ಅಖಿಲ ಭಾರತ ಕ್ರೈಸ್ತ ಮಹಾ ಸಭಾ, ಜಿಲ್ಲಾ ಘಟಕ ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ. ಮಾ. 26.: ಅಖಿಲ ಭಾರತ ಕ್ರೈಸ್ತ ಮಹಾಸಭಾ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಅಧ್ಯಕ್ಷರು ಮತ್ತು ಉಸ್ತುವಾರಿಗಳಾದ ಜಿ ನುಂಕೇಶ್ ಡೇವಿಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಘದ ಕಚೇರಿಯಲ್ಲಿ ಇಂದು ಜಿಲ್ಲಾ ಘಟಕದ ಅಧ್ಯಕ್ಷರಾದ ಜಿ ನುಂಕೇಶ್ ಡೇವಿಡ್ ಅಧ್ಯಕ್ಷತೆಯಲ್ಲಿ ಎಲ್ಲಾ ಸದಸ್ಯರು ಸಭೆ ಸೇರಿ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡರು. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರನ್ನಾಗಿ H ವೆಂಕಟೇಶ , ಕಾರ್ಯದರ್ಶಿಯಾಗಿ B. ಉಮೇಶ ಇವರನ್ನು ನೇಮಕ ಮಾಡಲಾಯಿತು ಮತ್ತು ತಾಲೂಕು ವಾರು ಪದಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ಬಳ್ಳಾರಿ ತಾಲೂಕಿನ ಗ್ರಾಮಾಂತರ ಘಟಕದ ಅಧ್ಯಕ್ಷ ರನ್ನಾಗಿ H. ಹೊನ್ನುರ್ ಸ್ವಾಮಿ ಕಾರ್ಯದರ್ಶಿಯನ್ನಾಗಿ ಸುರೇಶ್ A K ಇವರನ್ನು, ಕಂಪ್ಲಿ ತಾಲೂಕಿನ ಅಧ್ಯಕ್ಷರನ್ನಾಗಿ ಪಂಪಾಪತಿ, ಕಾರ್ಯದರ್ಶಿಯನ್ನಾಗಿ ದಯಾನಂದ್ ಇವರನ್ನು . ಸಿರುಗುಪ್ಪ ತಾಲೂಕಿನ ಘಟಕದ ಅಧ್ಯಕ್ಷರನ್ನಾಗಿ ದೇವೇಂದ್ರ. B.S, ಉಪಾಧ್ಯಕ್ಷರನ್ನಾಗಿ ದೇವರಾಜ್ ರವರನ್ನು, ಕಾರ್ಯದರ್ಶಿಯನ್ನಾಗಿ ರಾಘವೇಂದ್ರ ರವರನ್ನು . ಸಂಡೂರು ತಾಲೂಕಿನ ಅಧ್ಯಕ್ಷರನ್ನಾಗಿ ಶೇಖರ್, ಉಪಾಧ್ಯಕ್ಷರನ್ನಾಗಿ ಶ್ಯಾಮ್ ರವರನ್ನು ಕಾರ್ಯದರ್ಶಿಯನ್ನಾಗಿ ಎಸ್ ಸತೀಶ್ ರವರನ್ನು ಖಜಾಂಚಿಯಾಗಿ ಹಂಪಯ್ಯ ಇವರನ್ನು ಮತ್ತು ಸಂಘದ ಸದಸ್ಯರು ಜಾಕೋಬ್ ಇವರನ್ನು . ಕುರುಗೋಡು ತಾಲೂಕಿನ ಅಧ್ಯಕ್ಷರನ್ನಾಗಿ ಶಾಂತರಾಜ್, ಉಪಾಧ್ಯಕ್ಷರನ್ನಾಗಿ ಸುಧಾಕರ್, ಕಾರ್ಯದರ್ಶಿ ಯನ್ನಾಗಿ ಶ್ಯಾಮುವೆಲ್, ಖಜಾಂಚಿಯಾಗಿ ಚಂದ್ರರವರನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎಂದು ಸಂಘದ ಸಂಚಾಲಕರಾದ ಉಮೇಶ್ ಪಾಸ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


