿದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ ಸ್ವಚ್ಛ, ಪಾರದರ್ಶಕ ಹಾಗೂ ಶಾಂತಿಯುತ ಮತದಾನ ನಡೆಯಲು ತರಬೇತಿ ಬಹಳ ಮುಖ್ಯವಾಗಿದೆ. ಚುನಾವಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದಲ್ಲಿ ಬದಲಾವಣೆಗೊಳ್ಳುತ್ತಿರುತ್ತದೆ. ಆದ್ದರಿಂದ ಈ ಹಿಂದೆ ಇದರ ಬಗ್ಗೆ ತರಬೇತಿ ಪಡೆಯಲಾಗಿದೆ ಎಂದು ನಿರ್ಲಕ್ಷ್ಯ ವಹಿಸುವ ಹಾಗಿಲ್ಲ. ಹಿಂದಿನ ಚುನಾವಣೆ ಹಾಗೂ ಈಗಿನ ಚುನಾವಣೆಯಲ್ಲಿ ತಾಂತ್ರಿಕತೆಯಲ್ಲಿ ಬದಲಾವಣೆಯಾಗಿರುತ್ತದೆ. ಅವೆಲ್ಲವನ್ನು ತಿಳಿದುಕೊಂಡು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ತಿಳಿಸಿದರು.
ಭೇಟಿ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರರಾದ ವಾಸುದೇವ ಸ್ವಾಮಿ, ಡಾ.ಪ್ರದೀಪಕುಮಾರ ಸೇರಿದಂತೆ ಇತರರು ಇದ್ದರು.
WhatsApp Group Join Now
Telegram Group Join Now
Share This Article