ಸಮಾಜಮುಖಿ ಪ್ರಕಾಶನದ 2025ನೇ ಸಾಲಿನ ಕಥಾಸ್ಪರ್ಧೆ ಫಲಿತಾಂಶ

MK HasiruKranti
ಸಮಾಜಮುಖಿ ಪ್ರಕಾಶನದ 2025ನೇ ಸಾಲಿನ ಕಥಾಸ್ಪರ್ಧೆ ಫಲಿತಾಂಶ
WhatsApp Group Join Now
Telegram Group Join Now
ಬಳ್ಳಾರಿ,01.: ಜಿಲ್ಲೆಯವರೇ ಆದ ಚಂದ್ರಕಾಂತ ವಡ್ಡು ಅವರ ಸಮಾಜಮುಖಿ ಪ್ರಕಾಶನವು 2025ನೇ ಸಾಲಿನ ವಾರ್ಷಿಕ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದ್ದು. ಉಡುಪಿಯ ಶೀಲಾ ಪೈ- ‘ಗ್ಲೋರಿಯೊಸಾಸುಪರ್ಬ’, ಮೈಸೂರಿನ ಎಂ.ಎಸ್.ಶೇಖರ್- ‘ದೊಡೈರೆ ಬೇಟೆ’, ಬೆಂಗಳೂರಿನ ಜಯರಾಮಾಚಾರಿ- ‘ಸಾಕವ್ವಳ ರಸ್ತೆ ಪುರಾಣ’, ಬೆಂಗಳೂರಿನ ಮಂಜುನಾಥ ನಾಯ್- ‘ಕಾಫಿ ತೋಟದ ಆ ಕಾರ್ಮಿಕನೂ, ಕಬ್ಬೆಕ್ಕಿನ ಕಬಾಬೂ’, ಮುಂಬೈನ ದೇವೇಂದ್ರ ಅಬ್ಬಿಗೇರಿ- ‘ಮೋರ್ಸ್ ಕೋಡ್’ ಅವರ ಕಥೆಗಳು ಆಯ್ಕೆಯಾಗಿವೆ.
ಈ 5 ಕಥೆಗಳಿಗೆ ತಲಾ 5 ಸಾವಿರ ನಗದು ಬಹುಮಾನ ನೀಡಲಿದೆ. ಎಸ್. ರಮ್ಯಾ, ಎಸ್.ಹರೀಶ್, ಟಿ.ಎಂ.ರಮೇಶ್, ಗೌರಿಚಂದ್ರ ಕೇಸರಿ, ನಿರ್ಮಲಾ ಸುರತ್ಕಲ್, ಜಿ.ಪ್ರವೀಣ್ ಕುಮಾರ್, ಸಂತೇಬೆನ್ನೂರು ಫೈಜಟ್ಟ ರಾಜ್, ಪಾಪುಗುರು, ಹನುಮಂತ ಹೆರೂರು ಮತ್ತು ಭೋಜರಾಜ ಎಚ್.ಸೊಪ್ಪಿಮಠ ಅವರ ಕಥೆಗಳು ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದು ಸಮಾಜ ಮುಖಿ ವಾರ್ಷಿಕ ಕಥಾ ಸಂಕಲನಕ್ಕೆ ಆಯ್ಕೆಯಾಗಿವೆ ಎಂದು ಸಮಾಜಮುಖಿ ಪ್ರಕಾಶನದ ಚಂದ್ರಕಾಂತ ವಡ್ಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article