ಮಹಾಲಿಂಗಪುರ : ಎಲ್ಲ ಗ್ರಾಮಪಟ್ಟಣಗಳಲ್ಲಿ ಹೆಚ್ಚು ಹೆಚ್ಚು ದೇವಸ್ಥಾನಗಳು ಬೆಳೆಯಬೇಕು ಇದರಿಂದ ನಮ್ಮ ಸಂಸ್ಕೃತಿ, ಧರ್ಮದ ಉಳಿವು ಸಾದ್ಯ.ಎಲ್ಲರನ್ನು ನಾವು ಧಾರ್ಮಿಕದ ಕಡೆ ಯುವಕರನ್ನು ಸೇಳೆಯದೆ ಹೋದರೆ ದುಷ್ಚಟಗಳಿಗೆ ಬಲಿಯಾಗಿ ಹೋಗುತ್ತಾರೆ ಎಂದು ತೇರದಾಳ ಮತ ಕ್ಷೇತ್ರದ ಜನಪ್ರೀಯ ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ಕೆಂಗೇರಿಮಡ್ಡಿಯಲ್ಲಿ ಕುರುಬ ಸಮಾಜದವ ಆಶ್ರಯದಲ್ಲಿ ನಡೆದ ಬೀರಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಮ್ಮ ಧರ್ಮದ ಪ್ರಕಾರ ಡೋಳ್ಳು,ಭಜನೆ, ಪ್ರವಚನ ಇತ್ಯಾದಿ ಕಾರ್ಯಕ್ರಮಗಲ್ಲಿ ಪಾಲ್ಗೋಳ್ಳುವುದರಿಂದ ನಮ್ಮ ಧರ್ಮವನ್ನು ಉಳಿಸಿಕೊಳ್ಳಲು ಸಾಧ್ಯ. ದೇವಸ್ಥಾನಗಳ ನಾಡು ನಮ್ಮದು, ಇಲ್ಲಿರುವ ಜನನಾಯಕರ ಮೇಲೆ ನಿಮ್ಮ ನಂಬಿಕೆ ಇರಲಿ, ಮೇಲೆ ಯಾರೆ ಅಧಿಕಾರದಲ್ಲಿದ್ದರು ಅವರು ಇಲ್ಲಿ ಬಂದು ಕೆಲಸ ಮಾಡುವುದಿಲ್ಲ. ಧರ್ಮ ಉಳಿದಾಗ ಮಾತ್ರ ನಮ್ಮ ದೇಶದ ಉಳಿವು ಸಾಧ್ಯ, ಭಾರತ ಯಾರ ಕೈಯಲ್ಲಿ ಸುರಕ್ಷಿತವಾಗಿರುತ್ತದೆಯೋ ಅವರಿಗೆ ಬೆಂಬಲಿ ನೀಡಿ ಎಂದರು.
ನಂತರ ಸಾನಿಧ್ಯವಹಿಸಿ ಮಾತನಾಡಿದ ಶಿರೂರ ಕನಕ ಬ್ರಹ್ಮ ವಿದ್ಯಾಶ್ರಮದ ಚಿನ್ಮಯಾನಂದ ಮಹಾಸ್ವಾಮಿಗಳು ಬೀರಸಿದ್ದೇಶ್ವರರನ್ನ ನಂಬಿ ಕೆಟ್ಟವರಿಲ್ಲ, ಭಕ್ತಿಯಿಂದ ನಡೆದುಕೊಂಡವರಿಗೆ ಯಾವತ್ತು ನರಕವಿಲ್ಲ, ದೇವರನ್ನು ನಾಮಸ್ಮರಣೆ ಮಾಡುತ್ತಾ ಬಂದ ಭಕ್ತರಿಗೆ ಯಾವತ್ತು ತೊಂದರೆಯಾಗಿಲ್ಲ. ಕಾರಣ ಇಂಥ ಮಹಾತ್ಮರ ಜಾತ್ರೆಗಳು ಮೇಲಿಂದ ಮೇಲೆ ನಡೆಯಬೇಕು, ಇದರಿಂದಾದರು ನಮ್ಮ ಸಮಾಜ ಭಾಂಧವರು ಒಂದಾಗಿ ಒಂದು ಕಡೆ ಸೇರಿ ಇಂಥ ಜಾತ್ರೆಗಳನ್ನು ಹಮ್ಮಿಕೊಳ್ಳುತ್ತಾರಲ್ಲ ಇದರಿಂದ ಸಮಾಜದಲ್ಲಿ ಒಗ್ಗಟ್ಟು ಬೆಳೆಯುತ್ತದೆ ಒಗ್ಗನಿಂದಾಗದ ಕೆಲಸ ಜಗತ್ತಿನಲ್ಲಿ ಯಾವುದು ಇಲ್ಲ ಕಾರಣ ಎಲ್ಲರೂ ಒಂದಾಗಿ ಇಂಥ ಜಾತ್ರಾ ಮಹೋತ್ಸವಗಳನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯ ಜೋತೆಗೆ ನೆಮ್ಮದಿ ದೊರೆಯುತ್ತದೆ ಎಂದರು.
ಪುರಸಭೆ ಮಾಜಿ ಸದಸ್ಯರಾದ ಶೇಖರ ಅಂಗಡಿ, ಮುಖ್ಯಾಧಿಕಾರಿ ನಾಮದೇವ ಲಮಾಣಿ ಮುಖಂಡರಾದ ಮಹಾಲಿಂಗಪ್ಪ ಜಕ್ಕಣ್ಣವರ, ಲಕ್ಷ್ಮಣ ಕಿಶೋರಿ, ಗಂಗಾಧರ್ ಮೇಟಿ, ಮಹೇಶ ಇಟಕನ್ನವರ, ಸಂಗಪ್ಪ ಡೊಣಿ, ನಾಗಪ್ಪ ಡೊಣಿ,ಪರಸು ಬಂಡಿ, ಯಲ್ಲಪ್ಪ ಪಟ್ಟಣಕೋಡಿ, ಬಸವರಾಜ್ ಓಲೇಕಾರ, ಮಹಾಂತೇಶ್ ಅವಟಿ, ಕರೆಪ್ಪ ಮೇಟಿ, ಪ್ರಭು ಪೂಜಾರಿ, ಕರೆಪ್ಪ ಪೂಜಾರಿ, ಶ್ರೀಶೈಲ್ ಅವಟಿ, ಸುರೇಶ ಹೂಗಾರ ಈರಪ್ಪ ಜಕ್ಕಣ್ಣವರ, ಬಸು ಬಂಡಿ, ಕರೆಪ್ಪ ಹುಣಶೀಕಟ್ಟಿ,ಮುತ್ತು ಸಾಲಿಮಣಿ, ಆನಂದ ಸನದಿ, ಸಿದ್ದಪ್ಪ ರಾಮೋಜಿ, ಪರಶು ಕೊಣ್ಣೂರ, ಸೀಮಂತ ಹುಣಶೀಕಟ್ಟಿ ಸಂಗಪ್ಪ ಪಟ್ಟಣಕೋಡಿ, ರಮೇಶ್ ಪಟ್ಟಣಕೋಡಿ ಅರ್ಜುನ್ ಮೇಟಿ ರಾಜು ಡೋಣಿ,ಸೇರಿ ಹಲವರು ಇದ್ದರು.
ಫೋಟೋ: ೨೦ ಎಂ.ಎಲ್.ಪಿ ೧
ಮಹಾಲಿಂಗಪುರ : ಸ್ಥಳೀಯ ಕೆಂಗೇರಿಮಡ್ಡಿಯಲ್ಲಿ ನಡೆದ ಬೀರಲಿಂಗೇಶ್ವರ ಜಾತ್ರಾ ಮಹೋತ್ವವದಲ್ಲಿ ಶಾಸಕ ಶಿದ್ದು ಸವದಿ ಮಾತನಾಡಿದರು.


