ಇಂಡಿ: ಇಂದು ಅಳಿವಿನ ಅಂಚಿನಲ್ಲಿರುವ ಪಕ್ಷಿ, ಪ್ರಾಣಿ ಸಂಕುಲ ಉಳಿಯಬೇಕಾದರೆ ಅವುಗಳಿಗೆ ಮುಖ್ಯವಾಗಿ ಕುಡಿಯಲು ನೀರು ಬೇಕು. ಹಾಗಾಗಿ ಹಕ್ಕಿಗೊಂದು ಹನಿ ನೀರು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಪ್ರತಿಯೊಬ್ಬರು ಸ್ವ ಇಚ್ಛೆಯಿಂದ ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ಅಳವಡಿಸಿ ಅಳವಿನ ಅಂಚಿನಲ್ಲಿರುವ ಪಕ್ಷೀಗಳ ಉಳಿವಿಗಾಗಿ ಶ್ರಮಿಸಬೇಕು ಎಂದು ಶಾಸಕರ ಸುಪತ್ರ ಯಶವಂತರಾಯಗೌಡ ವ್ಹಿ ಪಾಟೀಲ ಫೌಂಡೆಶನ್ ಅಧ್ಯಕ್ಷ ವಿಠ್ಠಲಗೌಡ ಪಾಟೀಲ ಹೇಳಿದರು.
ನಗರದ ಸಿಂದಗಿ ರಸ್ತೆಯ ವಾರ್ಡ ೧೫ರ ಶ್ರೀ ಸಿದ್ದೇಶ್ವರ ಉದ್ಯಾನವನದಲ್ಲಿ ಶ್ರೀ ಯಶವಂತರಾಯಗೌಡ ವ್ಹಿ ಪಾಟೀಲ ಫೌಂಡೆಶನ್(ರಿ) ಪಡನೂರ ವತಿಯಿಂದ ಹಮ್ಮಿಕೊಂಡ ಹಕ್ಕಿಗೊಂದು ಹನಿ ನೀರು ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ಬೀರು ಬೇಸಿಗೆ ಕಾಲವಾಗಿದ್ದು ಪಕ್ಷೀಗಳಿಗೆ ಕುಡಿಯಲು ನೀರು ಅವಶ್ಯಕವಾಗಿರುತ್ತದೆ. ಆ ನಿಟ್ಟಿನಲ್ಲಿ ತಮ್ಮ ತಮ್ಮ ಮನೆ ಕಂಪೌಡ ಆವರಣ, ಗೀಡ ಮರಗಳಿಗೆ ನೀರಿನ ತೊಟ್ಟಿಗಳನ್ನು ಅಳವಡಿಸಿ ಪಕ್ಷೀಗಳ ಉಳಿವಿಗಾಗಿ ಕೈ ಜೊಡಿಸಬೇಕು ಎಂದು ಮನವಿ ಮಾಡಿದರು.
ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಆರ್‌ಎಫ್‌ಒ ಸಂಗಾಲಕ, ಅರಣ್ಯಾಧಿಕಾರಿ ಮಂಜುನಾಥ ಧೂಳೆ, ಜಾವಿಧ ಮೋಮಿನ, ಧನರಾಜ ಮುಜಗೊಂಡ, ಅವಿನಾಶ ಬಗಲಿ ಮುಂತಾದವರು ಮಾತನಾಡಿದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಅಜೀತ ಧನಶೆಟ್ಟಿ, ಪೌರಾಯುಕ್ತ ಶಿವಾನಂದ ಪೂಜಾರಿ, ನೀಲಕಂಠಗೌಡ ಪಾಟೀಲ, ಸಣ್ಣಪ್ಪ ತಳವಾರ, ಸತೀಶ ಕುಂಬಾರ, ಸುಧೀರ ಕರಕಟ್ಟಿ, ಧರ್ಮಸ್ಥಳದ ಯೋಜನಾಧಿಕಾರಿ ನಟರಾಜ, ಸತೀಶ ಹತಿ, ಮಹೇಶ ಹೊನ್ನಬಿಂದಗಿ, ಸಂತೋಷ ಪರಶೆನ್ನವರ, ಪುಂಡಲಿಕ ಹೂಗಾರ, ಅಶೋಕ ಕನ್ನೂರ, ಜಟ್ಟೆಪ್ಪ ಹುನ್ನೂರ, ಅಕ್ಷಯ ಮುಜಗೊಂಡ, ಶಿವು ಬಿಸನಾಳ, ಜ್ಯೋತಿ ವಂದಾಲ, ರಾಹುಲ ಮಸಳಿ, ಪ್ರೀತು ದಶವಂತ, ವಿನೋದ ಶಹಾಪೂರ ಸೇರಿದಂತೆ ಅನೆಕರು ಉಪಸ್ಥಿತರಿದ್ದರು.
ಪೋಟೊ ಕ್ಯಾಪ್ಸನ್ ೨೯ ಇಂಡಿ ೦೩: ನಗರದ ಸಿಂದಗಿ ರಸ್ತೆಯ ವಾರ್ಡ ೧೫ರ ಶ್ರೀ ಸಿದ್ದೇಶ್ವರ ಉದ್ಯಾನವನದಲ್ಲಿ ಶ್ರೀ ಯಶವಂತರಾಯಗೌಡ ವ್ಹಿ ಪಾಟೀಲ ಫೌಂಡೆಶನ್(ರಿ) ಪಡನೂರ ವತಿಯಿಂದ ಹಮ್ಮಿಕೊಂಡ ಹಕ್ಕಿಗೊಂದು ಹನಿ ನೀರು ಅಭಿಯಾನ ಕಾರ್ಯಕ್ರಮಕ್ಕೆ ಯಶವಂತರಾಯಗೌಡ ವ್ಹಿ ಪಾಟೀಲ ಫೌಂಡೆಶನ್ ಅಧ್ಯಕ್ಷ ವಿಠ್ಠಲಗೌಡ ಪಾಟೀಲ ಚಾಲನೆ ನೀಡಿ ಮಾತನಾಡಿದರು.


