ಬಳ್ಳಾರಿ. ಮಾ. 27.: ಯುಗಾದಿ ಕವಿಗೋಷ್ಠಿ ಹೊಸ ಕವನಗಳನ್ನು ಆಚರಿಸುವ ಯುವಕವಿಗಳಿಗೆ ಹಿರಿಯ ಕವಿಗಳು ಒಂದೆಡೆ ಸೇರಿ ತಮ್ಮ ಕವನಗಳನ್ನು ವಾಚಿಸಿ ಚರ್ಚಿಸುವ ಸಾಹಿತಿಕ ಕಾರ್ಯಕ್ರಮ ಇದಾಗಿದ್ದು.ಇದು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದಲ್ಲದೆ ಸಾಹಿತ್ಯ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ ಎಂದು ಜ್ಞಾನಭಾರತಿ ವಿದ್ಯಾ ಸಂಸ್ಥೆ ಅಧ್ಯಕ್ಷ ದಮ್ಮೂರು ಮಲ್ಲಿಕಾರ್ಜುನ
ಹೇಳಿದರು.
ಅವರು ಜ್ಞಾನಭಾರತಿ ಪದವಿ ಕಾಲೇಜು ಸಭಾಂಗಣದಲ್ಲಿ ನೇತ್ರ ಕಲಾ ಸಂಘ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಕವಿ ಗೋಷ್ಠಿ ಹಾಗೂ ಗಾನ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಜಿಲ್ಲಾ ಸಾಹಿತ್ಯ ಪರಿಷತ್ತು ದಸರಾ ಹಾಗೂ ಹಂಪಿ ಉತ್ಸವ ಇತರೆ ವಿಶೇಷ ಸಂದರ್ಭಗಳಲ್ಲಿ ಇಂತಹ ಕವಿಗೋಷ್ಠಿಗಳನ್ನು ಆಯೋಜಿಸುವುದು ವಾಡಿಕೆ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ರೂಪಿಸುವುದರಿಂದ ಯುವಕರು ಹಿರಿಯರು ಸಾಹಿತಿಗಳಿಗೆ ಸಂವಾದಕ್ಕೆ ಅವಕಾಶ ನೀಡುವ ವೇದಿಕೆಯಾದರೆ ಹಿರಿಯ ಕವಿಗಳ ರಚಿತವಾದ ಸಾಹಿತ್ಯಕೆ ಪ್ರೇರೇಪಗೊಂಡು ಯುವ ಕವಿಗಳು ವಿಶಿಷ್ಟವಾದ ರೀತಿಯಲ್ಲಿ ಕವನಗಳನ್ನು ಬರಿಯುವುದರ ಜೊತೆಗೆ ಸಾಮಾಜಿಕ ಪಿಡುಗುಗಳಾದ ಬಡತನ ಅನಕ್ಷರತೆ ಭ್ರಷ್ಟಾಚಾರ ಮಾನವೀಯ ಸಂಬಂಧಗಳ ಕುರಿತು ಸಾಮಾಜಿಕ ಕಳಿಕಳಿ ಇರುವ ಕವನಗಳನ್ನ ಹೆಚ್ಚಾಗಿ ಯುವಕರು ಬರೆಯುವದರ ಜೊತೆಗೆ ಸಮಾಜದ ಓರೆ ಕೋರೆಗಳನ್ನು ತಿದ್ದುವ ಕೆಲಸ ಎಲ್ಲರಿಂದ ಆಗಲಿ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹಾಸ್ಯ ಕಲಾವಿದರು ಹಿರಿಯ ಸಾಹಿತಿಗಳಾದ ಜಿ ನರಸಿಂಹಮೂರ್ತಿ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಮೂಲಕ ಸಾಹಿತ್ಯವನ್ನು ಬರೆಯುವ ಓದುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಯುವಕರು ಸಣ್ಣ ಸಣ್ಣ ಪದ್ಯಗಳನ್ನು ಬರೆಯುವ ಮೂಲಕ ಸಾಹಿತ್ಯ ಬರವಣಿಗೆಯ ಪ್ರಯತ್ನವನ್ನು ಮಾಡಬೇಕು ಯಾವ ಸಾಹಿತಿಗಳು ಕೂಡ ಪ್ರಾರಂಭದಲ್ಲಿ ತೋಚಿದ್ದನ್ನು ಗೀಚಿ ನಂತರ ಅವರ ಸಾಹಿತ್ಯದ ಬರವಣಿಗೆ ಗಟ್ಟಿತನವಾಗುತ್ತದೆ ಏಕೆಂದರೆ ಹೆಚ್ಚು ಪುಸ್ತಕಗಳು ಓದುವ ಜೊತೆಗೆ ಸಮಾಜದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಾಹಿತ್ಯ ಬರವಣಿಗೆಯಲ್ಲಿ ಗಟ್ಟಿತನವನ್ನು ತಂತಾನೆ ಬರುವುದು ಸೃಜನಶೀಲತೆಯುಳ್ಳ ಒಬ್ಬ ಕವಿಯಾಗಲಿಕ್ಕೆ ಸಾಧ್ಯ ಎಂದು ಹೇಳಿದರು.
ಹಿರಿಯ ಜನಪದ ಕಲಾವಿದರಾದ ಸಾಧುರಾಯಪ್ಪ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವನಾಥ್ ಸಾಹುಕಾರ ರಾಜ್ಯಾಧ್ಯಕ್ಷರು ಕರ್ನಾಟಕ ಬೈಲಾಟ ಕಲಾವಿದರ ಸಂಘ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಚಾರ್ಯರಾದ ಅಯ್ಯಣ್ಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಚಂದ್ರಕಾಂತ್. ಆಂಗ್ಲ ಪ್ರಾಧ್ಯಾಪಕರಾದ ಪ್ರಶಾಂತ್ ನೇತ್ರ ಕಲಾ ಸಂಘದ ಕಾರ್ಯದರ್ಶಿ ವೀರೇಶ್ ದಳವಾಯಿ ಕಲಾವಿದರಾದ ಎಚ್.ಎಸ್ ನಾಗರಾಜ್ ಮತ್ತು ಸಿ.ಲಕ್ಷ್ಮಣ ಇವರಿಂದ ಗಾನ ಸಿಂಚನ ಗಾಯನದಲ್ಲಿ ಭಾವಗೀತೆಗಳ ಹಾಗೂ ಚಿತ್ರಗೀತೆಗಳನ್ನು ಹಾಡಿ ವಿದ್ಯಾರ್ಥಿಳ ಮನರಂಜಿಸಿದರು ಕಾರ್ಯಕ್ರಮದಲ್ಲಿ ದೊಡ್ಡ ಹುಸೇನಪ್ಪ ಅರಳಿಗನೂರು, ಹರಿಕೃಷ್ಣ ಸಂಗನಕಲ್, ಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಾದ ಕುರುವಳ್ಳಿ ತಿಮ್ಮಯ್ಯ ಎಸ್ ಪಾಲಾಕ್ಷಿ, ಗಾದಿಲಿಂಗಪ್ಪ ಜೀವನ್ ಕುರುವಳ್ಳಿ ಜೈ ಸಿಂಹ ಅಲ್ವರಿ ಹೀಗೆ 12 ಹಿರಿಯ ಹಾಗೂ ಯುವಕವಿಗಳು ಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚಸಿದರು ಕಾರ್ಯಕ್ರಮದಲ್ಲಿ ನಿರ್ವಹಣೆ ವೀರೇಶ್ ದಳವಾಯಿ ನಡೆಸಿಕೊಟ್ಟರು.


