ಏಪ್ರಿಲ್ 5 ರಂದು ಸ್ವಾಮಿ ನಿರ್ಭಯಾನಂದ ಸರಸ್ವತಿಗಳವರ ಉಪನ್ಯಾಸ

MK HasiruKranti
ಏಪ್ರಿಲ್ 5 ರಂದು ಸ್ವಾಮಿ ನಿರ್ಭಯಾನಂದ ಸರಸ್ವತಿಗಳವರ ಉಪನ್ಯಾಸ
WhatsApp Group Join Now
Telegram Group Join Now
ಬಳ್ಳಾರಿ, ಏ.03′.m ಇಲ್ಲಿನ ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಪಾಂಚಜನ್ಯ ಸಭಾಂಗಣದಲ್ಲಿ ಏಪ್ರಿಲ್ 5ರಂದು ಸಂಜೆ 6 ಗಂಟೆಗೆ ವಿಜಯಪುರ-ಗದಗ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ
ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರಿಂದ ಸಿಡಿಲ ಸನ್ಯಾಸಿ ಸ್ವಾಮಿ ವಿವೇಕಾನಂದರ
ಜೀವನ ಸಂದೇಶ ಕುರಿತಾದ ವಿವೇಕ ಮಂಟಪ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಜೀರ್ರ ಗುರುಮೂರ್ತಿ ಹಾಗೂ ರಾಮದೂತ ಕಂಪ್ಯೂಟರ್ಸ್ನ ಮಾಲೀಕ ಕೆ.ಎಸ್.ಬಾಬು ಅವರು ಅತಿಥಿಗಳಾಗಿ ಉಪಸ್ಥಿತರಿರುವರು. ಉಪನ್ಯಾಸಕ್ಕೂ ಮುನ್ನ ಬೆಳಗಲ್ಲು ಹನುಮಂತ ಹಾಗೂ ಬೆಳಗಲ್ಲು ರೇಖಾ ಅವರಿಂದ ಭಕ್ತಿ ಸಂಗೀತ
ನಡೆಯಲಿದೆ. ಮುದ್ದಟನೂರು ಎಚ್.ತಿಪ್ಪೇಸ್ವಾಮಿ ಹಾರ್ಮೋನಿಯಂ, ಯೋಗೇಶ್ ಸಂಗನಕಲ್ಲು ತಬಲಾ ಸಾಥ್ ನೀಡುವರು. 2015ರಿಂದ ಸ್ವಾಮಿ ನಿರ್ಭಯಾನಂದ ಶ್ರೀಗಳು ಬಳ್ಳಾರಿಗೆ ಆಗಮಿಸಿ ಉಪನ್ಯಾಸ
ನೀಡುತ್ತಿದ್ದು, ಈ ಭಾಗದ ಭಕ್ತರ ಆಪೇಕ್ಷೆಯ ಮೇರೆಗೆ ಪ್ರತಿ ತಿಂಗಳ ಮೊದಲ ಭಾನುವಾರ
ನಗರದ ಪಾಂಚಜನ್ಯ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳ ಕುರಿತು ವಿವೇಕ ಲೀಲಾಮೃತ’ ಉಪನ್ಯಾಸ ನೀಡಲಿದ್ದಾರೆ ಎಂದು ವಿವೇಕ ಮಂಟಪ ಸಂಯೋಜಕ ಪ್ರಭುದೇವ ಕಪ್ಪಗಲ್ಲು ಅವರು ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article