ಬಳ್ಳಾರಿapril.01.:
ಜನಗಣತಿ-2027 ಕಾರ್ಯವು ಇದೇ ಏಪ್ರಿಲ್ 01 ನಿಂದ ಆರಂಭವಾಗಲಿದ್ದು, ಈ ಬಾರಿಯ ಜನಗಣತಿಯು ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯಲಿದೆ. ಹಾಗಾಗಿ ನಾಗರಿಕರಿಗೆ ಆನ್ಲೈನ್ ಮೂಲಕ ಸ್ವಯಂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜನಗಣತಿ ಕಾರ್ಯ ಕುರಿತು ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಜನಗಣತಿ-2027ರ ಕಾರ್ಯವು ದೇಶದ 16ನೇ ಹಾಗೂ ಸ್ವಾತಂತ್ರö್ಯ ನಂತರದ 8ನೇ ಜನಗಣತಿ ಪ್ರಕ್ರಿಯೆಯಾಗಿದೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿಯು ಕೋವಿಡ್ ಕಾರಣದಿಂದ ವಿಳಂಬವಾಗಿದ್ದು, ಈಗ 2027ರಲ್ಲಿ ಆರಂಭವಾಗುತ್ತಿದೆ ಎಂದರು.
ಜನಗಣತಿಯು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, ನಿಖರ ದತ್ತಾಂಶ ಒದಗಿಸುವ ಮೂಲಕ ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
*ಸ್ವಯಂ ನೋಂದಣಿಗೆ ಅವಕಾಶ:*
ಜನಗಣತಿಯ ಮೊದಲ ಹಂತವಾಗಿ ಏಪ್ರಿಲ್ 1 ರಿಂದ ಏಪ್ರಿಲ್ 15ರವರೆಗೆ ಸ್ವಯಂ ನೋಂದಣಿಗೆ ಸಾರ್ವಜನಿಕರು ವೆಬ್ಸೈಟ್ https://se.census.
*ಅಧಿಕಾರಿ- ಸಿಬ್ಬಂದಿ ನೇಮಕ:*
ಜಿಲ್ಲೆಯಲ್ಲಿ ಒಟ್ಟು 2,798 ಗಣತಿದಾರರು ಮತ್ತು 473 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಇವರಲ್ಲಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಸೇರಿದ್ದಾರೆ.
ಅದೇರೀತಿಯಾಗಿ ಜಿಲ್ಲೆಯಲ್ಲಿ ಜನಗಣತಿ ಕಾರ್ಯಕ್ಕೆ ಒಟ್ಟು 17 ಚಾರ್ಜ್ ಆಫೀಸರ್ಗಳನ್ನು ನೇಮಕ ಮಾಡಲಾಗಿದೆ (ಗ್ರಾಮೀಣ ಭಾಗಕ್ಕೆ 12 ಮತ್ತು ನಗರ ಪ್ರದೇಶಕ್ಕೆ 5). ಈಗಾಗಲೇ ಎಲ್ಲಾ ತಾಲೂಕುಗಳಲ್ಲಿ ಗಣತಿದಾರರಿಗೆ ತರಬೇತಿ ನೀಡಲಾಗಿದೆ. 48 ಫೀಲ್ಡ್ ಟ್ರೇನರ್ಗಳು ಮತ್ತು ಮೈಸೂರಿನ ಎಟಿಐ ನಿಂದ ತರಬೇತಿ ಪಡೆದ ನಾಲ್ವರು ಮಾಸ್ಟರ್ ಟ್ರೇನರ್ಗಳು ಈ ತರಬೇತಿಯನ್ನು ನಡೆಸಿಕೊಟ್ಟಿದ್ದಾರೆ ಎಂದರು.
*ತಾAತ್ರಿಕ ಸಿದ್ಧತೆ ಮತ್ತು ವಿಶೇಷತೆ:*
ಈ ಬಾರಿಯ ಜನಗಣತಿಯಲ್ಲಿ ಕಾಗದ ರಹಿತ ವ್ಯವಸ್ಥೆಯಿದ್ದು, ಗಣತಿದಾರರು ಸ್ಮಾರ್ಟ್ಫೋನ್ ಮತ್ತು ಮೊಬೈಲ್ ಆಪ್ಗಳನ್ನು ಬಳಸಿ ಡಿಜಿಟಲ್ ದತ್ತಾಂಶಗಳನ್ನು ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.
*ಬ್ಲಾಕ್ಗಳ ವಿಂಗಡನೆ:*
ಜಿಲ್ಲೆಯಾದ್ಯAತ ಒಟ್ಟು 2,544 ಹೌಸ್ ಲಿಸ್ಟಿಂಗ್ ಬ್ಲಾಕ್ಗಳನ್ನು ಗುರುತಿಸಲಾಗಿದೆ. ಪ್ರತಿ ಬ್ಲಾಕ್ನಲ್ಲಿ ಸುಮಾರು 150 ರಿಂದ 200 ಮನೆಗಳಿರಲಿವೆ. ಪ್ರತಿಯೊಂದು ಬ್ಲಾಕ್ ಅನ್ನು ಗೂಗಲ್ ಮ್ಯಾಪ್ ಮೂಲಕ ಜಿಯೋ ಟ್ಯಾಗ್ ಮಾಡಲಾಗಿದೆ ಎಂದರು.
ಈ ಬಾರಿ ಗಣತಿದಾರರು ಪೇಪರ್ ಬದಲಿಗೆ ಸ್ಮಾರ್ಟ್ಫೋನ್ಗಳ ಮೂಲಕ ಡಿಜಿಟಲ್ ದತ್ತಾಂಶ ಸಂಗ್ರಹಿಸಲಿದ್ದಾರೆ. ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತ್ಯೇಕವಾಗಿ ‘ಮಲ್ಟಿ ಟಾಸ್ಕಿಂಗ್ ಸ್ಟಾಫ್’ ಮತ್ತು ಸ್ಟೇಟ್ ಕೋ-ಆರ್ಡಿನೇಟರ್ಗಳ ತಂಡ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ನಿಗದಿತ ಸಮಯದಲ್ಲಿ ಅಧಿಕೃತ ವೆಬ್ಸೈಟ್ ಮೂಲಕ ಅಥವಾ ಮನೆಗೆ ಬರುವ ಗಣತಿದಾರರಿಗೆ ನಿಖರ ಮಾಹಿತಿ ನೀಡುವ ಮೂಲಕ ದೇಶದ ಈ ಮಹತ್ವದ ಕಾರ್ಯಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಯವರು ವಿನಂತಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್ ಹಾಗೂ ಇತರರಿದ್ದರು.
ಡಿಜಿಟಲ್ ಜನಗಣತಿ 2027; ಏಪ್ರಿಲ್ 1 ರಿಂದ ಸ್ವಯಂ ನೋಂದಣಿಗೆ ಅವಕಾಶ- ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ


