ಬಳ್ಳಾರಿ, ಮಾ.27.: ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ (ರಿ) ಬಳ್ಳಾರಿ. ವತಿಯಿಂದ, ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ಆವರಣ, ಗುಗ್ಗರಹಟ್ಟಿಯಲ್ಲಿ ( ಪವರ್ ಸ್ಟಾರ್ ಡಾ: ಪುನೀತ್ ರಾಜ್ ಕುಮಾರ್ ರವರ ಜನ್ಮದಿನದ ಪ್ರಯುಕ್ತ ) ಸಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಪ್ರ.ಮು.ಗುರುಗಳು, ಹೆಚ್. ಕೆ.ತಿಪ್ಪೇಸ್ವಾಮಿ, ಕೆ. ಶಿವಶಂಕರ, , ಜಿ. ಶಿವಶಂಕರ್, ಮತ್ತು ಇತರರು ಗಣ್ಯಮಾನ್ಯರು,ಸಸಿಗೆ ನೀರು ಉಣಿಸುವ ಮುಖಾಂತರ ಉದ್ಘಾಟನೆಯನ್ನು ನೆರವೇರಿಸಿದರು. ಜಿ. ಶಿವಶಂಕರ್ ಮಾತನಾಡಿ, ಅಪ್ಪು ರವರು ಚಲನಚಿತ್ರ, ಕ್ಷೇತ್ರದಲ್ಲಿ ಮಾಡಿರುವ ನಟನೆ ಬಗ್ಗೆ, ಅವರ ಸಂದೇಶಗಳ ಬಗ್ಗೆ, ಸೇವೆಗಳ ಸಾಧನೆ ಬಗ್ಗೆ, ತುಂಬಾ ಅಚ್ಚುಕಟ್ಟಾಗಿ ವಿವರಿಸಿದರು, ಹಾಗೆಯೇ ನಮ್ಮ ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟಿನ, ಅಧ್ಯಕ್ಷರಾದ ವೈ.ಪ್ರಭು ರವರು ಇಂತಹ ಕಾರ್ಯಕ್ರಮವನ್ನು ಮಾಡಿರುವುದು ತುಂಬಾ ಸಂತೋಷದ ವಿಷಯ ಎಂದು ಅಭಿನಂದಿಸಿದರು.ವೇದಿಕೆ ಮೇಲೆ ಕೆ, ಶಿವಶಂಕರ, ಜಿ. ಶಿವಶಂಕರ್, ಕ್ಯಾದಿಗೆ ಓಬಳೇಶ್, ಜಿ ಹನುಮಂತ ರೆಡ್ಡಿ, ಎಂ. ಪುರುಷೋತ್ತಮ, ಜನಪದ ಗಾಯಕರಾದ ಜಡೇಶ ಎಮ್ಮಿಗನೂರು, ಮತ್ತು ಇತರರು ಗಣ್ಯ ಮಾನ್ಯರು ಉಪಸ್ಥಿತರಿದ್ದರು. ಆರಂಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ವೈ.ಪ್ರಭು ಪ್ರಾಸ್ತಾವಿಕ ನುಡಿದರು.ನಂತರ ಜಡೇಶ್ ಎಮ್ಮಿಗನೂರು, ಮತ್ತು ತಂಡದವರಿಂದ ಅಪ್ಪು ಹಾಡುಗಳು ಜನಮನ್ನಣೆ ಪಡೆದರು. ಕುಮಾರಿ, ಹರಿಪ್ರಿಯ, ರವರಿಂದ ಯುಗಳ ನೃತ್ಯ ಪ್ರದರ್ಶನ ಮಾಡಿದರು. ವೈ. ಉಮೇಶ್ ನಿರೂಪಣೆ ಮತ್ತು ಶ್ರೀಮತಿ ಪಿ.ರೇಖಾ ವಂದನಾರ್ಪಣೆ ಮಾಡಿದರು.


