ಬಳ್ಳಾರಿ30.. : ಜಿಲ್ಲೆಯ ಗಡಿನಾಡಿನ ಬೊಮ್ಮನಹಾಳ್ ಮಂಡಲದ ಶ್ರೀ ದೇವಮ್ಮ ದೇವಸ್ಥಾನದ ಆವರಣದಲ್ಲಿ ರಾಮನವಮಿ ಪ್ರಯುಕ್ತ ಸಂತ ಶಿಶುನಾಳ ಶರೀಫ ತತ್ವಪದ ಜಾನಪದ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ರತಿ ಕಲ್ಯಾಣ ಅರ್ಥಾತ್ ಕೌಂಡ್ಲಿಕನ ವಧೆ ಎಂಬ ಸುಂದರ ಸಾಮಾಜಿಕ ನಾಟಕವನ್ನು ಪ್ರಸ್ತುತಪಡಿಸಲಾಯಿತು. ಗಡಿನಾಡು ಬೊಮ್ಮನಹಳ್ಳಿ ಗ್ರಾಮದ ನೂರಾರು ಜನ ಕಲಾಸಕ್ತರು ಈ ಬಯಲಾಟವನ್ನು ನೋಡಿ ಸಂತೋಷ ಪಟ್ಟರು.
ಇದಕ್ಕೂ ಮುಂಚೆ ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರು ಮತ್ತು ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು ಬಯಲಾಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಎಂದು ಟ್ರಸ್ಟ್ ನ ಅಧ್ಯಕ್ಷ ಕಾಸಿಮ್ ವಲಿ ( ಕಾಶಿಂ ಪೀರ ) ತಿಳಿಸಿದರು.


