ಚಟಗಳಿಂದ ದೂರವಿದ್ದು ಸದೃಢ ಆರೋಗ್ಯ ಕಾಪಾಡಿಕೊಳ್ಳಿ : ಪಟ್ಟಣಶೆಟ್ಟಿ

MK HasiruKranti
ಚಟಗಳಿಂದ ದೂರವಿದ್ದು ಸದೃಢ ಆರೋಗ್ಯ ಕಾಪಾಡಿಕೊಳ್ಳಿ : ಪಟ್ಟಣಶೆಟ್ಟಿ
WhatsApp Group Join Now
Telegram Group Join Now

ಹುನಗುಂದ; ಮಾದಕ ವಸ್ತುಗಳಿಂದ ದೂರವಿರಿ ಯುವ ಜನತೆ ದುಶ್ಚಟಗಳಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಪ್ರೊ|ಸಂಗಮೇಶ್ ಪಟ್ಟಣಶೆಟ್ಟಿ ಹೇಳಿದರು.
ನಗರದ ಶ್ರೀಮತಿ ಗೌರಮ್ಮ ಚರಂತಿಮಠ ವಿಜ್ಞಾನ ಮಹಾವಿದ್ಯಾಲಯದ ಅವರು ಹೆರೂರು ಗ್ರಾಮದಲ್ಲಿ ನಶಮುಕ್ತ ದಿನಾಚರಣೆಯ ಆಚಣೆ ಕಾರ್‍ಯಕ್ರಮದಲ್ಲಿ ಅವರು ಪಾಲ್ಗೊಂಡು ನಶಮುಕ್ತ ವಸ್ತುಗಳಿಂದ ದೂರವಿರಬೇಕು ಹಾಗೂ ಯುವ ಜನತೆ ಚಟಗಳಿಂದ ದೂರವಿದ್ದು ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಾಂಶುಪಾಲ ಸಂಗಮೇಶ್ ಪಟ್ಟಣಶೆಟ್ಟಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಡಾ. ಮಹಾಂತೇಶ್, ಎಸ್ .ಕಡಪಟ್ಟಿ. ಕಾರ್ಯದರ್ಶಿಗಳು ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ ಹುನಗುಂದ ಅವರು ಕೂಡ ಕಾರ್ಯಕ್ರಮವನ್ನು ಉದ್ದೇಶಿಸಿ ನಶೆ ಮುಕ್ತ ಭಾರತ ಹಾಗೂ ದುಶ್ಚಟಗಳಿಂದ ದೂರ ಇರುವ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದರು .
ಹುನಗುಂದದ ಶ್ರೀಮತಿ ಗೌರಮ್ಮ ಚರಂತಿಮಠ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗ್ರಾಮಸ್ಥರಲ್ಲಿ ನಶೆ ಮುಕ್ತ ಭಾರತದ ಬಗ್ಗೆ ಅರಿವು ಮೂಡಿಸಲು “ನಶೆ ಮುಕ್ತ ಭಾರತ” ಅರಿವು ಮತ್ತು ಜಾಗೃತಿ ಕುರಿತು ಕಿರು ನಾಟಕ ಪ್ರದರ್ಶನ ಮಾಡಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗ್ರಾಮದ ಹಿರಿಯರಾದ ಶ್ರೀ ಶಿವಪುತ್ರ ಕಪ್ಪರಮಠ, ಶ್ರೀ. ಡಿ. ಎಚ್. ನಾಡಗೌಡರ, ಶ್ರೀ ಆನಂದ್ ಸ್ವಾಮಿ ಹಿರೇಮಠ ಸ್ವಾಮಿಗಳು, ಶ್ರೀ ಬಸವರಾಜ ಪಟ್ಟಣಶೆಟ್ಟಿ ಗಣ್ಯಮಾನ್ಯರು. ಗ್ರಾಮಸ್ಥರು ಹಾಗೂ ನಸಿಂಗ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article