ಯರಗಟ್ಟಿ: ಅತಿಯಾದ ಗೊಬ್ಬರ,ಕ್ರಿಮಿನಾಶಕ, ಔ?ದ ಬಳಿಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡು, ಬರಡು ಭೂಮಿಯಾಗಿ ಮಾರ್ಪಡಾಗುತ್ತದೆ ಪ್ರತಿಯೊಬ್ಬ ರೈತರೂ ಈ ಕುರಿತು ಜಾಗೃತರಾಗವುದು ಅಗತ್ಯವಿದೆ ಎಂದು ಕೆನೇರಿ ಮಠದ ಕಾಡಶಿದ್ಧೇಶ್ವರ ಸ್ವಾಮೀಜಿ ಹೇಳಿದರು,
ಸಮೀಪದ ರೈನಾಪೂರ ಗ್ರಾಮದ ಶ್ರದ್ಧಾನಂದ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಪಯಜ್ಞ ಮತ್ತು ವೇದಾಂತ ಮಹೋತ್ಸವವದ ಮೂರನೇಯ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ರಾಸಾಯನಿಕ ಗೊಬ್ಬರ ಬಳಿಸುವದರಿಂದ ಕ್ಯಾನ್ಸರ್, ರಕ್ತದ, ಒತ್ತಡ. ಸಕ್ಕರೆ, ಇನ್ನೂ ಅನೇಕ ಮಾರಣಾಂತಿಕ ಕಾಯಲೆಗಳು ಉಲ್ಬಣಗೊಳ್ಳುತ್ತವೆ, ರೈತ ಸಮುದಾಯ ಹೆಚ್ಚು ಸಾವಯುವ ಕೃಷಿ ಪದ್ದತಿ ಅನುಸರಿಸಿದಲ್ಲಿ ಆರೋಗ್ಯವಂತ ಸಮಾಜ ನಿರ್ಮಮಾಣ ಸಾಧ್ಯವಿದೆ ಎಂದರು.
ಸಾವಯವ ಕೃಷಿಯು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ, ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ ಮತ್ತು ಆರೋಗ್ಯಕರ, ರಾಸಾಯನಿಕ-ಮುಕ್ತ ಆಹಾರವನ್ನು ಒದಗಿಸುತ್ತದೆ. ಇದು ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ಸುಸ್ಥಿರ ಅಭಿವೃದ್ಧಿ ಹಾಗೂ ರೈತರ ಆರ್ಥಿಕ ಸಬಲೀಕರಣಕ್ಕೆ ನೆರವಾಗುವ ಅತ್ಯಗತ್ಯ ಕೃಷಿ ಪದ್ಧತಿಯಾಗಿದೆ ಎಂದು ಹೇಳಿದರು.
ಈ ವೇಳೆ ಹಂಚಿನಾಳ ಮಠದ ಮಹೇಶಾನಂದ ಸ್ವಾಮೀಜಿ ಮಾತನಾಡಿ, ರೈತರು ಕಬ್ಬು, ಗೋವಿನ ಜೋಳ, ಹತ್ತಿ ಮುಂತಾದ ವಾಣಿಜ್ಯ ಬೆಳಗಳಿಗೆ ಸಿಮೀತವಾಗದೆ; ಕೋಳಿ, ಕುರಿ. ಹೈನುಗಾರಿಕೆ, ಇಂತಹ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡರೆ ಆರ್ಥಕವಾಗಿ ಸಬಲರಾಗ ಸಾದ್ಯವಾಗುತ್ತದೆ ಎಂದರು
ಈ ವೇಳೆ ಗೊಡಗೇರಿ ಮಠದ ಮಲ್ಲಯ್ಯ ಸ್ವಾಮೀಜಿ, ಅಮಲಝರಿಮಠದ ಜ್ಞಾನಮಯಾನಂದ ಸ್ವಾಮೀಜಿ. ದಾಡಬಾಯಿ ಮಠದ ಮಲ್ಲಯ್ಯ ಸ್ವಾಮೀಜಿ, ರೈನಾಪೂರ ಮಠದ ಮಾತೋಶ್ರೀ ಪಾರ್ವತಿತಾಯಿ, ಮಾತೋಶ್ರೀ ಮುದ್ದಮ್ಮತಾಯಿ, ಶ್ರದ್ಧಾನಂದ ಮಠದ ಭೂ ದಾನಿಗಳಾದ ಭರಮಪ್ಪ ಜೋಗಿ, ಬಸಯ್ಯ ಹಿರೇಮಠ, ವಿರೂಪಾಕ್ಷ ಮಾಮನಿ, ಜಗದೀಶ ಕೌಜಗೇರಿ, ರಾಜೇಂದ್ರಗೌಡ ಪಾಟೀಲ, ವೆಣಕಟೇಶ ದೇವರಡ್ಡಿ, ಕೃಷ್ಣಮೂರ್ತಿ ತೋರಗಲ್ಲ, ಚಂದ್ರು ತೋರಣಕಟ್ಟಿ, ಪಕೀರಪ್ಪ ಕಾನನ್ನವರ, ವಿಠ್ಠಲ ಕಳ್ಳಿಗುದ್ದಿ, ಚಂದ್ರು ಅಳಗೋಡಿ, ಬಂಡಿವಡ್ಡರ, ವೆಂಕಣ್ಣ ಹುರಕ್ಕನ್ನವರ, ಗೋಪಾಲ ಕಡೆಮನಿ, ರಾಜು ಕಳ್ಳಿಗುದ್ದಿ, ಗೋವಿಂದ ಕಡೆಮನಿ, ಬಸಪ್ಪ ಶಿದ್ನಾಳ, ಶಂಕರ ಕಳ್ಳಿಗುದ್ದಿ, ಮಲ್ಲಪ್ಪ ಹೋಗಾರ, ಮಹಾಂತೇಶ ಅಡಕಿ, ಮಸಂಗಯ್ಯ ಕುಂಬಾರಗೇರಿಮಠ ಸೇರಿದಂತೆ ಅನೇಕರು ಇದ್ದರು,


