ಹೊಸಪೇಟೆ ( ವಿಜಯನಗರ): ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿ ಕೊಳ್ಳಲು ಟಿಬಿ ಡ್ಯಾಮ್ ನ 14ನೇ ವಾರ್ಡ್ನ ಮುರುಗನ್ ಟೆಂಪಲ್ ಹತ್ತಿರ ತಾಯಮ್ಮ ಶಕ್ತಿ ಸಂಸ್ಥೆಯ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್ ಅವರು ಟೈಲರಿಂಗ್ ಮಗ್ಗಮ್ ವರ್ಕ್ ಮತ್ತು ಇತರ ಕರಕುಶಲ ತರಬೇತಿ ಕೇಂದ್ರ ದಿನಾಂಕ್ 26 ಗುರುವಾರ ಪ್ರಾರಂಭಿಸಿದರು.
ಮಹಿಳೆ ಸಶಕ್ತ ವಾದಲ್ಲಿ ಕುಟುಂಬ ನಿರ್ವಹಣೆ ಅನುಕೂಲ ವಾಗುವುದು ,ಆದ್ದರಿಂದ ಎಲ್ಲ ಯುವತಿಯರು ಹಾಗು ಮಹಿಳೆಯರು ಇಂತಹ ಕೈ ಕುಶಲತೆ ಕಲಿತು ಕುಟುಂಬಕ್ಕೆ ಆದಾರವಾಗಿ ನಿಲ್ಲಲು ಕರೆನೀಡಿದರು. ಈ ಕಲಿಕಾ ಕೇಂದ್ರ ಉದ್ಘಾಟನೆ ಯ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಷಣ್ಮುಖ ಮತ್ತು ಹೋಂ ಗಾರ್ಡ ಪರಶುರಾಮ್ ಮತ್ತು ಘಟಕದ ಅಧ್ಯಕ್ಷ ಒಬಲೇಶ್, ಸುವರ್ಣಮ್ಮ ಲಲಿತ , ಪ್ರಮೀಳಾ, ನೇತ್ರಾವತಿ , ಶೋಭ ಗಾಯಕ್ವಾಡ್, ಟೀಚರ್ ಸರಸ್ವತಿ , ಹಾಗೂ ವಾರ್ಡಿನ ಹಿರಿಯ ವ್ಯಕ್ತಿಗಳು, ಉಪಸ್ಥಿತರಿದ್ದರು.


