ಮುಗಳಖೋಡ (೨೬) ಸುಕ್ಷೇತ್ರ ಶ್ರೀ ಯಲ್ಲಾಲಿಂಗ ಪ್ರಭು ಮಹಾರಾಜರ ಬ್ರಹನ್ಮಠದಲ್ಲಿ ರಾಮನವಮಿಯಂದು ತಮ್ಮ ಗುರು ಶ್ರೀ ಸಿದ್ದಲಿಂಗೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ 25 ರಂದು ಸಾಯಂಕಾಲ ಎಲ್ಲ ಪುರದೇವರ ಪಲ್ಲಕ್ಕಿ ಉತ್ಸವ ದೊಂದಿಗೆ ಶ್ರೀ ಮಠಕ್ಕೆ ಸ್ವಾಗತಿಸಲಾಯಿತು, ರಾತ್ರಿ 10 ಗಂಟೆಗೆ ಪಿಠಾಧಿಪತಿ ಡಾ.ಮುರಘರಾಜೇಂದ್ರ ಶ್ರೀಗಳು ಅಗ್ನಿ ಕೊಂಡ ಪೂಜೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.ಗುರುವಾರ 26 ರಂದು ಬೆಳಿಗ್ಗೆಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಕರ್ತೃ ಗದ್ದುಗೆ ಮಹಾರುದ್ರಾಭಿಷೇಕ ಹಾಗೂ ವಿಶೇಷ ಪೂಜೆಸಿ ದರ್ಶನ ಪಡೆದು 11 ಗಂಟೆಗೆ ಡಾ. ಮುರುಘರಾಜೇಂದ್ರ ಮಹಾ ಸ್ವಾಮಿಗಳು ಲೋಕ ಕಲ್ಯಾಣಕ್ಕಾಗಿ ಭಕ್ತರ ಓಂ ನಮಃ ಶಿವಾಯ ಷಡಕ್ಷರಿ ಮಹಾ ಮಂತ್ರ ಘೋಷಣೆಯೊಂದಿಗೆ ಅಗ್ನಿ ಹಾಯ್ದರು. ಸಂಜೆ 5 ಗಂಟೆಗೆ ಭಕ್ತರ ಹರ್ಷೋದ್ಗಾರರ ಮಧ್ಯೆ ಭವ್ಯ ರಥೋತ್ಸವವುಕ್ಕೆ ಪಿಠಾಧಿಪತಿಗಳು ಚಾಲನೆ ನೀಡಿದರು . 27 ರಂದು ಶುಕ್ರವಾರ ಸಂಜೆ 4 ಗಂಟೆಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳಿಂದ ಸುಪ್ರಸಿದ್ಧ ಜಂಗಿ ಕುಸ್ತಿಗಳು ನಡೆಯಲಿವೆ. ಜಾತ್ರಾ ಮಹೋತ್ಸವದಲ್ಲಿ ನಾಡಿನ ಶಾಸಕರು ಸಚಿವರು ಹಾಗೂ ರಾಜಕೀಯ ಮುಖಂಡರು ಗೋವಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ,ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಫೋಟೋ ಶಿರಸಿಕೆ ಮುಗಳಖೋಡ 1001315733.jpg,1001315783.jpg ರಥೋತ್ಸವಕ್ಕೆ ಚಾಲನೆ ನೀಡಿದ ಡಾ.ಮುರುಘರಾಜೇಂದ್ರ ಶ್ರೀ.
1001315877.jpg ಅಗ್ನಿ ಹಾಯುತ್ತಿರುವ ಪೀಠಾಧಿಪತಿ ಡಾ.ಮುರುಘರಾಜೇದ್ರ ಶ್ರೀ


