ಏಪ್ರಿಲ್ 1ರಂದು ಹನುಮಾನ್ ಜಯಂತಿ ಪ್ರಯುಕ್ತ ಘುಮಟಮಾಳ ಮಾರುತಿ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳು

Hasiru Kranti
ಏಪ್ರಿಲ್ 1ರಂದು ಹನುಮಾನ್ ಜಯಂತಿ ಪ್ರಯುಕ್ತ ಘುಮಟಮಾಳ ಮಾರುತಿ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳು
WhatsApp Group Join Now
Telegram Group Join Now

ಬೆಳಗಾವಿ– ಪ್ರತಿ ವರ್ಷಗಳಂತೆ ಈ ವರ್ಷವೂ ಹಿಂದವಾಡಿ ಪ್ರದೇಶದಲ್ಲಿರುವ ಮಾರುತಿ ದೇವಸ್ಥಾನದಲ್ಲಿ ಹನುಮಾನ್ ಜಯಂತಿಯ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಏಪ್ರಿಲ್ 1ರಂದು ಬುಧವಾರ ಸಂಜೆ ಅಣಗೋಳವರ ಸಂಪ್ರದಾಯ ಮಂಡಳಿಯ ಭಜನ ಕಾರ್ಯಕ್ರಮ ನಡೆಯಲಿದೆ.

ಏಪ್ರಿಲ್ 2ರಂದು ಗುರುವಾರ ಬೆಳಿಗ್ಗೆ ನಾಲ್ಕು ಗಂಟೆಗೆ ಹನುಮಾನ್ ಮೂರ್ತಿಗೆ ಅಭಿಷೇಕ, ನಂತರ ಕೃಷ್ಣಮೂರ್ತಿ ಬೊಂಗಾಳೆ ಅವರ ಕೀರ್ತನೆ, ಆರು ಗಂಟೆಗೆ ಜನ್ಮಕಾಲ ಹಾಗೂ ತೀರ್ಥಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಉತ್ಸವದಲ್ಲಿ ಭಾಗವಹಿಸಬೇಕೆಂದು ಘುಮಟಮಾಳ ಮಾರುತಿ ದೇವಸ್ಥಾನ ಟ್ರಸ್ಟ್ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಬಾಂದಗಿ, ಕಾರ್ಯದರ್ಶಿ ಪ್ರಕಾಶ ಮಹೇಶ್ವರಿ ಹಾಗೂ ಟ್ರಸ್ಟಿಗಳು ವಿನಂತಿ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article