ಬಳ್ಳಾರಿ, ಮಾ.25: ನಗರದ ಗವಿಯಪ್ಪ ಸರ್ಕಲ್ ನಲ್ಲಿ ಇಂದು ಬೆಳಿಗ್ಗೆ ಮಸ್ಕಿಯಿಂದ ನಗರಕ್ಕೆ ಬಂದ ಕೆಕೆಆರ್ ಟಿಸಿ ಬಸ್. ಸರ್ಕಲ್ ನಲ್ಲಿ ಪ್ರಸಯಾಣಿಕರನ್ನು ಇಳಿಸಿ. ಬಸ್ ನಿಲ್ದಾಣಕ್ಜೆ ತೆರಳವ ಮುನ್ನ ಬ್ರೇಕ್ ಫೇಲ್ ಆಗಿ ಅಲ್ಲಿಯೇ ಇದ್ದ ಹಣ್ಣಿನ ಅಂಗಡಿಗೆ ಡಿಕ್ಕಿ ಹೊಡೆದಿದೆ.ಇದರಿಂದಾಗಿ ಓರ್ವ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾಳೆ.
ಬಸ್ ಅಲ್ಲಿನ ಜಾಹಿರಾತು ಫಲಕಕ್ಕೆ ಗುದ್ದಿದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ . ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


