ರಂಜಿಸಿದ ಶ್ರೀನಿವಾಸ ಕಲ್ಯಾಣ ನಾಟಕ 

Hasiru Kranti
ರಂಜಿಸಿದ ಶ್ರೀನಿವಾಸ ಕಲ್ಯಾಣ ನಾಟಕ 
WhatsApp Group Join Now
Telegram Group Join Now
ಬಳ್ಳಾರಿ.31.. ಶ್ರೀರಾಮ ನವಮಿ ಹಬ್ಬದ ಅಂಗವಾಗಿ ಶಿರೆಕೂಳ ರಾಮದೇವರು, ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ತುಂಗ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಶ್ರೀಜ ನಿರ್ದೇಶನದ ಶ್ರೀನಿವಾಸ ಕಲ್ಯಾಣ ನಾಟಕದಲ್ಲಿ  ಕಲಾವಿದರು ಮನೋಜ್ಞವಾಗಿ ಪ್ರದರ್ಶನ ಮಾಡಿದರು.
ದೇವಸ್ಥಾನದ ಅರ್ಚಕರು ಪ್ರವೀಣ್ ಆಚಾರ್, ಶ್ರೀನಿವಾಸ್ ಆಚಾರ್..  ಕಲಾವಿದರಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ರಂಗ ಕಲಾವಿದ ನಾಗಭೂಷಣ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೃತ್ಯ ಗುರುಗಳು ಶ್ರೀಜ, ಪರಿಮಳ, ಗಾಯಕರು ಶ್ರೀನಿವಾಸ್, ರಘುನಂದನ್, ಊರಿನ ಮುಖಂಡರು ನಾಗರಾಜರಾವ್, ಶಿವರುದ್ರಯ್ಯ ಸ್ವಾಮಿ, ತನ್ಮಯಿ,ಅಮೃತ, ದೀಕ್ಷಾ, ಗುಣಸಿಂದು, ಸೋನು, ರಾಧಾ ಕೃಷ್ಣ, ವಿದ್ಯಾ, ಪ್ರೀತಿಕಾ, ದೀಪ್ತಿ, ಬಾಂದವಿ, ಶೈನು, ಪ್ರೀತಿ , ಶಾನ್ವಿ ದೇವಸ್ಥಾನದ ಅರ್ಚಕರು, ಮುಂತಾದವರು ಇದ್ದರು.
WhatsApp Group Join Now
Telegram Group Join Now
Share This Article