ಸ್ಥಳೀಯ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸಬೇಕು – ಜಾತ್ರಾ ಮಹೋತ್ಸವ ೭ ದಿನಕ್ಕೆ ಸೀಮಿತಗೊಳ್ಳಿಸಲು ಒತ್ತಾಯ

MK HasiruKranti
ಸ್ಥಳೀಯ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸಬೇಕು – ಜಾತ್ರಾ ಮಹೋತ್ಸವ ೭ ದಿನಕ್ಕೆ ಸೀಮಿತಗೊಳ್ಳಿಸಲು ಒತ್ತಾಯ
WhatsApp Group Join Now
Telegram Group Join Now

ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಜಾತ್ರಾ ಮಹೋತ್ಸವ ಅಧ್ಯಕ್ಷರಿಗೆ ಮನವಿ

ಗದಗ ೨೫, ಶ್ರೀ ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವವು ಇದೇ ಎಪ್ರಿಲ್ ೦೧ ರಿಂದ ೦೪ ತಾರೀಖ ವರೆಗೆ ಜರುಗಲಿದೆ. ಕಾರಣ ಜಾತ್ರೆ ಮಹೋತ್ಸವ ಅಧಿಕೃತವಾದ ಆಮಂತ್ರಣ ಪತ್ರಿಕೆಯೇ ಕೇವಲ ನಾಲ್ಕು ದಿನಗಳ ಕಾಲ ಇರುವಾಗ ಜಾತ್ರೆ ಮಹೋತ್ಸವು ತಿಂಗಳಾನುಗಟ್ಟಲೆ ನಡೆಸುವುದು ಸರಿಯಲ್ಲ ಅದಕ್ಕಾಗಿ ಜಾತ್ರಾ ಮಹೋತ್ಸವವು ಕೇವಲ ೭ ದಿನಗಳಿಗೆ ಸಿಮಿತಗೊಳ್ಳಿಸಿಬೇಕು ಹಾಗೂ ಜಾತ್ರಾ ಮಹೋತ್ಸವಕ್ಕೆ ದೇಣಿಗೆಗೆ, ಸೇವೆಗೆ ಸ್ಥಳೀಯ ಭಕ್ತರು ಬೇಕು, ವ್ಯವಹಾರಕ್ಕೆ ಮಾತ್ರ ಯಾಕೆ ಅನ್ಯ ರಾಜ್ಯದವರು ಬೇಕೆ ಎಂದು ಪ್ರಶ್ನಿಸಿ ೨೦೨೬ ನೇ ಸಾಲಿನ ಜಾತ್ರಾ ಮಹೋತ್ಸವದ ಅಧ್ಯಕ್ಷರಾದ ವಿನಾಯಕ ಮಾನ್ವಿಯವರಿಗೆ ಮನವಿ ಸಲ್ಲಿಸಿದರು. ತಿಂಗಳಾನುಗಟ್ಟಲೆ ಜಾತ್ರೆ ಮಹೋತ್ಸವವು ನಡೆಯುದರಿಂದ ಸ್ಥಳೀಯ ವ್ಯಾಪಾರಿಗಳಿಗಳು ಬಂಡವಾಳ ಹಾಕಿ, ಕಾರ್ಮಿಕರನ್ನು ನೇಮಿಸಿಕೊಂಡು ಹಾಗೂ ಸಾವಿರಾರು ರೂಪಾಯಿಗಳ ಬಾಡಿಗೆ ನೀಡಿ ವ್ಯಾಪಾರ ವಹಿವಾಟು ಇಲ್ಲದೇ ಆರ್ಥಿಕ ಸಂಕ?ಕ್ಕೆ ಸಿಲುಕುತ್ತಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಯಾವುದೇ ಕೈಗಾರಿಕಾಗಳು ಇಲ್ಲದೇ ಇರುವುದರಿಂದ ಯುವಕರು ನಿರುದ್ಯೋಗಿಗಳಾಗಿ ಮಾನಸಿಕ ಒತ್ತಡ ಸಿಲುಕಿ ದು?ಚಟ್ಟಗಳ ದಾಸ್ಯರಾಗುತ್ತಿದ್ದಾರೆ. ರಥ ಬೀದಿಯು ಸಾರ್ವಜನಿಕವಾಗಿರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಜೊತೆಗೆ ಅನೇಕ ರೀತಿಯ ತೊಂದರೆಗಳು ಆಗುತ್ತಿವೆ. ವಿಶೇಷವಾಗಿ ಸಾರ್ವಜನಿಕ ಮಾರ್ಗವಾದ ರಥೋತ್ಸವ ಜರುಗುವ ರಸ್ತೆಯಲ್ಲಿರುವ ಶ್ರೀಮಠ ವಾಣಿಜ್ಯ ಸಂಕೀರ್ಣಗಳಲ್ಲಿ ಇರುವ ಮಾಲೀಕರು ಈ ಜಾತ್ರಾ ಮಹೋತ್ಸವದಿಂದ ಆಗುವು ತೊಂದರೆ ಯಾರಿಗೂ ಹೇಳದೆ ತಾವು ಸಹಿಸದೇ ಅವರ ಆರ್ಥಿಕವಾಗಿ ಸ್ಥಿತಿ ಅದೋಗತ್ತಿ ಬಂದಿದೆ. ಈ ವಿ?ಯಗಳನ್ನು ಗಂಭೀರವಾಗಿ ಪರಿಗಣಿಸಿ ಜಾತ್ರಾ ಮಹೋತ್ಸವದಲ್ಲಿ ಸ್ಥಳೀಯ ವ್ಯಾಪಾರಸ್ಥರಿಗೆ ಅವಕಾಶ ನೀಡಿ. ೭ ದಿನಕ್ಕೆ ಜಾತ್ರಾ ಮಹೋತ್ಸವವನ್ನು ಸೀಮಿತಗೊಳ್ಳಿಸಲು ಆಗ್ರಹಿಸಿ ಮತ್ತು ಈ ವ್ಯವಸ್ಥೆ ಈ ವ?ದ ಮುಂದೆವರೆದರೆ ಹೋರಾಟ ಅನಿವಾರ್ಯ ಎಂದು ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆಯ ಸತೀಶ ಕುಂಬಾರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತ್ತು. ಈ ಸಂದರ್ಭದಲ್ಲಿ ಮಹೇಶ ರೋಖಡೆ, ರಾಜು ಗದ್ದಿ, ಪಿ. ಎಸ್. ಕಾಳೆ, ರಾಜು ದಮಾಮ, ಕುಮಾರ ನಡಗೇರಿ, ಶರಣೇಶ ಇಟಗಿ, ವೆಂಕಟೇಶ ದೊಡ್ಡಮನಿ, ಅಶೋಕ ಭಜಂತ್ರ, ಸಂಜೀವ ವಾಲ್ಮೀಕಿ, ರವಿ ಜಾಲಗಾರ, ರಾಮು ಗೌಡರ, ಸದಾನಂದಸಿಂಗ್ ಗುರ್ಲಹೋಸೂರ ಮುಂತಾದವರು ಭಾಗಿಯಾಗಿದ್ದರು.

WhatsApp Group Join Now
Telegram Group Join Now
Share This Article