ರಾಷ್ಟ್ರಪತಿ ಪದಕ ವಿಜೇತ ಡಿಸಿಪಿ ರಾಜ ಇಮಾಮ್ ಗೆ  ಪಿಂಜಾರ್ /ನದಾಫ್ ಸಂಘದಿಂದ ಸನ್ಮಾನ

MK HasiruKranti
ರಾಷ್ಟ್ರಪತಿ ಪದಕ ವಿಜೇತ ಡಿಸಿಪಿ ರಾಜ ಇಮಾಮ್ ಗೆ  ಪಿಂಜಾರ್ /ನದಾಫ್ ಸಂಘದಿಂದ ಸನ್ಮಾನ
WhatsApp Group Join Now
Telegram Group Join Now
ಬೆಂಗಳೂರು, ಮಾ.30..: ಬಳ್ಳಾರಿ ಪಿಂಜರ್ ಓಣಿ ನಿವಾಸಿ ಹಾಗೂ ಕರ್ನಾಟಕ ಪೊಲೀಸ್ ಇಲಾಖೆಯ ಡಿಸಿಪಿ ಶ್ರೀ ರಾಜ ಇಮಾಮ ಅವರು ರಾಷ್ಟ್ರಪತಿ ಪದಕ ಪಡೆದ ಹಿನ್ನೆಲೆ ಅವರನ್ನು ಬೆಂಗಳೂರಿನ ಅವರ ಕಚೇರಿಯಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘದ ಬಳ್ಳಾರಿ ಯ ಜಿಲ್ಲಾ ಅಧ್ಯಕ್ಷರಾದ ಪಿ. ಮೌಲಾಲಿ ಅವರ ನೇತೃತ್ವದಲ್ಲಿ ವಿಭಾಗೀಯ ಉಪಾಧ್ಯಕ್ಷ ಶಾಶಸಾಬ್ ನಗರ ಅಧ್ಯಕ್ಷ ಜಿಪಿ ನಬಿಸಾಬ್, ಜಿಲ್ಲಾ ಖಜಾಂಚಿ ವಲಿಸಾಬ್ ಹಾಗೂ ರಾಜ್ಯ ಸಲಹಾ ಸಮಿತಿ ಸದಸ್ಯ ಮಸ್ತಾನ್ ವಲಿ ಸಂಗನಕಲ್ಲು ಉಪಸ್ಥಿತರಿದ್ದರು.
ಅದೇ ವೇಳೆ ಡಿಸಿಪಿ ಆರ್‌ಟಿಐ ಖಾಸಿಂಸಾಬ್ ಅವರ ಕಚೇರಿಯಲ್ಲಿ ನಡೆದ ಈ ಸನ್ಮಾನ ಕಾರ್ಯಕ್ರಮದಲ್ಲಿ ರಾಜ ಇಮಾಮ ಕಾಸಿಂಸಾಬ್ ಅವರ ಸಾಧನೆಯನ್ನು ಮೆಚ್ಚಿ ಅಭಿನಂದನೆ ಸಲ್ಲಿಸಲಾಯಿತು. ಅವರ ಸೇವಾ ಮನೋಭಾವ ಹಾಗೂ ಪೊಲೀಸ್ ಕೊಡುಗೆ ಗಣನೀಯ ಪ್ರಶಂಸೆ ವ್ಯಕ್ತವಾಯಿತು.
WhatsApp Group Join Now
Telegram Group Join Now
Share This Article