ಊರಿನ ಮೊದಲ ಲೇಡಿ ಪಿಎಸೈ ಗೆ ಊರಲ್ಲಿ ಸ್ವಾಗತ

Pratibha Boi
ಊರಿನ ಮೊದಲ ಲೇಡಿ ಪಿಎಸೈ ಗೆ ಊರಲ್ಲಿ ಸ್ವಾಗತ
WhatsApp Group Join Now
Telegram Group Join Now

ಮಹಾಲಿಂಗಪುರ : ಸಮೀಪದ ಹಂದಿಗುಂದ ಗ್ರಾಮದ ರೈತನ ಮಗಳು ಭಾಗ್ಯಶ್ರೀ ಸಿದ್ದಪ್ಪ ಚೌಗಲಾ ರಾಜ್ಯ ಪೊಲೀಸ್ ಇಲಾಖೆಯ ಮಹಿಳಾ ಪಿಎಸೈ ಆಗಿ ಆಯ್ಕೆಯಾಗಿ ಹಲವು ತಿಂಗಳುಗಳ ತರಬೇತಿ ಪಡೆದು ಊರಿಗೆ ವಾಪಸಾದ ಸಂಭ್ರಮದಲ್ಲಿ ಊರಿನ ಹನುಮಂತ ದೇವರ ದೇವಸ್ಥಾನದಲ್ಲಿ ಮನೆಯವರು ಮತ್ತು ಅಕ್ಕಪಕ್ಕ ನಿವಾಸಿಗಳು ಊರಿನ ಮೊದಲ ಲೇಡಿ ಪಿಎಸೈ ಗೆ ಭರ್ಜರಿ ಸ್ವಾಗತ ಮಾಡಿದರು. ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ, ಸಿಹಿ ತಿನ್ನಿಸಿ ಅಭಿನಂದನಾಪೂರ್ವಕವಾಗಿ ಬರೆ ಮಾಡಿಕೊಂಡರು. ಮಲ್ಲಪ್ಪ ಚೌಗಲಾ, ಶಾಂತವ್ವ ಚೌಗಲಾ, ಸಾವಿತ್ರಿ ಚೌಗಲಾ, ಧರೆಪ್ಪ ಚೌಗಲಾ, ಶ್ರೀದೇವಿ ಚೌಗಲಾ, ಮಹಾನಂದಾ ಚೌಗಲಾ, ಗಂಗವ್ವ ಚಿಲ್ಲಾಳಶೆಟ್ಟಿ, ಗೀತಾ ಬಂದಿ, ಭಾರತಿ ಪರಮಶೆಟ್ಟಿ, ರೇಣುಕಾ ಸಿದ್ನಾಳ, ನಂದಾ ಗಸ್ತಿ, ಸಂಕಲ್ಪ ಸಿದ್ನಾಳ ಇದ್ದರು.

WhatsApp Group Join Now
Telegram Group Join Now
Share This Article