ಹೊಸಪೇಟೆ :ಮಾನವನಿಂದ ಮಾನವನ ಶೋಷಣೆ ಕೊನೆಗಾಣಬೇಕು ಎಂಬುದು ಭಗತ್ ಸಿಂಗ್ ಅವರ ಆಶಯವಾಗಿತ್ತು.” ಎಂದು ಯು ಉಮಾದೇವಿ ವಿಜಯನಗರ ಜಿಲ್ಲಾ ಕಾರ್ಯದರ್ಶಿ ಎಐಡಿಎಸ್‌ಓ ಹೇಳಿದರು. ಶೋಷಣೆಯನ್ನು ಕೊನೆಗಾಣಿಸುವುದೇ ಭಗತ್ ಸಿಂಗ್ ರವರ ಅರ್ಥದಲ್ಲಿ ನಿಜವಾದ ಸ್ವಾತಂತ್ರ್ಯ ಆಗಿತ್ತು. ಅವರು ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ ಗುರು ಅವರ ಹುತಾತ್ಮ ಅವರ ಹುತಾತ್ಮ ದಿನಾಚರಣೆ ಅಂಗವಾಗಿ ಹೊಸಪೇಟೆಯ ಜಬ್ಬಲ್ ಸರ್ಕಲ್, ಮಾರುತಿ ಕಾಲೋನಿ ಮತ್ತು ಡಾ. ಪುನೀತ್ ರಾಜ್ ಕುಮಾರ ಕ್ರೀಡಾಂಗಣದಲ್ಲಿ ಎಐಡಿಎಸ್‌ಓ ವತಿಯಿಂದ ಹುತಾತ್ಮ ದಿನವನ್ನು ಆಚರಿಸಿ ಮಾತನಾಡಿದರು.
ಬ್ರಿಟಿಷರ ಹಿಡಿತದಿಂದ ಭಾರತೀಯರು ವಿಮುಕ್ತರಾದ ನಂತರ ಈ ದೇಶದ ದೊಡ್ಡ ದೊಡ್ಡ ಜಮೀನ್ದಾರರು, ವ್ಯಾಪಾರಸ್ಥರು, ಶ್ರೀಮಂತರಿಗೆ ಸಂಪೂರ್ಣ ಅಧಿಕಾರ ಹಸ್ತಾಂತರವಾಗುತ್ತದೆ. ಈ ಸತ್ಯವನ್ನ ನಾವು ಅರಿತುಕೊಳ್ಳಬೇಕು. ನಮ್ಮ ಒಗ್ಗಟ್ಟಿನ ಹೋರಾಟ ಸಮಾಜವಾದಕ್ಕೆ ದಾರಿ ಮಾಡಿಕೊಡಬೇಕೆ ಹೊರತು ದಾಸ್ಯಕ್ಕಲ್ಲ. ಎಂಬುದು ಅವರ ಸೂಚನೆಯಾಗಿತ್ತು. ಆದರೆ ಪ್ರಸ್ತುತ ದಿನಮಾನಗಳಲ್ಲಿ ದುಡಿಯುವ ಜನರು, ವಿದ್ಯಾರ್ಥಿಗಳು, ಯುವಜನರ ಪರಿಸ್ಥಿತಿ ಕಾದ ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗಾಗಿದೆ. ಅದೆಷ್ಟೋ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾದರೆ, ಉನ್ನತ ವ್ಯಾಸಂಗ ಮುಗಿಸಿ ದುಡಿಯಬೇಕಾದ ಯುವಕರು ನಿರುದ್ಯೋಗವನ್ನು ಎದುರಿಸುತ್ತಿದ್ದಾರೆ. ರೈತರು ಹಾಗೂ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಸಾಕಷ್ಟು ಜನ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಬೀದಿ ಬದಿಯಲ್ಲಿ ಅನಾಥವಾಗಿ ಸಾಯುತ್ತಿದ್ದಾರೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಪ್ರತೀ ದಿನ ದಾಖಲಾಗುತ್ತಿವೆ. ಆದರೆ ಆಳುವ ಸರ್ಕಾರಗಳಿಂದ ಯಾವುದೇ ಭದ್ರತೆಯ ಕ್ರಮಗಳು ನಡೆಯುತ್ತಿಲ್ಲ.
ಇನ್ನೊಂದು ಕಡೆ ಕೆಪಿಎಸ್-ಮ್ಯಾಗ್ನೆಟ್ ಹೆಸರಿನಲ್ಲಿ ರಾಜ್ಯ ಸರ್ಕಾರ ೪೦,೦೦೦ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಗಾಳಿ ಯಾವ ರೀತಿ ಪ್ರತಿಯೊಬ್ಬರಿಗೂ ದೊರಕುತ್ತದೆಯೋ ಅದೇ ರೀತಿ ಶಿಕ್ಷಣವು ಎಲ್ಲರಿಗೂ ದೊರಕಬೇಕು ಎಂಬ ಕನಸು ಭಗತ್ ಸಿಂಗ್ ಅವರದ್ದಾಗಿತ್ತು. ಆದರೆ ಇವರ ಆಶಯಕ್ಕೆ ವಿರುದ್ಧವಾಗಿ ಇಂದು ಕೆಪಿಎಸ್-ಮ್ಯಾಗ್ನೆಟ್ ಹೆಸರಲ್ಲಿ ಶಾಲೆಗಳನ್ನು ಮುಚ್ಚುವುದಕ್ಕೆ ಸರ್ಕಾರ ಮುಂದಾಗಿದೆ. ಬಡವರ ಮನೆ ಬೆಳಗುವ ಸರ್ಕಾರಿ ಶಾಲೆಗಳನ್ನು ಉಳಿಸಲು, ಭಗತ್ ಸಿಂಗ್ ಕನಸು ಕಂಡ ಭರತವನ್ನು ಕಟ್ಟಲು ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಹುತಾತ್ಮ ದಿನದಂದು ಪ್ರತಿಜ್ಞೆ ಮಾಡೋಣ ಹಾಗೂ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಈ ಎಲ್ಲಾ ಸಮಸ್ಯೆಗಳನ್ನು ಪ್ರಜ್ಞಾಪೂರ್ವಕವಾಗಿ ಹೋರಾಟದ ಮೂಲಕ ಎದುರಿಸಲು ಎಲ್ಲರೂ ಸಿದ್ಧರಾಗಬೇಕು ಎಂದು ಕರೆಕೊಟ್ಟರು.ಈ ಸಂದರ್ಭದಲ್ಲಿ ಶ್ರೀನಿವಾಸ, Sಆಒಅ ಅಧ್ಯಕ್ಷರಾದ ದೀಪ, ಅನಿಲ್, ಹನುಮಂತಪ್ಪ, ವೆಂಕಟೇಶ್ ಮತ್ತು ಇನ್ನಿತರರು ಹಾಜರಿದ್ದರು.


