ಬಳ್ಳಾರಿ ಗ್ರಾಮಾಂತರದಲ್ಲಿ ಪಂಡಿತ್ ದಿನ್ ದಯಾಳ್ ಉಪಾಧ್ಯಾಯರ ಪ್ರಶಿಕ್ಷಣ ವರ್ಗ ಮಹಾಭಿಯಾನಕ್ಕೆ ಚಾಲನೆ

MK HasiruKranti
ಬಳ್ಳಾರಿ ಗ್ರಾಮಾಂತರದಲ್ಲಿ ಪಂಡಿತ್ ದಿನ್ ದಯಾಳ್ ಉಪಾಧ್ಯಾಯರ ಪ್ರಶಿಕ್ಷಣ ವರ್ಗ ಮಹಾಭಿಯಾನಕ್ಕೆ ಚಾಲನೆ
WhatsApp Group Join Now
Telegram Group Join Now
ಬಳ್ಳಾರಿ: 24:..ಗ್ರಾಮಾಂತರ ಕ್ಷೇತ್ರದ ಮೋಕಾ ಗ್ರಾಮದ ಹನಿ ಫಂಕ್ಷನ್ ಹಾಲ್‌ನಲ್ಲಿ ಸೋಮವಾರ ಗ್ರಾಮಾಂತರ ಮಂಡಲದ ವತಿಯಿಂದ ಆಯೋಜಿಸಿದ್ದ ‘ಪಂಡಿತ್ ದಿನ್ ದಯಾಳ್ ಉಪಾಧ್ಯಾಯರ ಪ್ರಶಿಕ್ಷಣ ವರ್ಗ ಮಹಾಭಿಯಾನ–2026’ ಕಾರ್ಯಕ್ರಮಕ್ಕೆ ಉದ್ಘಾಟನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ಉದ್ದೇಶದಿಂದ ಕಾರ್ಯಕರ್ತರಿಗೆ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಾಯಿತು. ಪಕ್ಷದ ಶಕ್ತಿಯಾಗಿರುವ ಕಾರ್ಯಕರ್ತರು ಪ್ರಶಿಕ್ಷಣ ವರ್ಗದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಂಘಟನೆ ವೃದ್ಧಿಗೆ ಅಗತ್ಯವಾದ ಸಲಹೆ, ಸೂಚನೆಗಳನ್ನು ಪಡೆದುಕೊಂಡರು. ಮುಂದಿನ ದಿನಗಳಲ್ಲಿ ಇನ್ನಷ್ಟು ತೊಡಗಿಸಿಕೊಂಡು ಪಕ್ಷವನ್ನು ಬಲಿಷ್ಠಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ಮುಖಂಡರು ತಿಳಿಸಿದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಲಾಯಿತು.
ವೇದಿಕೆಯಲ್ಲಿ ಬಳ್ಳಾರಿ ಪ್ರಭಾರಿಗಳಾದ ಅಮರನಾಥ ಪಾಟೀಲ್, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕ, ಮಾಜಿ ಸಂಸದ ಸಣ್ಣ ಪಕ್ಕಿರಪ್ಪ, ರಾಜ್ಯ ಎಸ್ಟಿ ಉಪಾಧ್ಯಕ್ಷ ಹಾಗೂ ಗ್ರಾಮಾಂತರ ಕ್ಷೇತ್ರದ ಮುಖಂಡ ಓಬಳೇಶ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
WhatsApp Group Join Now
Telegram Group Join Now
Share This Article