ಬಳ್ಳಾರಿ ಮಾ. 28 : 1961ರಲ್ಲಿ ಯುನಸ್ಕೊ ಬೆಂಬಲದೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆಯನ್ನು ಪೋಷಿಸಲಾಯಿತು 1962 ರಿಂದ ವಿಶ್ವರಂಗ ಭೂಮಿ ದಿನವನ್ನು ಪ್ರತಿವರ್ಷ ಮಾರ್ಚ್ 27ರಂದು ಇಡಿ ವಿಶ್ವವೆ ಆಚರಿಸಲಾಗುತ್ತದೆ. ಬಳ್ಳಾರಿ ರಂಗಭೂಮಿಯಲ್ಲಿ ವಿಶ್ವವಿಖ್ಯಾತ ನಟ ಬಳ್ಳಾರಿ ರಾಘವ, ಗಮಕ ಕಲಾನಿಧಿ ಡಾ. ಜೋಳದರಾಶಿ ದೊಡ್ಡನಗೌಡರು, ಸುಬದ್ರಮ್ಮ ಮನ್ಸೂರುರವರು, ಬೆಳಗಲ್ಲು ವೀರಣ್ಣನವರು, ಇತ್ತೀಚೆಗೆ ನಿಧನರಾದ ರಮೇಶಗೌಡ ಪಾಟೀಲ್ ಇನ್ನೂ ಅನೇಕ ಕಲಾವಿದರು ರಂಗಭೂಮಿಗಾಗಿ ದುಡಿದಂತಹ ಮಹನಿಯರಿವರು. ಈ ದಿನ ರಂಗ ಕಲೆಯ ಮಹತ್ವವನ್ನು ಸಾರಲು ರಂಗಭೂಮಿಯು ಕಲಾತ್ಮಕ ಸೌಂದರ್ಯವನ್ನು ಪ್ರದರ್ಶಿಸಲು ರಂಗಭೂಮಿಯಲ್ಲಿ ನೃತ್ಯ ಸಂಗೀತ ಹಾಗೂ ಇನ್ನಿತರ ಕಲೆಗಳ ಪ್ರಕಾರಗಳು ಉಳಿವಿಗೆ ಪ್ರೋತ್ಸಾಹ ನೀಡಲು ಈ ದಿನಾಚರಣೆ ಬೆಂಬಲ ನೀಡುತ್ತದೆ ಜಗವೇ ನಾಟಕ ರಂಗ ಜನರೆಲ್ಲಾ ಪಾತ್ರಧಾರಿಗಳು ಎಂಬುದು ಭಾರತೀಯ ನಾಟಕ ರಂಗದ ಸಂದೇಶವಾಗಿದೆ ಅತ್ಯಂತ ಮುಖ್ಯವಾಗಿ ರಂಗಭೂಮಿ ಉದಯೋನ್ಮುಖ ನಟರನ್ನು ಸೃಷ್ಟಿಸುವ ವೇದಿಕೆಯಾಗಿದೆ ಎಂದು ಎನ್ ಬಸವರಾಜ್ ತಿಳಿಸಿದರು.
ಅವರು ಆಲಾಪ್ ಸಂಗೀತ ಕಲಾ ಟ್ರಸ್ಟ್ ಬಳ್ಳಾರಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ರಾಯಲ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ನಿಮಿತ್ತ ಉಪನ್ಯಾಸ ನೀಡಿ ಅವರು ಮಾತನಾಡಿ,
ರಂಗಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಮೂಲಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆದೋನಿ ವೀಣಾ ಮತ್ತು ವೇದಿಕೆಯ ಮೇಲೆ ಗಣ್ಯರು ಸೇರಿ ದೀಪ ಬೆಳಗುವ ಮೂಲಕ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆದೋನಿ ವೀಣಾರವರು ನಾಟಕ ಮಾತುಗಳು ಮತ್ತು ರಂಗ ಗೀತೆಗಳ ಮೂಲಕ ಉದ್ಘಾಟನೆ ನುಡಿಗಳ ನಾಡಿದರು.
ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರ ಬಂಡೆ ಇವರು ರಂಗಭೂಮಿಯಲ್ಲಿ ಪ್ರದರ್ಶನ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು.
ವೇದಿಕೆ ಮೇಲೆ ನಿವೃತ್ತ ಉಪನ್ಯಾಸಕರಾದ ಎಂ ರಾಮಾಂಜನೇಯಲು, ಟ್ರಸ್ಟ್ ಅಧ್ಯಕ್ಷರಾದ ರಮಣಪ್ಪ ಭಜಂತ್ರಿ, ಶಿಕ್ಷಕರಾದ ಎರ್ರಿಸ್ವಾಮಿ ಉಪಸ್ಥಿತರಿದ್ದರು. ನಂತರ ಜಡೇಶ ಎಮ್ಮಿಗನೂರು ಇವರಿಂದ ರಂಗ ಗೀತೆಗಳು, ಎರ್ರಿಸ್ವಾಮಿ,ಶಿಕ್ಷಕರಿಂದ ಹಾಸ್ಯ ಕಾರ್ಯಕ್ರಮ ಹಾಗೂ ಕೆ.ಕಾಳಿದಾಸ ಇವರಿಂದ ಆದ್ಭುತವಾದ ಮಿಮಿಕ್ರಿ ಪ್ರದರ್ಶನ ಜರುಗಿತು. ಎಲೆಮಾರಿ ಕಾಯಿಯಂತೆ ಇರುವ ಬಯಲಾಟ ಕಲಾವಿದರಾದ ಹೆಚ್ ಎಂ ಹನುಮವಧೂತ, ರಂಗಭೂಮಿ ಕಲಾವಿದರಾದ ಕೆ ರವೀಂದ್ರನಾಥ ಇವರನ್ನು ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಯಲ್ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶಪಾಲರಾದ ಫರ್ಜಾನ ಬೇಗಂ ಇವರು ಕಾರ್ಯಕ್ರಮದ ಅಧ್ಯಕ್ಷತೆ ಭಾಷಣ ಮಾಡಿದರು. ಪ್ರಾರಂಭದಲ್ಲಿ ಪ್ರಾಸ್ತಾವಿಕ ನುಡಿ ಮತ್ತು ಸ್ವಾಗತ
ರಮಣಪ್ಪ ಭಜಂತ್ರಿ, ಪ್ರಾರ್ಥನೆ ಮತ್ತು ವಂದನಾರ್ಪಣೆ ಜಡೇಶ ಎಮ್ಮಿಗನೂರು ಸೇರಿವೇರಿಸಿದರು. ಕೊನೆಯಲ್ಲಿ ಮಹಾವಿದ್ಯಾಲಯದ ವರು ಟ್ರಸ್ಟ್ ಅಧ್ಯಕ್ಷರನ್ನು ಸನ್ಮಾಸಿದರು. ಲಾಲ್ ರೆಡ್ಡಿ, ಮಹಾವಿದ್ಯಾಲಯ ಶಿಕ್ಷಕರಾದ ಮಲ್ಲಿಕಾರ್ಜುನ, ಬಿ ಎಡ್ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.


