ಚಿನ್ಮಯ ಕಲಾಶ್ರೀ’ ಪ್ರಶಸ್ತಿಗೆ ಭಾಜನರಾದ ಬಸವರಾಜ ಅಡವಳ್ಳಿ 

MK HasiruKranti
ಚಿನ್ಮಯ ಕಲಾಶ್ರೀ’ ಪ್ರಶಸ್ತಿಗೆ ಭಾಜನರಾದ ಬಸವರಾಜ ಅಡವಳ್ಳಿ 
WhatsApp Group Join Now
Telegram Group Join Now
ಗದಗ, 23 : ಜಿಲ್ಲೆಯ ಸಾಂಸ್ಕೃತಿಕ ಪರಿಸರದಲ್ಲಿ ರಂಗಭೂಮಿಯನ್ನು ಪ್ರಮುಖವಾಗಿಸಿಕೊಂಡು ತನ್ನದೇ ಆದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳ ಮೂಲಕ ಸಾಂಸ್ಕೃತಿಕ ಲೊಕದ ಸೇವೆ ಸಲ್ಲಿಸುತ್ತಿರುವ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯು ಕಳೆದ ಹತ್ತು ವರ್ಷಗಳಿಂದ ವಿಶ್ವರಂಗಭೂಮಿ ದಿನಾಚರಣೆಯನ್ನು ಆಚರಿಸುತ್ತ, ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಯ ರಂಗಕಲಾವಿದರಿಗೆ ‘ಚಿನ್ಮಯ ಕಲಾಶ್ರೀ’ ಪ್ರಶಸ್ತಿ ನೀಡುವ ಮೂಲಕ ಕಲೆ, ಕಲಾವಿದರನ್ನು ಉತ್ತೇಜಿಸುವ ಕೆಲಸ ಮಾಡುತ್ತ ಬಂದಿದ್ದು, ಪ್ರಸಕ್ತ 2026 ರ ಹನ್ನೊಂದನೇ ವರ್ಷದ ರಂಗಭೂಮಿ ದಿನಾಚರಣೆಯ ಅಂಗವಾಗಿ ‘ಚಿನ್ಮಯ ಕಲಾಶ್ರೀ’ ಪ್ರಶಸ್ತಿಗೆ ಹಿರಿಯ ರಂಗಕಲಾವಿದರಾದ ಬಸವರಾಜ ಶಿ. ಅಡವಳ್ಳಿ ಅವರನ್ನು ಆಯ್ಕೆ ಮಾಡಿದೆ ಎಂದು ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
ರಂಗಭೂಮಿ ಕ್ಷೇತ್ರದಲ್ಲಿ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸುವುದರೊಂದಿಗೆ ನಟರಾಗಿ ನಿರ್ದೇಶಕರಾಗಿ ಕೂಡಾ ಬಸವರಾಜ ಶಿ. ಅಡವಳ್ಳಿ ಅವರು ಗಣನೀಯ ಸೇವೆ ಸಲ್ಲಿಸಿರುವರು.
ಪ್ರಶಸ್ತಿಗೆ ಆಯ್ಕೆಯಾದ ಬಸವರಾಜ ಶಿ. ಅಡವಳ್ಳಿ ಅವರಿಗೆ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾದ ಮೌನೇಶ ಸಿ. ಬಡಿಗೇರ(ನರೇಗಲ್ಲ), ಆರ್ ಎನ್ ಕೆ ಮಿತ್ರ ಮಂಡಳಿಯ ಉಪಾಧ್ಯಕ್ಷರಾದ ಎಸ್. ಬಿ. ಕುಲಕರ್ಣಿ, ಹಿರಿಯ ಸಾಹಿತಿಗಳಾದ ಅಂದಾನೆಪ್ಪ ವಿಭೂತಿ, ಐ. ಕೆ. ಕಮ್ಮಾರ,  ರಂಗ ನಿರ್ದೇಶಕರಾದ ಫಣೀಂದ್ರಚಾರ್ಯ ದ್ಯಮೇನಹಳ್ಳಿ, ನಿವೃತ್ತ ಪ್ರಾಂಶುಪಾಲರಾದ ಆರ್. ಡಿ. ಕಡ್ಲಿಕೊಪ್ಪ,  ರಂಗಕಲಾವಿದರಾದ ಮುರಲೀಧರ ಸಂಕನೂರ, ಡಾ.ದತ್ತಪ್ರಸನ್ನ ಪಾಟೀಲ, ಡಾ. ಗಿರೀಶ ಬಡಿಗೇರ, ಜಾನಪದ ಕಲಾವಿದರಾದ ಶಿವಪ್ಪ ಭಜಂತ್ರಿ,
ಶ್ರೀಧರ ಕೊಣ್ಣೂರ, ವಿಶ್ವನಾಥ ಕಮ್ಮಾರ, ಮಹೇಶ ಕಮ್ಮಾರ, ಕಲಾವಿದರಾದ ರಾಚಯ್ಯ ಹೊಸಮಠ, ವಿಶ್ವನಾಥ ಬೇಂದ್ರೆ, ವೀರಯ್ಯ ಹೊಸಮಠ, ಸುಭಾಸ ಮಳಗಿ, ಸೂರಜ್ ಮಯೇಕರ, ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯ ನಿರ್ದೇಶಕರಾದ ಶರಣಪ್ಪ ಗಂಗರಗೊಂಡ, ರಿಯಾಜ್ ಅಹ್ಮದ್ ರಾಹುತ್, ಗಣೇಶ ಕಾಂಬಳೆ, ವಿಷ್ಣುಆಚಾರ್ಯ ಮೌನೇಶ ಬಡಿಗೇರ,
ಅಮರೇಶ ರಾಮಪೂರ, ದುರ್ಗೇಶ ಭೈರಮ್ಮನವರ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಅಭಿನಂದಿಸಿದ್ದಾರೆ.
WhatsApp Group Join Now
Telegram Group Join Now
Share This Article