ಮಹಾಲಿಂಗಪುರ : ನಗರದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಹಮ್ಮಿಕೊಂಡಂತ ಶ್ರೀ ದೇವರ ದಾಸಿಮಯ್ಯ ದಿನಾಚರಣೆ ಅಂಗವಾಗಿ ಮಾತನಾಡಿದ ಅವರು ೧೧ನೇ ಶತಮಾನದಲ್ಲಿ ಆಗಿ ಹೋದ ದಾರ್ಶನಿಕ ಸಂತ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಹಾಗೂ ದುಗ್ಗಳೆಯ ದಾಂಪತ್ಯ ಜೀವನವು ನಮಗೆಲ್ಲ ಆದರ್ಶ ಎಂದರು. ಕಡು-ಬಡತನದಲ್ಲಿ ಹುಟ್ಟಿ ನೇಕಾರಿಕೆ ಜೀವನವನ್ನು ಮಾಡುತ್ತಾ ವಚನಗಳನ್ನು ನಿರ್ಮಿಸಿ ಆಧ್ಯ ವಚನಕಾರನಾದ, ಅವರ ಬದುಕೇ ಒಂದು ವಿಸ್ಮಯ ಎಂದು ಹೇಳಿದರು. ದಿವ್ಯ ಸಾನಿಧ್ಯ ವಹಿಸಿದ ಕಲಬುರ್ಗಿಯ ಶ್ರೀ ಸೋಮೇಶ್ವರ ಸ್ವಾಮೀಜಿ ಮಾತನಾಡಿ ಶ್ರೀ ದೇವರ ದಾಸಿಮಯ್ಯನವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶ್ರೀಶೈಲಪ್ಪ ಬಾಡನವರ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಜಿ ಎಸ್ ಗೊಂಬಿ, ಶಿದಗಿರೆಪ್ಪ ಕಾಗಿ, ಪರಪ್ಪ ಬೆಳಗಲಿ, ಸತೀಶ ಸೊರಗಾಂವಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಬಸವರಾಜ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
೨೩ mಟಠಿ ೦೧ ಫೋಟೋ
ಶ್ರೀ ದೇವರ ದಾಸಸಿಮಯ್ಯ ಮತ್ತು ದುಗ್ಗಳೆಯ ದಾಂಪತ್ಯ ಜೀವನ ನಮಗೆಲ್ಲ ಆದರ್ಶ: ಶ್ರೀ ಸಹಜಾನಂದ ಶ್ರೀಗಳು


