ಕಾಗವಾಡ:ತಾಲ್ಲೂಕಿನ ಮಂಗಸೂಳಿ ಗ್ರಾಮದಲ್ಲಿ ಸೋಮವಾರ ದಿ.30 ರಂದು ರಾತ್ರಿ ಕ್ಷುಲ್ಲಕ ಕಾರಣಕ್ಕೆ ಅಶೋಕ ಮಾರುತಿ ವಡ್ಡರ(23) ಈತನ ಮೇಲೆ ಮೂರು ಜನರು ಯುವಕರು ಸೇರಿ ಬಡಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದ್ದು ಈ ಕುರಿತು ಮಂಗಳವಾರ ದಿ.31 ರಂದು ಕೊಲೆಯಾದ ಯುವಕ ಅಣ್ಣ ಪ್ರಕಾಶ ವಡ್ಡರ ನೀಡಿದ ದೂರಿನ ಮೇರೆಗೆ ಕಾಗವಾಡ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಉಗಾರ ಕೆ ಎಚ್ ಗ್ರಾಮದ ಶಿವಾ ವಡ್ಡರ,ಸಾಗರ ವಡ್ಡರ,ಮತ್ತು ವಿನೋದ ವಡ್ಡರ ಮೂವರು ಆರೋಪಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಕೊಲೆಯಾದ ಯುವಕ ಮತ್ತು ಆರೋಪಿಗಳ ಮಧ್ಯ ಮಂಗಸೂಳಿ ಗ್ರಾಮದಲ್ಲಿ ರಿಕ್ಷಾ ಸರದಿ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ವೈಮನಸ್ಸು ಇದ್ದು ಸೋಮವಾರ ಸಂಜೆ ಇದೆ ವಿಷಯಕ್ಕೆ ಗಲಾಟೆ ನಡೆದಿದ್ದು ಜಗಳ ವಿಕೋಪಕ್ಕೆ ತಿರುಗಿ ಕೊಲೆ ಅಂತ್ಯಗೊಂಡಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ರಾಮರಾಜನ್.ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಆರ್ ಬಿ ಬಸರಗಿ ಹಾಗೂ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ ಮಾರ್ಗದರ್ಶನದಲ್ಲಿ ಘಟನೆ ನಡೆದ ಕೆಲವೇ ಕೆಲವು ಘಂಟೆಗಳಲ್ಲಿ ತನಿಖಾಧಿಕಾರಿಗಳಾದ ಸಿಪಿಐ ಸಂತೋಷ ಹಳ್ಳೂರ,ಪಿಎಸ್ಐ ರಾಘವೇಂದ್ರ ಖೋತ,ಹಾಗೂ ಸಿಬ್ಬಂದಿಗಳು ಆರೋಪಿಗಳ ಪತ್ತೆ ಮಾಡಿದ್ದಾರೆ.