ಇಂಡಿ: ಸಾಮೂಹಿಕ ವಿವಾಹಗಳಲ್ಲಿ ಮದುಯಾದರೆ ಆರ್ಥಿಕವಾಗಿ ಸದೃಢರಿರಲು ಸಾಧ್ಯವಾಗುತ್ತದೆ. ಹೀಗಾಗಿ ಈಗಿನ ಯುವ ಸಮೂಹ ಹೆಚ್ಚು ಹೆಚ್ಚಾಗಿ ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗಲು ಮುಂದೆ ಬರಬೇಕಿದೆ ಎಂದು ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಗೇಂದ್ರ ಶಿವಾಚಾರ್ಯ ಹೇಳಿದರು.
ಅವರು ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಶ್ರೀ ಅಲ್ಲಮಪ್ರಭು, ಹನುಮ ಜಯಂತಿ ಹಾಗೂ ಗೈಬುಸಾಬ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
‘ಸಾಮೂಹಿಕ ವಿವಾಹದಲ್ಲಿ ಭಾಗಿಯಾದ ನವದಂಪತಿಗಳು ಕನಿಷ್ಠ ನಾಲ್ಕು ಮಕ್ಕಳನ್ನು ಹೇರುವ ಶಪಥ ಮಾಡಬೇಕು. ನಿಮ್ಮ ಉದರದಿಂದ ಜನಿಸಿದ ಒಂದು ಮಗು ದೇಶ ಸೇವೆಗಾಗಿ, ಒಂದು ಮಗು ಧರ್ಮ ರಕ್ಷಣೆಗಾಗಿ, ಇನ್ನೊಂದು ಮಗು ಸಮಾಜದ ರಕ್ಷಣೆಗಾಗಿ ಮತ್ತೊಂದು ಮಗು ನಿಮ್ಮ ರಕ್ಷಣೆಗೆ ಹೀಗೆ ನಾಲ್ಕು ಮಕ್ಕಳನ್ನು ಹೆರಬೇಕು ಎಂದರು.
ಸಾನಿಧ್ಯ ವಹಿಸಿದ್ದ ಇಂಡಿ ಓಂಕಾರ ಆಶ್ರಮದ ಡಾ. ಸ್ವರೂಪಾನಂದ ಸ್ವಾಮೀಜಿ, ಆಳೂರ-ಚಳಕಾಪುರ ಸಿದ್ದಾರೂಢ ಆಶ್ರಮದ ಶಂಕರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಬಸವಂತರಾಯಗೌಡ ಪಾಟೀಲ ಮಾತನಾಡಿ, ಇಂಗಳಗಿ ಒಂದು ಚಿಕ್ಕ ಗ್ರಾಮವಾದರೂ ಸಹಿತ ಹಲವು ವ?ಗಳಿಂದ ಪ್ರತಿ ವ?ವೂ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡು ಬಡ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಲ್ಲಮಪ್ರಭು ದೇವಸ್ಥಾನ ಕಮಿಟಿಯವರು ಕಾರ್ಯನಿರ್ವಹಿಸುತ್ತಿದ್ದು, ಅವರ ಈ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭು ಹೊಸಮನಿ ಮಾತನಾಡಿದರು,
ವೇದಿಕೆಯಲ್ಲಿ ಕಲ್ಲನಗೌಡ ಬಿರಾದಾರ, ವಜ್ರಕಾಂತ ಹೂಗಾರ, ಅಶೋಕ ಕುಲಕರ್ಣಿ, ಯಲ್ಲಪ್ಪ ಸಾತಲಗಾಂವ, ಅರ್ಜುನ ಜಾಧವ, ಗುರುಬಾಳ ಪೂಜಾರಿ, ಜಲದಪ್ಪ ಪೂಜಾರಿ, ಅಶೋಕ ಬಳಬಟ್ಟಿ, ಭೀಮು ರಾಠೋಡ ಇದ್ದರು.
ಜಾತ್ರಾ ಮಹೋತ್ಸವದಲ್ಲಿ ಅಣ್ಣಪ್ಪ ಅಹಿರಸಂಗ, ಸುಭಾಸ ಥೋರಾತ, ಬಸವರಾಜ ಜಾಧವ, ಉಮೇಶ ಬಳಬಟ್ಟಿ, ಭೀಮ ವಾಲೀಕಾರ, ಉಮೇಶ ಚವ್ಹಾಣ, ರಾಜು ಚಾಬುಕಸವಾರ, ಪ್ರಭು ಚಾಬುಕಸವಾರ, ಜಕ್ಕಪ್ಪ ಪೂಜಾರಿ, ಸದಾಶಿವ ಅಹಿರಸಂಗ, ವಿಷ್ಣು ವಾಘಮೋರೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ೭ ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.


