ಹೊಸಪೇಟೆ(ವಿಜಯನಗರ): ನಗರಸಭೆಯ ೨೦೨೬-೨೭ ರ ಅಯವ್ಯಯ ವನ್ನು ಇಂದು ನಗಸಭೆಯಲ್ಲಿ ನಗರಸಭೆ ಅದ್ಯಕ್ಷ ರೂಪೇಶ್ ಕುಮಾರ್ ೭ ಲಕ್ಷದ ಬಾರೀ ಉಳಿತಾಂiiದ ಬಜೆಟ್ನ್ನು ಮಂಡಿಸಿದರು.. ಅಯವ್ಯದ ಗಾತ್ರ ೧೨೨ ಕೋಟಿಗಳಾಗಿದ್ದರೂ ಕೇವಲ ೭ ಲಕ್ಷದ ಉಳಿತಾಯದಲ್ಲಿ ಕೊನೆಗೊಂಡಿತು. ಸುಮಾರು ೩೫ ಸದಸ್ಯರಿರುವ ನಗರಸಭೆಯಲ್ಲಿ ಸುಮಾರು ಹತ್ತು ಸದಸ್ಯರು ಗೈರಾಗಿದ್ದದು ಕಂಡುಬಂದಿತು.ನಗರದ ವಿವಿದ ಸರ್ಕಲ್ ಗಳಿಗೆ ಅಭಿವೃದ್ದಿಗಾಗಿ ನಡೆದ ಚಕಾಚಕಿಯಲ್ಲಿ ಕೆಲ ಸದಸ್ಯರು ಏರು ದ್ವನಿಯಲ್ಲಿ ಮಾತನಾಡಿದರು. ನಾಮನಿರ್ದೇಶಿತ ಸದಸ್ಯ ಕೊನೆಗಳಿಗೆ ಯಲ್ಲಿ ರಾಮಕುಮಾರ್ ಸರ್ಕಲ್ ಗಳ ಅಭಿವೃದ್ದಿಗಾಗಿ ಸದಸ್ಯರು ಅಸಮಾನ ವ್ಯಕ್ತಪಡಿಸುತ್ತಿರುವುದರಿಂದ , ಬಜೆಟ್ ತಯಾರು ಮಾಡುವಲ್ಲಿ ಪೂರ್ವಾಲೋಚನೆಯಿಲ್ದೆ ತಯಾರು ಮಾಡಿದಂತಿದೆ. ಬಜೆಟ್ ತಯಾರಿಗೆ ಮುಂಚೆ ಸದಸ್ಯರಲ್ಲಿ ಚರ್ಚೆ ಆಗಿದೆಯೇ ಎಂಬುವ ಪ್ರಶ್ನೆ ಸದಸ್ಯರ ಕೋಪಕ್ಕೆ ಗುರಿಯಾಯಿತು. ಈ ಗೊಂದಲದ ಮದ್ಯ ಅದ್ಯಕ್ಷ ರೂಪೇಶ ಕುಮಾರ್ , ನಾಮನಿರ್ದೇಶಿತ ಸದಸ್ಯರು ಸಲಹೆ ಕೊಡಬಹುದೇ ವಿನಃ ಚರ್ಚೆ ಮಾಡುವಂತಿಲ್ಲ ಎಂದು , ಸದಸ್ಯರ ಮಾತು ಮೊಟುಕು ಗೊಳಿಸುವಂತೆ ಮಾಡಿ ಸಭೆ ಕೊನೆಗೊಳಿಸಿದರು. ಸಬೆಯಲ್ಲಿ ಪೌರಾಯುಕ್ತ ಶಿವಕುಮಾರ್, ಉಪಾದ್ಯಕ್ಷ ಜೀವರತಂ ಮೊದಲಿಯಾರ್, ಸ್ಥಾಯಿಸಮಿತಿ ಅದ್ಯಕ್ಷ ಸರವಣನ್ ಉಪಸ್ಥಿತರಿದ್ದರು,


