ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ ಮದಿರೆ, ಕೋಳೂರು ಗ್ರಾಮಸ್ಥರು

MK HasiruKranti
ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ ಮದಿರೆ, ಕೋಳೂರು ಗ್ರಾಮಸ್ಥರು
WhatsApp Group Join Now
Telegram Group Join Now
ಬಳ್ಳಾರಿ,01:  ಎಐಡಿಎಸ್ಓ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ  ಮದಿರೆ ಮತ್ತು ಕೋಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು ಉರ್ದು ಕಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚಿ ಕೊಳೋರು ಪ್ರೌಢಶಾಲೆಗೆ ಮ್ಯಾಗ್ನೆಟ್ ಮಾಡುವುದನ್ನು ವಿರೋಧಿಸಿ ಎರಡು  ಗ್ರಾಮಗಳ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಗ್ರಾಮಸ್ಥರು ಕೆ ಪಿ ಎಸ್ ಮ್ಯಾಗ್ನೆಟ್ ಯೋಜನೆಯ ಅಡಿಯಲ್ಲಿ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ನೀತಿಯ ವಿರುದ್ಧ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷರು ಶಾಂತಿ ಮಾತನಾಡಿ, ಸಾವಿತ್ರಿಬಾಯಿ- ಜ್ಯೋತಿಬಾ ಫುಲೆಯವರ ಹೋರಾಟ ಮತ್ತು ಪರಿಶ್ರಮದ ಫಲವಾಗಿ ಇಂದು ಹಳ್ಳಿಗಳಿಗೆ ಸರ್ಕಾರಿ ಶಾಲೆಗಳು ಆರಂಭವಾಗಿವೆ. ಈ ಎಲ್ಲರ ಮಹಾತ್ಮರ ಆಶಯಗಳನ್ನು ಗಾಳಿಗೆ ತೂರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ್ ಅವರು ಮಾತನಾಡುತ್ತಾ ರಾಜ್ಯದಾದ್ಯಂತ ಈ ಯೋಜನೆ ವಿರುದ್ದ ಜನ ಆಕ್ರೋಶ ಇದ್ದರೂ, ಕಿಂಚಿತ್ತು ಬೆಲೆ ಇಲ್ಲದೆ  ಈ ಭಾಗದ ಜನಗಳ ಅನುಕೂಲಕ್ಕೆ ಇರುವಂತ ಏಏಖಆಃ  ನಿಧಿಯನ್ನು  ಶಾಲೆಗಳನ್ನು ಮುಚ್ಚಲು ಬಳಸಿಕೊಳ್ಳುತ್ತಿರುವುದು ಅತ್ಯಂತ ಜನ ವಿರೋಧಿ ನೀತಿಯಾಗಿದೆ ಎಂದು ಅವರು ಕಟುವಾಗಿ ಟೀಕಿಸಿದರು.
ಕೆ.ಕೆ.ಆರ್.ಡಿ.ಬಿ ಕಾರ್ಮಿಕ ಸಂಘಟನೆಯ ಜಿಲ್ಲಾ ಮುಖಂಡರಾದ  ಪ್ರಮೋದ್ ಅವರು ಮಾತನಾಡುತ್ತಾ  6ನೇ ತರಗತಿಯಿಂದಲೇ ಕೆಪಿಎಸ್ ಶಾಲೆಯಲ್ಲಿ ಟೈಲರಿಂಗ್ ಮಾಡುವುದು, ಅಡಿಕೆ ಸುಲಿಯುವುದು ಸೇರಿದಂತೆ ಇತರೆ ಕಸುಬುಗಳನ್ನು ಕಲಿಸುವುದಾಗಿ ಸರ್ಕಾರ ಹೇಳಿದೆ. ಸಮಾಜದ ತಳಸಮುದಾಯದ ಮಕ್ಕಳ ವಿದ್ಯೆ ಕಸಿದು ಕೂಲಿಗೆ ಕಳಿಸುವ ಸರ್ಕಾರದ ಹುನ್ನಾರವನ್ನು ನಾವು ಒಪ್ಪುವುದಿಲ್ಲ. ಈ ಯೋಜನೆ ರದ್ದಾಗವವರೆಗೂ ನಿರಂತರವಾಗಿ ಹೋರಾಟ ನಡೆಸುತ್ತೇವೆ” ಎಂದು ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರು-ಕಾರ್ಮಿಕರು-ದಿನಗೂಲಿ ಕೆಲಸ ಮಾಡುವವರು ತಮ್ಮ ಮಕ್ಕಳನ್ನು ಊರಿನಲ್ಲೇ ಸರ್ಕಾರಿ ಶಾಲೆ ಇರುವುದರಿಂದ ಮಕ್ಕಳನ್ನು ನೆಮ್ಮದಿಯಿಂದ ಶಾಲೆಗಳಿಗೆ ಕಳುಹಿಸಲಾಗುತ್ತಿದೆ, ಊರಿನಲ್ಲಿರುವ ಸರ್ಕಾರಿ ಶಾಲೆ ಮುಚ್ಚಿದರೆ  3ಕೀ.ಮೀ ರಿಂದ 5 ಕೀ.ಮೀ ದೂರ ಇರುವ ಶಾಲೆಗೆ  ನಮ್ಮ ಮಕ್ಕಳನ್ನು  ಕಳುಹಿಸಲು ಸಾಧ್ಯವಿಲ್ಲ ದೂರದಲ್ಲಿರುವ ಕೆಪಿಎಸ್ ಶಾಲೆಗೆ ಮಕ್ಕಳನ್ನು ಹೇಗೆ ಕಳಿಸುವುದು ದಾರಿಯಲ್ಲಿ ಭಾರಿ ಪ್ರಮಾಣದಲ್ಲಿ ಲಾರಿ,ಬಸ್ಸು ಗಳ ಓಡಾಟ ಇರುತ್ತದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು
ಈ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತು ಕೊಂಡು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆಗಳ ಮುಚ್ಚವುದು ಕೈಬಿಡಬೇಕೆಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ  ಎಐಯುಟಿಯುಸಿ  ಕಾರ್ಮಿಕ ಸಂಘಟನೆಯ ಮುಖಂಡರಾದ ,  ಜಿ ಸುರೇಶ್, ಎಐಕೆಕೆಎಂಎಸ್ ರೈತ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರಾಜ , ಜಿಲ್ಲಾಧ್ಯಕ್ಷರು ಗೋವಿಂದ್, ಎಐಡಿವೈಓ ಯುವಜನ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಜಗದೀಶ್, ಎಐಎಂಎಸ್ಎಸ್ ಮಹಿಳಾ ಸಂಘಟನೆ ಜಿಲ್ಲಾ ಸಮಿತಿಯ ಸದಸ್ಯರಾದ, ವಿದ್ಯಾ ಮತ್ತು  ಎಐಎಸ್ಇಸಿ  ಜಿಲ್ಲಾ ಮುಖಂಡರಾದ ನಾಗರತ್ನ  ಹಾಗೂ ಗ್ರಾಮಸ್ಥರಾದ , ನಾಗರಾಜ್, ಎನ್ ಕೆಂಚ ಮಾಳಪ್ಪ, ದೊಡ್ಡಬಸಪ್ಪ ಡಿ.ಕೆ. ಗಾದಿಲಿಂಗಪ್ಪ, ಹುಲಿಗೆಮ್ಮ, ಲಕ್ಷ್ಮಿ, ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article