ರಾಯಬಾಗ: ಪರಮಾತ್ಮ ನಮಗಾಗಿ ನಿಸರ್ಗದಲ್ಲಿ ಹಣ್ಣು ಹಂಪಲು, ಬೆಳೆ ಕಾಳುಗಳಂತಹ ಪೌಷ್ಟಿಕ ಆಹಾರ ನೀಡಿದ್ದು, ಅವುಗಳನ್ನು ಸೇವಿಸಿ ಉತ್ತಮ ಆರೋಗ್ಯ ಹೊಂದಬೇಕೆಂದು ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರೇಶ್ವರ ಸ್ವಾಮಿಜೀ ಹೇಳಿದರು.
ಬುಧವಾರ ಸಂಜೆ ತಾಲೂಕಿನ ನಂದಿಕುರಳಿ ಗ್ರಾಮದ ಪಂಚಲಿಂಗೇಶ್ವರ ಮಠದ 39ನೇ ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರವಚನ ನೀಡಿ ಮಾತನಾಡಿದ ಅವರು, ಪಾಶ್ಚಾತ್ಯ ಆಹಾರ ಪದ್ಧತಿಗೆ ಮಾರು ಹೋಗಿರುವ ಇಂದಿನ ಯುವ ಜನಾಂಗ ಅನಾರೋಗ್ಯದಿಂದ ಬಳಲುತ್ತಿರುವುದು ಖೇದಕರ ಎಂದರು.
ಕೇಶ್ವಾನಂದ ಸ್ವಾಮಿಜೀ ಮಾತನಾಡಿ, ಸಾವಯುವ ಗೊಬ್ಬರ ಬಳಸಿ ಬೆಳೆಸಿದ ಆಹಾರ ಸೇವನೆಯಿಂದ ಆರೋಗ್ಯ ಉತ್ತಮವಾಗಿರುತ್ತದೆ. ಪ್ರತಿಯೊಬ್ಬರು ತಮ್ಮ ಆರೋಗ್ಯ ಮತ್ತು ಆಹಾರದ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ಯಶವಂತ ಶಾಸ್ತ್ರೀ, ಶಂಕರಾನಂದ ಸ್ವಾಮಿಜೀ ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.
ರಾತ್ರಿ ದಿಯಾ ಹೆಗ್ಡೆ ಹಾಗೂ ಸುಜಾತಾ ಕಲ್ಮೇಶ ಸಂಗಡಿಗರಿಂದ ಸಂಗೀತ ಜಾತ್ರೆ ಜರುಗಿತು.


