ಬಳ್ಳಾರಿ, ಮಾ.24:: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಜಿಲ್ಲಾ ಸಮಿತಿಯಿಂದ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಶಿವರಾಮ್ ರಾಜಗುರು ಮತ್ತು ಸುಖದೇವ್ ಠಾಪರ್ ಅವರ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. ಜಿಲ್ಲಾ ಅಧ್ಯಕ್ಷ ಯು. ಎರ್ರಿಸ್ವಾಮಿ ಮಾತನಾಡಿ, 1931ರ ಮಾರ್ಚ್ 23ರಂದು ಈ ಮೂವರು ಕ್ರಾಂತಿಕಾರಿಗಳು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ತ್ಯಾಗ ಮಾಡಿದ ದಿನವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.
ಯುವಕರು ಅವರ ದೇಶಭಕ್ತಿ, ಸಾಹಸ ಮತ್ತು ಆದರ್ಶಗಳನ್ನು ಅಳವಡಿಸಿಕೊಂಡು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಡಿವೈಎಫ್ಐ ನ ಜಿಲ್ಲಾ ಉಪಾಧ್ಯಕ್ಷ ಬೈಲ ಹನುಮಪ್ಪ, ಜಿಲ್ಲಾ ಖಜಾಂಚಿ ಬಿಪಿ. ನವೀನ್, ಜಿಲ್ಲಾ ಕ್ರೀಡಾ ಅಧ್ಯಕ್ಷ ಜಿ.ಎನ್. ಎರ್ರಿಸ್ವಾಮಿ, ಬಳ್ಳಾರಿ ತಾಲೂಕು ಅಧ್ಯಕ್ಷ ಎ. ತಿಪ್ಪೇರುದ್ರ, ಕಾರ್ಯದರ್ಶಿ ಹೆಚ್. ಎರ್ರಿಸ್ವಾಮಿ, ಕೊಳಗಲ್ಲು ಮಸ್ತಾನ್ ಸಾಬ್, ಕೆ. ಶಿವಾನಂದ, ಕಾರೆಕಲ್ಲು ಸಿರಾಜ್, ಶೇಖರ್, ಮೊಹಮ್ಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


