ಮಹಾಲಿಂಗಪುರದಲ್ಲಿ ವಿಜೃಂಭಣೆಯ ರಂಜಾನ್ ! ಶುಧ್ಧ ಕುಡಿಯುವ ನೀರು ವಿತರಿಸಿ ಭಾವೈಕ್ಯತೆ ಮೆರೆದ ದಲಿತರು

MK HasiruKranti
ಮಹಾಲಿಂಗಪುರದಲ್ಲಿ ವಿಜೃಂಭಣೆಯ ರಂಜಾನ್ ! ಶುಧ್ಧ ಕುಡಿಯುವ ನೀರು ವಿತರಿಸಿ ಭಾವೈಕ್ಯತೆ ಮೆರೆದ ದಲಿತರು
WhatsApp Group Join Now
Telegram Group Join Now

ಮಹಾಲಿಂಗಪುರ: ಪಟ್ಟಣದ ಮುಸ್ಲಿಂ ಸಮುದಾಯದ ಜನರು ಶನಿವಾರ ಮುಂಜಾನೆ ಈದ್ಘಾ ಆವರಣದಲ್ಲಿ ನಮಾಜ ನಂತರ ದುವಾ ಮಾಡಿ ಹಿಂದೂ ಮುಸ್ಲಿಂ ಜನತೆಗೆ ಸಿಹಿ ಮತ್ತು ವಿವಿಧ ಖಾದ್ಯಗಳನ್ನು ವಿತರಿಸಿ ರಮ್ಜಾನ್ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಿದರು.
ಮಹಾಲಿಂಗಪುರ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಿಂದ ಆಗಮಿಸಿದ ಮುಸಲ್ಮಾನ್ ಬಾಂಧವರು ಈದ್ಘಾ ಮೈದಾನದವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದು ಈ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಪ್ರಾರ್ಥನೆಯನ್ನು ಮುಸ್ಲಿಂ ಧರ್ಮ ಗುರುಗಳಾದ ಹಣಗಂಡಿ ಗ್ರಾಮದ ಖಾರಿ ಮುಸ್ತಾಕ್ ಅಹ್ಮದ್ ಅವರು, ಮಳೆ,ಬೆಳೆ ಹಾಗೂ ವಿಶ್ವದಲ್ಲಿ ಶಾಂತಿ ನೆಮ್ಮದಿ ನೆಲೆಯೂರಲು ಇಸ್ಲಾಂ ಧರ್ಮದ ವಿಧಿ ವಿಧಾನಗಳ ಪ್ರಕಾರ ಪ್ರಾರ್ಥನೆ ಮತ್ತು ದುವಾ ಬೇಡಿದರು.
ಅಂಜುಮನ್- ಎ – ಇಸ್ಲಾಂ ಕಮಿಟಿ ೨೦೨೫-೨೬ ನೇ ಸಾಲಿನ ಖರ್ಚು, ವೆಚ್ಚವನ್ನು ಆವರಣದಲ್ಲಿ ಸೇರಿದ ಸಮಸ್ತ ಮುಸಲ್ಮಾನರ ಮುಂದೆ ಸಾದರಪಡಿಸಿದರು. ಮೌಲಾನಾ ಝಕ್ರಿಯಾಸಾಹಬ್ ರಮ್ಜಾನ್ ಮಾಸದ ಮಹತ್ವ ತಿಳಿಸಿದರೆ, ನಜೀರ್ ಅತ್ತಾರ ಮತ್ತು ದಾವಲಸಾಬ ನಗಾರ್ಚಿ ಸಮಾಜದ ಅಭಿವೃದ್ಧಿ ಪರ ಚಿಂತನ ಮಂತನ ವ್ಯಕ್ತಪಡಿಸಿದರು.
ಪ್ರಾರ್ಥನೆಗೆ ಆಗಮಿಸಿದ ಸಹಸ್ರಾರು ಸಂಖ್ಯೆ ಜನರಿಗೆ ತಂಪಾದ ಶುಧ್ಧ ಕುಡಿಯುವ ನೀರನ್ನು ದಲಿತ ಸಮಾಜದವರು ಒದಗಿಸಿ ಭಾವೈಕ್ಯತೆ ಮೆರೆದರು.ಈ ಸಂದರ್ಭದಲ್ಲಿ ಮುಖಂಡರಾದ ಅರ್ಜುನ್ ದೊಡಮನಿ, ಲಕ್ಷ್ಮಣ ಮಾಂಗ, ಶೇಖರ ಉತ್ತೂರ, ರಾಘವೇಂದ್ರ ಆಣೆಪ್ಪಗೋಳ,ಸಂದೀಪ ದೊಡಮನಿ, ಸುನೀಲ್ ಉತ್ತೂರ, ಮಹಾಲಿಂಗಪ್ಪ ಹಲಸಪ್ಪಗೋಳ, ವಿನಾಯಕ ಉತ್ತೂರ ಮತ್ತು ಕಾರ್ತಿಕ ಒಂಟಗೋಡಿ ಇದ್ದರು.
ಈ ಸಂದರ್ಭದಲ್ಲಿ ಅಂಜುಮನ್ ಅಧ್ಯಕ್ಷ ಸಜನಸಾಬ ಪೆಂಡಾರಿ, ಕಾರ್ಯದರ್ಶಿ ಶಮ್ಶುದ್ದೀನ್ ತೇರದಾಳ, ಮುಸ್ತಾಕ್ ಚಿಕ್ಕೋಡಿ, ನಜೀರ್ ಝಾರೆ, ಸಯ್ಯದ್ ಯಾದವಾಡ, ಮೀರಾ ತಟಗಾರ, ಸಿರಾಜ್ ಪೆಂಡಾರಿ, ಹಾಸಿಂ ಪೆಂಡಾರಿ, ನೂರ ಪೆಂಡಾರಿ, ನಬಿ ಯಕ್ಸಂಬಿ, ಜಮೀರ ಯಕ್ಸಂಬಿ, ಪೈಗಂಬರ್ ಪೆಂಡಾರಿ, ಮಹಮ್ಮದ್ ಪಾಂಡು, ಬಾಬು ಸನದಿ, ಉಸ್ಮಾನ್ ಪೆಂಡಾರಿ, ಬಂದೇನವಾಜ್ ಸಿಂದಗಿ ಹಾಗೂ ಪಟ್ಟಣದ ಎಲ್ಲ ಮುಸ್ಲಿಂ ಸಮಾಜಗಳ ಜನರು ಉಪಸ್ಥಿತರಿದ್ದರು.
೨೧ mಟಠಿ ೦೧ ಠಿhoಣo

WhatsApp Group Join Now
Telegram Group Join Now
Share This Article