ಹಸಿರು ಕ್ರಾಂತಿ ವರದಿ, ಜಮಖಂಡಿ; ದೇಶದ ಸ್ವತಂತ್ಯ್ರಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಪದ್ಮವತಿಬಾಯಿ ಅತ್ಯಂತ ಕಷ್ಟದ ಜೀವನವನ್ನು ನಡೆಸಿದರು. ಗಂಡನ ಮನೆಯ ನೂರಾರು ಎಕರೆ ಭೂಮಿಯನ್ನು ಕಳೆದು ಕೊಂಡು,ವಿದ್ಯುತ್‌, ನೀರು, ಶೌಚ್ಯಾಲಯ ವಿಲ್ಲದ ಅತ್ಯಂತ ಕಿರಿದಾದ ಕೊಣೆಯಲ್ಲಿ ವಾಸವಿದ್ದು ತಮ್ಮ ಕೊನೆಯ ಜೀವನವನ್ನು ಕಳೆದರು ಎಂದು ಸ್ವತಂತ್ಯ್ರ ಸೇನಾನಿ ಪದ್ಮಾವತಿಬಾಯಿ ಅವರ ಮೊಮ್ಮಗ, ವಿಶ್ರಾಂತ ಸಂಪಾದಕ, ಮನೋಜ ಪಾಟೀಲ ಹೇಳಿದರು. ನಗರದ ಬಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸ್ವತಂತ್ಯ್ರ ಸೇನಾನಿ ಪದ್ಮಾವತಿ ವಾಮನರಾವ ದೇಸಾಯಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಂಡ,ವಾಮನರಾವ, ಮಗ ಅರವಿಂದ ,ಮಗಳು ಲೀಲಾಬಾಯಿ ಅವರ ಗಂಡ ಜೀವರಾಯರ ನಿಧನ ದಿಂದ ಸಾಕಷ್ಟು ಪೆಟ್ಟು ಅನುಭವಿಸಿದ್ದ ಅವರು ಕೊನೆಯ ಘಳಿಗೆಯ ವರೆಗೆ ಸಮಾಜ ಸೇವೆ ಮಾಡಿದರು. ಕೂಲಿಕಾರರು. ಬಡವರ ಮಕ್ಕಳಿಗೆ ಶಿಕ್ಷಣ ನೀಡಲು ಶ್ರಮಿಸಿದರು. ಸರ್ಕಾರ ದಿಂದ ದೊರೆಯುವ 50 ರೂಗಳ ಪಿಂಚಣಿ ಪಡೆದು ನಿಸ್ವರ್ಥ ಜೀವನ ನಡೆಸಿದರು ಎಂದು ತಿಳಿಸಿದರು.

ಜಮಖಂಡಿಯಲ್ಲಿ ಪೇಶ್ವಾಯಿ ಸಂಸ್ಥಾನ ವಿದ್ದುದರಿಂದ ಎಲ್ಲ ಕಾಗದ ಪತ್ರಗಳು, ದಾಖಲೆಗಳು ಮಹರಾಷ್ಟ್ರದ ಪುಣೆಯಲ್ಲಿವೆ. ಕರ್ನಾಟಕದಲ್ಲಿ ಪೇಶ್ವೆಗಳ ಆಡಳಿತದ ಯಾವ ದಾಖಲೆಗಳು ಸಿಕ್ಕುತ್ತಿಲ್ಲ. ಮೊದಲು ಕನ್ನಡಕ್ಕೆ ಪ್ರಾಶಸ್ಥ್ಯ ವಿರಲಿಲ್ಲ ಮರಾಠಿ ಪ್ರಭಾವವಿತ್ತು ಎಂದು ತಿಳಿಸಿದರು. ಈಗಲೂ ಪೇಶ್ವಾಯಿ ಸಂಸ್ಥಾನಗಳ ದಾಖಲೆಗಳು ಬೇಕಾದಲ್ಲಿ ಪುಣೆಗೆ ಹೋಗಬೇಕಾದ ಅನಿವಾರ್ಯತೆಯಿದೆ. ದಾಖಲೆಗಳಿಲ್ಲದ ಕಾರಣ ಅನಂತರಾವ ಸಾಬಡೆ, ಮರಣ ಸೇರಿದಂತೆ ಹಲವು ಘಟನೆಗಳು ಇಂದಿಗೂ ನಿಗೂಢವಾಗಿದೆ ಎಂದು ತಿಳಿಸದರು. ಮಹಿಳಾವಿವಿಯ ವಿಶ್ರಾಂತ ಕುಲಪತಿ ಮೀನಾ ಚಂದಾವರಕರ ಗ್ರಂಥ ಬಿಡುಗಡೆ ಗೊಳಿಸಿ ಮಾತನಾಡಿದರು, ಮಹಿಳೆಯರು ಹೊರಗೆ ಬಾರದ ದಿನ ಮಾನಗಳಲ್ಲಿ ಪದ್ಮಾವತಿಬಾಯಿ ಅವರು ಸ್ವತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವ ಮೂಲಕದೇಶ ಸೇವೆ ಮಾಡಿದ್ದಾರೆ ಅವರ ಹೋರಾಟದ ಗಾಥೆಯನ್ನು ವಿಶ್ವಕ್ಕೆ ಪರಿಚಯಿಸಿದ ಶ್ರೇಯಸ್ಸು ಡಾ.ಬಾಂಗಿ ಅವರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯ ಪಟ್ಟರು, ದೇಶಕ್ಕಾಗಿ ದುಡಿದ ಅನೇಕ ಮಹಾನುಭಾವರ ಕುರಿತು ಇನ್ನಷ್ಟು ಸಂಶೋಧನೆಗಳಾಗಬೇಕು ಇತಿಹಾಸ ಮುಂದಿನ ಪೀಳಿಗೆಗೆ ತಲುಪಬೇಕು ಸಾಧನೆ ಸದ್ದು ಮಾಡಬೇಕು ಎಂಬಂತೆ ನಮ್ಮ ಸಂಶೋಧನೆಗಳು ಸದ್ದು ಮಾಡಬೇಕು ಎಂದು ತಿಳಿಸಿದರು.

ಬಾಗಲಕೊಟೆಯ ಹಿಂದುಸ್ತಾನ ಸೇವಾದಳ ಟ್ರಸ್ಟನ ವ್ಯವಸ್ಥಾಪಕ ಶ್ರೀನಿವಾಸ ಛಬ್ಬಿ ಮಾತನಾಡಿ ಸ್ವತಂತ್ಯ್ರ ಹೋರಾಟದಲ್ಲಿ ಸೇವಾ ದಳದ ಪಾತ್ರ ಬಹಳ ಮುಖ್ಯವಾಗಿತ್ತು. ಭಗತ್‌ ಸಿಂಗ್‌ ರೊಂದಿಗೆ ಗಲ್ಲು ಅನುಭವಿಸಿದ್ದ ರಾಜಗುರು ಅವರು ಬಾಗಲಕೊಟೆ ಸೇವಾದಳದ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದರು. ಆರ್‌ಎಸ್‌ಎಸ್‌ನ ಸಂಸ್ಥಾಪಕರು ಸಹ ಮೊದಲು ಸೇವಾ ದಳ ದಲ್ಲಿದ್ದರು ಎಂದು ತಿಳಿಸಿದರು. ದೇಶದ ಹೋರಾಟಗಾರರನ್ನು ಗುರುತಿಸಿ ಸಮಾಜಕ್ಕೆ ತಿಳಿಸುವದು ಟ್ರಸ್ಟನ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಗ್ರಂಥ ಲೇಖಕ ಡಾ.ತಾತಾಸಾಹೇಬ್‌ ಬಾಂಗಿ ಮಾತನಾಡ ಪದ್ಮಾವತಿಬಾಯಿ ಅವರ ಚರಿತ್ರೆ ಎಲ್ಲ ಭಾಷೆಗಳಿಗೆ ತರ್ಜುಮೆ ಆಗಬೇಕು, ಅವರ ಗೌರವಾರ್ಥ ಪೋಸ್ಟ ಸ್ಟ್ಯಾಂಪ್‌ಗಳನ್ನು ಬಿಡುಗಡೆ ಗೊಳಿಸಬೇಕು ಹಾಗೂ ಪಠ್ಯದಲ್ಲಿ ಅವರ ಚರಿತ್ರೆ ಸೇರಬೇಕು, ಜಮಖಂಡಿಯ ವಿಶ್ವವಿದ್ಯಾಲಯದಲ್ಲಿ ಅವರ ಹೆಸರಿನ ಪೀಠ ಸ್ಥಾಪನೆ ಮಾಡುವ ಮೂಲಕ ಸ್ವತಂತ್ಯ್ರಹೋರಾಟಗಾರರ ಬಗ್ಗೆ ಸಂಶೋಧನೆಗಳಾಗಬೇಕೆಂಬ ಆಸೇ ಇದೆ ಎಂದು ತಿಳಿಸಿದರು. ವಿಮರ್ಶಕ ವೈ.ಎಂ.ಯಾಕೊಳ್ಳಿ ಕೃತಿ ಪರಿಚಯ ಮಾಡಿಕೊಟ್ಟರು. ಪದ್ಮಾವತಿಬಾಯಿ ಅವರ ಕೊನೆಯ ದಿನಗಳಲ್ಲಿ ಅವರಿಗೆ ಸಹಕಾರ ಮಾಡಿದ ಡಾ. ಪ್ರಹಲ್ಲಾದ.ದಾ.ಹುಲ್ಯಾಳ ಕರ,ಡಾ, ಪ್ರಕಾಶ.ಬಾ.ಹೊನವಾಡ ಅವರನ್ನು ಸನ್ಮಾನಿಸಲಾಯಿತು. ಸಿದ್ದಮುತ್ಯಾ ಸಾನಿಧ್ಯ ವಹಿಸಿದ್ದರು. ಸಾಹಿತಿ ಮಹದೇವ ಬಸರಕೊಡ, ಜಿಲ್ಲಾ ನೋಂದಣಾಧಿಕಾರಿ ಸವಿತಾ ಲಕ್ಷ್ಮೀ, ಸಾಹಿತಿ ಕೆ..ಚನ್ನಪ್ಪ. ವಿಶ್ರಾಂತ ಸುಬೇದಾರ ರಾಮು, ಗೃಹರಕ್ಷಕ ದಳದ ಡಾ.ಎಚ್‌.ಬಿ.ಚೌಧರಿ, ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಬಸವ ಸಮಿತಿ ಅದ್ಯಕ್ಷ ಕಾಡುಮಾಳಿ, ಮುಂತಾದವರು ವೇದಿಕೆಯಲ್ಲಿದ್ದರು. ತಾಲುಕು ಕಸಾಪ ಅಧ್ಯಕ್ಷ ಸಂತೋಷ ತಳಕೇರಿ ಸ್ವಾಗತಿಸಿದರು. ಪ್ರೊ.ವಿನಾಯಕ ಕುಲಕರ್ಣಿ, ಸರಿತಾ ಶಿರಗುಪ್ಪಿ ಕಾರ್ಯಕ್ರಮ ನಿರೂಪಿಸಿದರು.