ಬಳ್ಳಾರಿ. ಏ. 02: ನಗರದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಆವರಣದಲ್ಲಿ 10 ರಿಂದ 22 ವರ್ಷ ವಯಸ್ಸಿನ ಮಹಿಳಾ ಕ್ರಿಕೆಟ್ ಪಟುಗಳನ್ನು ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಮಹಿಳಾ ಕ್ರಿಕೆಟ್ ಅಕಾಡೆಮಿಯ ಕಾರ್ಯಾಧ್ಯಕ್ಷ ಅಶೋಕ್ ಚೌಹಾಣ್ ತಿಳಿಸಿದರು.
ಈ ಕುರಿತು ಅವರಿಂದ ಮಾಧ್ಯಮದ ಜೊತೆ ಮಾತನಾಡಿ, ಕಳೆದ 15 ವರ್ಷಗಳ ಹಿಂದೆ ಬಿ ಎಚ್ ಎಂ ವಿರೂಪಾಕ್ಷಯ್ಯನವರು ಹುಟ್ಟು ಹಾಕಿದ ಮಹಿಳಾ ಕ್ರಿಕೆಟ್ ಅಕಾಡೆಮಿ ವತಿಯಿಂದ ಈ ಹಿಂದೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ದೇಶದ ಮಹಿಳಾ ಕ್ರಿಕೆಟ್ ನಲ್ಲಿ ಖ್ಯಾತನಾಮರಾದ ವೇದ ಕೃಷ್ಣಮೂರ್ತಿ , ರಾಜೇಶ್ವರಿ ಗಾಯಕ್ವಾಡ್ ಮತ್ತು ನೆರೆಯ ಆಂಧ್ರಪ್ರದೇಶದ ಡಯಾನಾ ಅವರುಗಳು ಬಳ್ಳಾರಿ ಜಿಲ್ಲೆಯ ಕ್ರೀಡಾಪಟುಗಳೊಂದಿಗೆ ಕ್ರಿಕೆಟ್ ಆಟವನ್ನು ಆಡಿ ರಾಷ್ಟ್ರಾದ್ಯಂತ ಹೆಸರುಗಳಿಸಿದ್ದಾರೆ. ಅದೇ ರೀತಿಯಲ್ಲಿ ಇಂದು ಬಳ್ಳಾರಿ ಜಿಲ್ಲಾ ಮಹಿಳಾ ಕ್ರಿಕೆಟ್ ಅಕಾಡೆಮಿ ವತಿಯಿಂದ ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸಲು ಉದ್ದೇಶಿಸಲಾಗಿದ್ದು ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ 10 ರಿಂದ 22 ವರ್ಷಗಳ ವಯೋಮಾನದ ಯುವತಿಯರು ಇದೇ ಏಪ್ರಿಲ್ 5 ರಂದು ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಮೈದಾನದಲ್ಲಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದವರು ಭಾಗವಹಿಸಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ ಎಂದರು.
ಮಹಿಳಾ ಕ್ರಿಕೆಟ್ ಅಕಾಡೆಮಿಯ ಸಂಚಾಲಕರಾದ ಬಿಹೆಚ್ ವಿರೂಪಾಕ್ಷಯ್ಯ ಮಾತನಾಡಿ, ಆಯ್ಕೆಯಾದ ಕ್ರೀಡಾಪಟುಗಳಿಗೆ ಅಕಾಡೆಮಿ ವತಿಯಿಂದ ಕ್ರಿಕೆಟ್ ಡ್ರೆಸ್, ಕಿಟ್ಟನ್ನು ಒದಗಿಸಿ ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲಾ ಪಂದ್ಯಾವಳಿಗಳಲ್ಲಿ ಆಡಿಸಲಾಗುವುದು , ಜೊತೆಗೆ ಆ ಕ್ರೀಡಾಪಟುವನ್ನು ವಿದ್ಯಾಭ್ಯಾಸದ ಜೊತೆ ಜೊತೆಗೆ ಕ್ರಿಕೆಟ್ ಆಟದಲ್ಲೂ ಸಹ ಅವರನ್ನು ತರಬೇತಿ ಗೊಳಿಸಲಾಗುವುದು ಈ ಎಲ್ಲಾ
ಆಯ್ಕೆ ಪ್ರಕ್ರಿಯೆ ಮತ್ತು ಕ್ರಿಕೆಟ್ ಪಂದ್ಯಾವಳಿಯು ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ನಾಗವೇಣಿ ಅವರ ಉಸ್ತುವಾರಿಯಲ್ಲಿ ಜರುಗುವುದು ಎಂದರು.


