ಜನತಾನಗರದಲ್ಲಿ ಶಾಸಕ ಭರತ್ ರೆಡ್ಡಿ ಭೇಟಿ: ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಭರವಸೆ

MK HasiruKranti
ಜನತಾನಗರದಲ್ಲಿ ಶಾಸಕ ಭರತ್ ರೆಡ್ಡಿ ಭೇಟಿ: ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಭರವಸೆ
WhatsApp Group Join Now
Telegram Group Join Now
ಬಳ್ಳಾರಿ: 24;..ನಗರದ ವಾರ್ಡ್ ನಂ. 18ರ ಜನತಾನಗರ ಪ್ರದೇಶಕ್ಕೆ ಶಾಸಕ ಭರತ್ ರೆಡ್ಡಿ ಅವರು ಇಂದು ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಜನರೊಂದಿಗೆ ನೇರ ಸಂವಾದ ನಡೆಸಿದ ಅವರು, ಮೂಲಭೂತ ಸೌಕರ್ಯಗಳ ಕೊರತೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು.
ಭೇಟಿ ವೇಳೆ ಜನರು ರಾಜಕಾಲುವೆ ಸಮಸ್ಯೆ, ಹಾಳಾಗಿರುವ ರಸ್ತೆಗಳು, ಸಮರ್ಪಕ ಚರಂಡಿ ವ್ಯವಸ್ಥೆಯ ಕೊರತೆ ಸೇರಿದಂತೆ ಹಲವು ಅಸೌಕರ್ಯಗಳನ್ನು ಶಾಸಕ ಗಮನಕ್ಕೆ ತಂದರು. ಇದರ ಜೊತೆಗೆ ಸ್ಥಳೀಯ ಶಾಲೆಗಳು ಮತ್ತು ದೇವಾಲಯಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಭರತ್ ರೆಡ್ಡಿ ಅವರು, ಜನತಾನಗರದ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು. ವಿಶೇಷವಾಗಿ ರಾಜಕಾಲುವೆ ಸುಧಾರಣೆ, ರಸ್ತೆ ಕಾಮಗಾರಿಗಳು ಹಾಗೂ ಚರಂಡಿ ವ್ಯವಸ್ಥೆ ಸುಧಾರಣೆಗೆ ಆದ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾರ್ಪೊರೇಟರ್ ನಂದೀಶ್, ಹಗರಿ ಗೋವಿಂದ್, ಗುಂತಕಲ್ ಸುರೇಶ್, ಕಟ್ಟೇಮನೆ ನಾಗೇಂದ್ರ ಸೇರಿದಂತೆ ಹಲವು ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ಸಮಸ್ಯೆಗಳ ಪರಿಹಾರಕ್ಕಾಗಿ ಶಾಸಕರಿಗೆ ಮನವಿ ಸಲ್ಲಿಸಿದರು.
ಸ್ಥಳೀಯರೊಂದಿಗೆ ನೇರ ಸಂಪರ್ಕ ಸಾಧಿಸಿದ ಈ ಭೇಟಿ, ಜನತಾನಗರದ ಅಭಿವೃದ್ಧಿಗೆ ಹೊಸ ನಿರೀಕ್ಷೆ ಮೂಡಿಸಿದೆ.
WhatsApp Group Join Now
Telegram Group Join Now
Share This Article