ಶ್ರೀರಾಮ ನವಮಿ ಅಂಗವಾಗಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಶಾಸಕ ನಾರಾ ಭರತ್ ರೆಡ್ಡಿ

Pratibha Boi
ಶ್ರೀರಾಮ ನವಮಿ ಅಂಗವಾಗಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಶಾಸಕ ನಾರಾ ಭರತ್ ರೆಡ್ಡಿ
WhatsApp Group Join Now
Telegram Group Join Now
ಬಳ್ಳಾರಿ, ಮಾ.27: ಶ್ರೀರಾಮ ನವಮಿಯ ಅಂಗವಾಗಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ನಗರದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಶುಕ್ರವಾರ ಬೆಳಿಗ್ಗೆ ಹೆಚ್ ಆರ್ ಗವಿಯಪ್ಪ ವೃತ್ತದಲ್ಲಿನ ಶ್ರೀರಾಮ ಮಂದಿರದಲ್ಲಿ ಏರ್ಪಡಿಸಿದ್ದ 67ನೇ ವರ್ಷದ ಸೀತಾರಾಮ ಕಲ್ಯಾಣೋತ್ಸವದಲ್ಲಿ ಭಾಗಿಯಾದರು.
ರೂಪನಗುಡಿ ರಸ್ತೆಯ ವೆಂಕಟರಮಣ ಕಾಲೋನಿಯಲ್ಲಿರುವ ಶ್ರೀ ಅಭಯ ಆಂಜನೇಯ ದೇವಸ್ಥಾನದಲ್ಲಿ ಸ್ಥಳೀಯರು ಏರ್ಪಡಿಸಿದ್ದ ಸೀತಾರಾಮ ಕಲ್ಯಾಣೋತ್ಸವದಲ್ಲಿ ಭಾಗಿಯಾಗಿ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.
ತದನಂತರ ಶ್ರೀರಾಂಪುರ ಕಾಲೋನಿಯ ಸೀತಾರಾಮ ವಸಂತ ನವರಾತ್ರಿಗಳ ಕಲ್ಯಾಣೋತ್ಸವದಲ್ಲಿ ಭಾಗಿಯಾಗಿ ಶ್ರೀರಾಮ ದೇವರಿಗೆ ಪೂಜೆ ಸಲ್ಲಿಸಿದ ಶಾಸಕ ನಾರಾ ಭರತ್ ರೆಡ್ಡಿ, ಮಿಲ್ಲರಪೇಟೆಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪೂಜೆಯಲ್ಲಿ ಭಾಗಿಯಾದರು.
ಬಾಪೂಜಿ ನಗರದ ಶ್ರೀರಾಮಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಸೀತಾರಾಮ ಕಲ್ಯಾಣ ಮಹೋತ್ಸವದಲ್ಲಿ ಭಾಗಿಯಾದರು.
ತದನಂತರ 35ನೇ ವಾರ್ಡಿನ ಸಂಜಯ ಗಾಂಧಿನಗರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ರಾಮ ನವಮಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಅದೇ ರೀತಿ ವಿದ್ಯಾನಗರದ ಶ್ರೀ ಅಭಯ ಆಂಜನೇಯ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಸೀತಾರಾಮ ಕಲ್ಯಾಣೋತ್ಸವ ಹಾಗೂ ರಥೋತ್ಸವದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದರು.
ಸಂಜೆ ಹಂದ್ರಾಳಿನ ಶ್ರೀರಾಮ ನವಮಿ ನಿಮಿತ್ತ ನಡೆದ ಶ್ರೀರಾಮ ರಥೋತ್ಸವದಲ್ಲಿ ಭಾಗಿಯಾದರು.
ಈ ಸಂದರ್ಭ ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ಎಲ್.ಮಾರೆಣ್ಣ, ಪಾಲಿಕೆಯ ಸದಸ್ಯರಾದ ಮಿಂಚು ಸೀನಾ, ಮಾಜಿ ಮೇಯರ್ ಎಂ.ರಾಜೇಶ್ವರಿ, ಮಾಜಿ ಉಪ ಮೇಯರ್ ಜಾನಕಮ್ಮ, ಕವಿತಾ ಹೊನ್ನಪ್ಪ, ರಾಮಾಂಜನೇಯ, ಸುಬ್ಬರಾಯುಡು, ವಿಷ್ಣು ಬೋಯಪಾಟಿ, ಭಾಸ್ಕರ್, ವೆಂಕಟಸ್ವಾಮಿ, ಸಾಯಿಬಾಬಾ, ಗುರುವಯ್ಯ,  ಚಾನಾಳ್ ಶೇಖರ್, ಸೂರಜ್, ಸುನೀಲ್, ಹೊನ್ನಪ್ಪ, ಹಗರಿ ಗೋವಿಂದ, ಪರಶುರಾಮುಡು, ಬಾಲರಾಜು, ಚರಣ್, ಅಭಿ, ಶಿವರಾಜ್, ಭರತ್, ಬುಜ್ಜಿ, ಥಿಯೇಟರ್, ಕಪ್ಪೆ ಶಿವು, ಸೂಪರ್ ಮಾರ್ಕೆಟ್ ರಘು, ಪ್ರದೀಪ್, ಕುಡಿತಿನಿ ರಾಮಾಂಜನೇಯ, ಪೆದ್ದನ್ನ, ಶ್ರೀನಿವಾಸ ಮತ್ತಿತರರು ಹಾಜರಿದ್ದರು.
WhatsApp Group Join Now
Telegram Group Join Now
Share This Article