ಜಿಲ್ಲಾಡಳಿತದಿಂದ ಭಗವಾನ ಮಹಾವೀರ ಜಯಂತಿ ಆಚರಣೆ ಭಗವಾನ್ ಮಹಾವೀರರ ಸಂದೇಶ ತತ್ವಾದರ್ಶ ಅರ್ಥೈಸಿಕೊಳ್ಳಬೇಕು-ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ

MK HasiruKranti
ಜಿಲ್ಲಾಡಳಿತದಿಂದ ಭಗವಾನ ಮಹಾವೀರ ಜಯಂತಿ ಆಚರಣೆ ಭಗವಾನ್ ಮಹಾವೀರರ ಸಂದೇಶ ತತ್ವಾದರ್ಶ ಅರ್ಥೈಸಿಕೊಳ್ಳಬೇಕು-ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ
WhatsApp Group Join Now
Telegram Group Join Now
ವಿಜಯಪುರ, ಮಾ.೩೦ : ತ್ಯಾಗಕ್ಕೆ ಮತ್ತೊಂದು ಹೆಸರು ಭಗವಾನ್ ಮಹಾವೀರರು. ಅವರು ಈ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಹೇಳಿದರು.
ನಗರದ ಕಂದಗಲ್ ಶ್ರೀ ಹನಮಂತರಾಯ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು  ಮಾತನಾಡಿದರು. ಸಮಾನತೆ, ಜಾತಿ ಪದ್ಧತಿ ನಿರಾಕರಿಸಿ ಎಲ್ಲರೂ ಸಮಾನರು ಎಂದು ಬೋಧಿಸಿದ ಮಹಾನ್ ಪುರು? ಭಗವಾನ್ ಮಹಾವೀರರು ಎಂದು ಬಣ್ಣಿಸಿದರು. ಭಗವಾನ್ ಮಹಾವೀರರು ಮನುಕುಲಕ್ಕೆ ಸಾರಿದ ಸತ್ಯ, ಅಹಿಂಸೆಯಂತಹ ಮೌಲ್ವಿಕ ತತ್ವಗಳು ಸಾರ್ವಕಾಲಿಕವಾಗಿದ್ದು, ಅವರ ಸಂದೇಶಗಳನ್ನು ಯುವಕರು ಅರ್ಥೈಸಿಕೊಂಡು ಆದರ್ಶ ಜೀವನ ನಡೆಸಬೇಕೆಂದರು.
ಅಹಿಂಸೆಯ ಪಾಠ ಹೇಳಿಕೊಟ್ಟ ಭಗವಾನ್ ಮಹಾವೀರರು, ಅಹಿಂಸೆ ಆಚರಣೆಯ ಮಾರ್ಗದಲ್ಲಿ ಜೀವನದ ಸಾಕ್ಷಾತ್ಕಾರದ ಪಥ ತೋರಿಸಿದ ಮಹಾನ್ ಯುಗ ಪುರು?. ಭಗವಾನ್ ಮಹಾವೀರರು ಎಲ್ಲರಿಗೂ ಒಳಿತನ್ನು ಬಯಸುವ ಮೂಲಕ ಜಗತ್ತಿಗೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು. ಮಹಾವೀರರು ಬೋಧಿಸಿದ ಪ್ರತಿ ಸಂದೇಶದಲ್ಲಿ ಅಪಾರ ಅನುಭಾವವಿದೆ. ಶಾಂತಿಮಂತ್ರ ಅನುಸರಿಸುವ ಮೂಲಕ ಜೀವನದ ಔಚಿತ್ಯದ ಮಹತ್ವ ಸಾರಿದ್ದಾರೆ. ಹಾಗಾಗಿ  ಮಹಾವೀರ ಅವರು ಅಹಿಂಸೆ, ತ್ಯಾಗ ಹಾಗೂ ವೈರಾಗ್ಯದ ಸಾಕಾರಮೂರ್ತಿಯಾಗುವ ಮೂಲಕ ತಮ್ಮ ಕೀರ್ತಿಯನ್ನು ಜಗತ್ತಿಗೆ ಸಾರಿದ್ದಾರೆ ಎಂದರು.
ಸಂತರು, ಸತ್ಪುರು?ರು, ದಾರ್ಶನಿಕರ ಜೀವನಾದರ್ಶಗಳು ಹಾಗೂ ಅವರು ನೀಡಿದ ಸಂದೇಶಗಳನ್ನು ಅರಿತುಕೊಳ್ಳುವ ಮೂಲಕ ಯುವಕರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದರು. ದಾರ್ಶನಿಕರು ನೀಡಿದ ಮೌಲಿಕ ವಿಚಾರಧಾರೆಗಳಡಿ ಸತ್ಯದ ಪಥದಲ್ಲಿ ಜೀವನ ಸಾಗಿಸಬೇಕು ಎಂದ ಅವರು ತನ್ಮೂಲಕ ನಮ್ಮ ಯೋಚನೆಯ ಲಹರಿಯನ್ನು ಸಕಾರಾತ್ಮಕತೆಯಡೆಗೆ ಕೊಂಡೊಯ್ಯಬೇಕು ಎಂದರು.
ಭಗವಾನ್ ಮಹಾವೀರರು, ನೀನು ಜೀವಿಸು,  ಇತರಿಗೂ ಜೀವಿಸಲು ಅವಕಾಶ ನೀಡು, ಸತ್ಯವನ್ನೇ ನುಡಿ, ಕಳ್ಳತನ ಮಾಡಬೇಡ, ಸುಳ್ಳು ಹೇಳಬೇಡ, ಅಹಿಂಸೆಯೇ ಪರಮೋಧರ್ಮ ಎಂಬ ವಿಚಾರಗಳನ್ನು ಪ್ರತಿಪಾದಿಸುವ ಮೂಲಕ ಈ ಜಗತ್ತಿಗೆ ನೀಡಿದ ಮೌಲಿಕ ಕೊಡುಗೆ ಅಪರವಾಗಿದೆ ಎಂದು ಭಗವಾನ್ ಮಹಾವೀರರ ವ್ಯಕ್ತಿತ್ವವನ್ನು ಬಣ್ಣಿಸಿದರು. ಭಗವಾನ್ ಮಹಾವೀರರು ಶಾಂತಿ ಪ್ರಿಯರಾಗಿದ್ದರು.  ಅಹಿಂಸಾವಾದಿಗಳಾದ ಇವರು ತಮ್ಮ ತತ್ವ ಚಿಂತನೆಗಳ ಮೂಲಕ ಎಲ್ಲರ ಏಳಿಗೆ ಬಯಸಿದವರು ಎಂದು ಅವರು ಹೇಳಿದರು.
ಸಮ್ಯಕ ದರ್ಶನದಿಂದ ಒಳ್ಳೆಯ ವಿಶ್ವಾಸ ಜ್ಞಾನ, ಉತ್ತಮ ನಡವಳಿಕೆ ಹೊಂದುವ ಮೂಲಕ ಅಮರ ತತ್ವದ ಕಡೆಗೆ ಹೋಗುವುದನ್ನು ಕಲಿಸುತ್ತದೆ. ಐದು ಪರಮ ತತ್ವಗಳನ್ನು ಮಹಾವೀರರು ನೀಡಿದ್ದು, ಅವರ ಆತ್ಮದಿಂದ ಹೇಳಿದ ನುಡಿಗಳಲ್ಲಿ ನಡೆದು ಸಾರ್ಥಕ ಜೀವನ ನಡೆಸೋಣ ಎಂದರು.
ಹೀರಾಚಂದ್ ಗಾಂಧಿ ಉಪನ್ಯಾಸ ನೀಡಿ, ಭಗವಾನ ಮಹಾವೀರರ ಹಲವು ಸಂದೇಶಗಳನ್ನು ಸಾರಿದರು. ಸತ್ಯ, ಅಹಿಂಸೆ, ಆಸ್ತೆಯ, ಅಪರಿಗ್ರಹ ಹಾಗೂ ಬ್ರಹ್ಮಚರ್ಯವನ್ನು ಅನುಸರಿಸುವುದರಿಂದ ವ್ಯಕ್ತಿಯು ಮೋಕ್ಷ ಪಡೆಯುತ್ತಾನೆ. ಮಹಾವೀರರ ಚಿಂತನೆ-ಬೋಧನೆಗಳನ್ನು ಸವಿಸ್ತಾರವಾಗಿ ವಿವರಿಸಿದರು.
ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ ಮಾತನಾಡಿ, ಭಗವಾನ್ ಮಹಾವೀರರ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದರು. ಭಾರತ ಎಂದು ಭಾರತ ದೇಶಕ್ಕೆ ನಾಮಕರಣ ಮಾಡಲು ಭರತ ಎಂಬ ಮುಖ್ಯ ಕಾರಣ ಎಂದು ಅವರು ಹೇಳಿದರು. ಬಾಹುಬಲಿ ಮತ್ತು ಭರತ ನಡುವಿನ ಪ್ರತಿ?ಯ ಯುದ್ಧಗಳಾದ ಮುಷ್ಟಿಯುದ್ಧ ದೃಷ್ಟಿಯಿಂದ ಮತ್ತು ಜಲ ಯುದ್ಧ ಮಾಡಿ ಅದರಲ್ಲಿ ಬಾಹುಬಲಿ ಜಯಶಾಲಿಯಾದರು ಎಂದು ಅಣ್ಣತಮ್ಮಂದಿರ ಯುದ್ಧದ ಬಗ್ಗೆ ಹಾಗೂ ಬಾಹುಬಲಿಯು ೧೨ ವ?ಗಳ ಕಾಲ ಕಠಿಣ ತಪಸ್ಸು ಮಾಡಿ ಜ್ಞಾನವನ್ನು ಪಡೆದರು ಎಂದು ಅವರು ಹೇಳಿದರು.
ಶೀತಲ್ ಕುಮಾರ್ ಓಘಿ ಮಾತನಾಡಿ, ಸರ್ಕಾರವು ನಮ್ಮ ಸಮುದಾಯಕ್ಕೆ ನೀಡುತ್ತಿರುವ ಸೌಲಭ್ಯವನ್ನು ಎಲ್ಲರೂ  ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಭಗವಾನ್ ಶ್ರೀ ಮಹಾವೀರರು ಈ ಜಗತ್ತಿಗೆ ಬೆಳಕು ನೀಡಿದವರು ನಾವು ಅವರು ನೀಡಿರುವ ಬೆಳಕಿನಲ್ಲಿಯೇ ನಡೆಯಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ ಪೂಜಾರಿ, ಎಂ.ಎಂ. ವಸ್ತ್ರದ, ಮಣಿಕಂಠ ಶಹಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೋಹನ ಕಟ್ಟಿಮನಿ ಸ್ವಾಗತಿಸಿದರು.
ಕಾರ್ಯಕ್ರಮಕ್ಕೆಮುನ್ನ ಮೆರವಣಿಗೆ: ಬೆಳಿಗ್ಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಭಗವಾನ ಮಹಾವೀರರ ಭಾವಚಿತ್ರಕ್ಕೆ ಪು? ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ನಾನಾ ವಾದ್ಯ ಮೇಳಗಳು ಹಾಗೂ ಕಲಾ ತಂಡಗಳು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article