ಗುಡ್ಡಗಾಡು ( ಕ್ರಾಸ್ ಕಂಟ್ರಿ ) ಪಂದ್ಯಾವಳಿಯಲ್ಲಿ ಎಸ್ಐಎಸ್ ವೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ 

Pratibha Boi
ಗುಡ್ಡಗಾಡು ( ಕ್ರಾಸ್ ಕಂಟ್ರಿ ) ಪಂದ್ಯಾವಳಿಯಲ್ಲಿ ಎಸ್ಐಎಸ್ ವೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ 
WhatsApp Group Join Now
Telegram Group Join Now
ರಾಮದುರ್ಗ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ ಫೆ. 16 ಮತ್ತು 17ರಂದು ನಡೆದ ಪುರುಷರ ಗುಡ್ಡಗಾಡು( ಕ್ರಾಸ್ ಕಂಟ್ರಿ) ಪಂದ್ಯಾವಳಿಯಲ್ಲಿ ಇಲ್ಲಿಯ ಶ್ರೀಮತಿ ಈರಮ್ಮ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿದೆ.
ಈ ಕಾಲೇಜಿನ ಬಿಎ  2ನೇ ವರ್ಷದ ವಿದ್ಯಾರ್ಥಿ ಸಂಜೀವ ಫಕೀರಪ್ಪ ಮಜ್ಜಗಿ ಈತನು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗುಡ್ಡಗಾಡು  ( ಕ್ರಾಸ್ ಕಂಟ್ರಿ ) ಕ್ರೀಡಾ ತಂಡಕ್ಕೆ ಆಯ್ಕೆಯಾಗಿದ್ದಾನೆ.
 ಈ ಎಲ್ಲ ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ , ಪ್ರಥಮ ಸ್ಥಾನ ಪಡೆದು ಮತ್ತು ವಿವಿ ತಂಡಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪ್ರಾಚಾರ್ಯ ಡಾ. ಎಂ ಡಿ ಕಮತಗಿ ಹಾಗೂ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
WhatsApp Group Join Now
Telegram Group Join Now
Share This Article