ಸಂಕೇಶ್ವರ : ಐತಿಹಾಸಿಕ ಶ್ರೀ ಮಹಾಲಕ್ಷ್ಮಿ ದೇವಿ 2027ರಲ್ಲಿ ನಡೆಯುವ ಜಾತ್ರಾ ಉತ್ಸವ ಸಮಿತಿಯ ಅಧ್ಯಕ್ಷ ಸ್ಥಾನಕ್ಕಾಗಿ ಹಲವು ದಿನಗಳಿಂದ ಮುಖಂಡರ ನಡುವೆ ಹಗ್ಗ ಜಗ್ಗಾಟ ನಡೆದಿತ್ತು, ಅದರಂತೆ ಅಧ್ಯಕ್ಷರಾಗಿ ಅಪ್ಪಾಸಾಹೇಬ್ ಶಿರಕೋಳಿ ಹಾಗೂ ಉಪಾಧ್ಯಕ್ಷರಾಗಿ ಅಮರ ನಲವಡೆ ಆಯ್ಕೆಯಾದರು.
ಪಟ್ಟಣದ ಶ್ರೀ ಮಹಾಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಸಂಕೇಶ್ವರದ ಸರ್ವ ಸಮುದಾಯದವರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.
ಮೊದಲಿಗೆ ಸಭೆಯಲ್ಲಿ ಹಿಂದೆ ಜಾತ್ರೆಯ ಅಧ್ಯಕ್ಷರಾಗಿದ ಹಿರಿಯರಾದ ಅಪ್ಪಾಸಾಹೇಬ್ ಶಿರಕೋಳಿ ಅವರನ್ನೇ ಮರು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಮರ ನಲವಡೆ, ಕಾರ್ಯದರ್ಶಿಯಾಗಿ ಸುನೀಲ ಪರ್ವತರಾವ ಆಯ್ಕೆ ಮಾಡಲಾಯಿತು.
ನಂತರ ಕಾರ್ಯದರ್ಶಿ ಸ್ಥಾನಕ್ಕಾಗಿ ಸಭೆಯ ಅಭಿಪ್ರಾಯ ಕೇಳಿದಾಗ ಸಭೆಯಲ್ಲಿನ ಎರಡು ಬಣಗಳ ನಡುವೆ ಕೇಲ ಹೊತ್ತು ತಮ್ಮ ಬೆಂಬಲಿಗರಿಗೆ ಕಾರ್ಯದರ್ಶಿ ಸ್ಥಾನ ನೀಡಬೇಕು ಎಂಬ ಕೂಗಾಟ ಗದ್ದಲ, ಪರ -ವಿರೋಧ ಕೇಳಿ ಬಂದವು.
ಸಭೆಯಲ್ಲಿ ಕಾರ್ಯದರ್ಶಿ ಸ್ಥಾನಕ್ಕಾಗಿ
ಎರಡು ಗುಂಪುಗಳ ನಡುವೆ ಕೂಗಾಟ, ಜೈಕಾರ, ವಾದ್ವಾದಗಳು ನಡೆದು ಸಭೆಯಲ್ಲಿ ಕೇಲ ಹೊತ್ತು ಉದ್ವಿಗ್ನ ವಾತಾವರಣ ಸೃಷ್ಟಿಯಾಗುತ್ತಿದಂತೆ ಪೋಲಿಸ ಅಧಿಕಾರಿಗಳಾದ ವಿಠ್ಠಲ ನಾಯಿಕ ಅವರು ತಂಡವು ವಾತಾವರಣ ತಿಳಿಗೊಳಿಸಲು ಹರಸಾಹಸ ಪಟ್ಟು ಪರಿಸ್ಥಿತಿಯನ್ನು ಹತೋಟಿಗೆ ತಂದರು.
ನಂತರ ಒಂದು ಗಂಟೆಯವರೆಗೆ ಪ್ರತೇಕ ಸಭೆ ನಡೆಸಿದ ಬಳಿಕ ಅಧ್ಯಕ್ಷ ಅಪ್ಪಾಸಾಹೇಬ್ ಶಿರಕೋಳಿ ಅವರ ಸಲಹೆಯಂತೆ ಕೊನೆಗೆ ಕಾರ್ಯದರ್ಶಿಯಾಗಿ ಬಸನಗೌಡ ಪಾಟೀಲ ಹಾಗೂ ಉಪ ಕಾರ್ಯದರ್ಶಿಯಾಗಿ ರಾವಸಾಹೇಬ್ ದೇಸಾಯಿ ಅವರನ್ನು ಆಯ್ಕೆ ಮಾಡಿ ಎರಡು ಗುಂಪುಗಳನ್ನು ಶಾಂತಗೊಳಿದರು.
ಕೊನೆಗೂ ಪೂರ್ವಭಾವಿ ಸಭೆಯಲ್ಲಿ ಜಾತ್ರಾ ಸಮಿತಿಯ ಪದಾಧಿಕಾರಿಗಳು ಆಯ್ಕೆ ನಡೆಯಿತು. ಮುಂದಿನ ಸಭೆಯಲ್ಲಿ ಬರುವ 2027 ರ ಜಾತ್ರೆಯ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಅಧ್ಯಕ್ಷರಾದ ಅಪ್ಪಾಸಾಹೇಬ್ ಶಿರಕೋಳಿ ಅವರು ತಿಳಿಸಿದರು.
ಹಕ್ಕುದಾರರಾದ ಕುನಾಲ್ ಪಾಟೀಲ(ಖಾತೇದಾರ), ಬಸವನಿ ಕರದೇಗೌಡ, ಬಾಲಕೃಷ್ಣ ಕುಲಕರ್ಣಿ ಅಪ್ಪಾಸಾಹೇಬ ಶಟ್ಟಿಮನಿ, ಸಂತೋಷ ಹವಾಲ್ದಾರ್, ಗಿರೀಶ್ ಕುಲಕರ್ಣಿ, ಮುಖಂಡರಾದ ಶಿವಾನಂದ ಮುಡಶಿ, ಸಂಜಯ ಶಿರಕೋಳಿ, ಗಜಾನನ ಕ್ವಳ್ಳಿ, ಶ್ರೀಕಾಂತ ಹತನೂರೆ, ಅಜೀತ ಕರಜಗಿ,ಸುರೇಶ ಮರಡಿ, ಸುಭಾಷ ಕಾಸರಕರ, ಅವಿನಾಶ ನಲವಡೆ, ಸಂದೀಪ ದವಡತೆ, ಉಮೇಶ ಕಾಂಬಳೆ, ಸಂತೋಷ ಪಾಟೀಲ,ಸುನೀಲ ಪಾಟೀಲ,ಸಚಿನ ಸಪಾಟೆ ಸೇರಿದಂತೆ ಅನೇಕರು ಹಾಜರಿದ್ದರು


