ತೆಕ್ಕಲಕೋಟೆ ಕಾಡು ಸಿದ್ದೇಶ್ವರ ಜಾತ್ರೆ ; ವೀರಭದ್ರೇಶ್ವರ ಕಲಾವಿದರ  ಸಂಘದಿಂದ ಬಯಲಾಟ ಪ್ರದರ್ಶನ 

MK HasiruKranti
ತೆಕ್ಕಲಕೋಟೆ ಕಾಡು ಸಿದ್ದೇಶ್ವರ ಜಾತ್ರೆ ; ವೀರಭದ್ರೇಶ್ವರ ಕಲಾವಿದರ  ಸಂಘದಿಂದ ಬಯಲಾಟ ಪ್ರದರ್ಶನ 
WhatsApp Group Join Now
Telegram Group Join Now
ಬಳ್ಳಾರಿ. ಮಾ. 26: ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಪ್ರಸಿದ್ಧ ದೇವಸ್ಥಾನ ಕಾಡು ಸಿದ್ದೇಶ್ವರ ಜಾತ್ರಾ ಪ್ರಯುಕ್ತ ವೀರಭದ್ರೇಶ್ವರ ಕಲಾವಿದರ  ಸಂಘ, ಎಂ ಗೋನಾಳ್  ವತಿಯಿಂದ  ರತಿ ಕಲ್ಯಾಣ ಅರ್ಥಾತ್ ಕೌಂಡ್ಲಿಕನ  ವಧೆ ಎಂಬ ಸಾಮಾಜಿಕ  ನಾಟಕವನ್ನು  ಪ್ರಸ್ತುತಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿರುಗುಪ್ಪ ಶಾಸಕ ಬಿ ಎಂ ನಾಗರಾಜ್ ಮಾತನಾಡಿ,  ಕಲೆಗಳು ನಮ್ಮ ನಾಡಿನ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸಿ ಬೆಳೆಸುವ ಕೆಲಸ ವಾಗುತ್ತದೆ ಜೊತೆಗೆ ಕಲಾವಿದರು ಸಹ ಇಂತಹ ಕಲೆಗಳಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ರಂಗಭೂಮಿಗೆ ತಮ್ಮ  ಅನನ್ಯವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಇಂದು ಕಲಾವಿದರ ಸೇವೆಯನ್ನು ಶ್ಲಾಘಿಸಿದರು.
 ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಾಜಿ ಶಾಸಕ ಸೋಮಲಿಂಗಪ್ಪ ಮುಖಂಡರಾದ ತಿಮ್ಮಪ್ಪ ಹೊನ್ನೂರಪ್ಪ ಮಲ್ಲಯ್ಯ ಅರಳಿ ಜಂಬಯ್ಯ ಸೇರಿದಂತೆ ಇತರರಿದ್ದರು.
WhatsApp Group Join Now
Telegram Group Join Now
Share This Article