ಹಸಿರು ಕ್ರಾಂತಿ ವರದಿ, ಜಮಖಂಡಿ;
ಪ್ರಾಚೀನ ಸ್ಮಾರಕಗಳು ನಮ್ಮ ಪರಂಪರೆಯ ಪ್ರತಿಕಗಳಾಗಿವೆ ಅವುಗಳ ರಕ್ಷಣೆ ಪ್ರತಯೊಬ್ಬರ ಹೊಣೆಯಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಎನ್.ವಿ.ಅಸ್ಕಿ ತಿಳಿಸಿದರು, ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸ್ನಾತಕೋತ್ತರ ಕೇಂದ್ರ, ಇತಿಹಾಸ ವಿಭಾಗ, ಐಸಿಕ್ಯುಎ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರಾಚೀನ ಸ್ಮಾರಕಗಳು ಹಾಗೂ ರಕ್ಷಣೆ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸ್ಮಾರಕಗಳು ನಮ್ಮ ದೇಶದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯ ಪ್ರತೀಕಗಳಾಗಿವೆ ಎಂದು ವಿವರಿಸಿದರು. ಪಕ್ಕದ ರಾಜ್ಯ ಮಹಾರಾಷ್ಟ್ರದ ಅಜಂತಾ ಎಲ್ಲೊರಾ ಗುಹೆಗಳು ಬೌದ್ಧ, ಜೈನ ಹಾಗೂ ಹಿಂದು ಧರ್ಮದ ಸಂಯೋಜನೆಯನ್ನು ತೋರಿಸುತ್ತವೆ. ನಳಂದಾ ವಿಶ್ವವಿದ್ಯಾಲಯ ವಿಶ್ವ ಪ್ರಸಿದ್ಧವಾಗಿತ್ತು ಅಲ್ಲಿ ಕಲಿತ ಬೌದ್ಧ ಬಿಕ್ಷುಗಳು ವಿಶ್ವದೆಲ್ಲೆಡೆ ಸಂಚರಿಸಿ ಜ್ಞಾನ ಹರಡಿದರು. ಮುಂಬೈನಲ್ಲಿರುವ ತಾಜಹೊಟೇಲ ಭಾರತದ ಐತಿಹಾಸಿಕ ವಾಸ್ತುಶಿಲ್ಪದ ಒಂದು ಪ್ರಮುಖ ಉದಾಹರಣೆಯಾಗಿದೆ ಎಂದು ಹೇಳಿದರು. ವಾಸ್ತುಶಿಲ್ಪ ಗುಪ್ತರಕಾಲದಲ್ಲಿ ಉತ್ತರ ಭಾರತದಲ್ಲಿ ನಾಗರ ಶೈಲಿ ಅಭಿವೃದ್ಧಿಯಾಗಿದೆ , ದಕ್ಷಿಣ ಭಾರತದಲ್ಲಿ ದ್ರಾವಿಡ ಶೈಲಿ ಪಿರಾಮಿಡ್ ಆಕಾರದ ಗೋಪುರಗಳಿಂದ ಪ್ರಸಿದ್ಧಿಯಾಗಿದೆ ಎಂದು ತಿಳಿದರು. ಸ್ಮಾರಕಗಳು ಮತ್ತು ವಾಸ್ತುಶಿಲ್ಪಗಳು ನಮ್ಮಇತಿಹಾಸದ ಜೀವಂತ ಸಾಕ್ಷಿಗಳಾಗಿದ್ದು, ಅವುಗಳ ರಕ್ಷಣೆಯು ಪ್ರತಿಯೊಬ್ಬರಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲೆ ಡಾ. ಸುನಂದಾ .ಎಸ್. ಶಿರೂರ ಮಾತನಾಡಿ ಪ್ರಾಚೀನ ಸ್ಮಾರಕಗಳುಕೇವಲ ಕಲ್ಲಿನಕಟ್ಟಡಗಳಲ್ಲ, ಅವು ನಮ್ಮ ಇತಿಹಾಸದ ಜೀವಂತ ಸಾಕ್ಷಿಗಳಾಗಿವೆ ಎಂದು ಹೇಳಿದರು. ಇಂತಹ ಸ್ಮಾರಕಗಳು ನಮ್ಮ ಪೂರ್ವಜರ ಸಂಸ್ಕೃತಿ, ಕಲೆ, ವಾಸ್ತುಶಿಲ್ಪ ಹಾಗೂ ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ ಎಂದುತಿಳಿಸಿದರು.
ಜಯಶ್ರೀ ಕಡಪಟ್ಟಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ. ಸಚೀನ ಕೊಕಟನೂರ ಸ್ವಾಗತಿಸಿದರು. ಆರ್. ಎಸ್. ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜೀವಕುಮಾರ್ ಆರ್. ನಿರೂಪಿಸಿದರು. ಡಾ. ಎ. ಎಸ್. ಪೂಜಾರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಬಿ. ಎಂ. ಕೊರಬು, ಡಾ. ಬಿ. ಎನ್. ಜಾಧವ, ಡಾ. ಎ. ವಾಯ. ಕಾಂಬಳೆ, ಎಸ್. ಎನ್. ದೇಸ್ತೋಟ, ಡಾ. ಎ. ಐ. ಮಯರ ಹಾಗೂ ಮತ್ತಿತ್ತರು ಉಪಸ್ಥಿತರಿದ್ದು.


