ಭಾರತದ ಸಂವಿಧಾನವು ಬುದ್ಧನ ತತ್ವಗಳನ್ನೂ ಆಧರಿಸಿದೆ : ಡಾ. ರಮೇಶ ಕಾಂಬಳೆ

MK HasiruKranti
ಭಾರತದ ಸಂವಿಧಾನವು ಬುದ್ಧನ ತತ್ವಗಳನ್ನೂ ಆಧರಿಸಿದೆ : ಡಾ. ರಮೇಶ ಕಾಂಬಳೆ
WhatsApp Group Join Now
Telegram Group Join Now

 

ಹಸಿರು ಕ್ರಾಂತಿ: ಬೆಳಗಾವಿ :ಭಾರತದ ಸಂವಿಧಾನ ಜಗತ್ತಿಗೆ ಮಾದರಿ ಸಂವಿಧಾನವಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ ಕಾಂಬಳೆಯವರು ಅಭಿಪ್ರಾಯಪಟ್ಟರು.ಬೆಳಗಾವಿ ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಇತಿಹಾಸ ವಿಭಾಗ, ಸಮಾಜ ವಿಜ್ಞಾನ ಸಂಘ ಹಾಗೂ ಐ.ಕ್ಯೂ.ಎ.ಸಿ.ಗಳ ಸಂಯುಕ್ತಾಶ್ರಯದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಾರ್ಚ ೧೭ ರಂದು ಹಮ್ಮಿಕೊಂಡ ಭಾರತೀಯ ಸಂವಿಧಾನದ ಚಾರಿತ್ರಿಕ ಬೆಳವಣಿಗೆ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ಇವರು ಭಾರತದ ಸಂವಿಧಾನವು ಡಾ.ಬಿ.ಆರ್. ಅಂಬೇಡ್ಕರ್‌ರವರ ಮಾರ್ಗದರ್ಶನದಲ್ಲಿ ಬುದ್ಧನ ಸಮಾನತೆ , ಸ್ವಾತಂತ್ರ್ಯ ಹಾಗೂ ಬ್ರಾತೃತ್ವ ತತ್ವಗಳ ಮೇಲೆ ರೂಪಿತವಾಗಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರು ಭೌದ್ಧ ಧರ್ಮದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ ಎಂದ ಅವರು ಭಾರತೀಯ ಸಂವಿಧಾನದ ರಚನೆಯ ಹಿಂದೆ ಅನೇಕ ಚಾರಿತ್ರಿಕ ಅಂಶಗಳು ಅಡಗಿವೆ. ಬ್ರಿಟಿಷರು ಭಾರತದಲ್ಲಿ ತಮ್ಮ ಆಡಳಿತದ ಅನುಕೂಲಕ್ಕಾಗಿ ಅನೇಕ ಕಾಯ್ದೆಗಳನ್ನು ಜಾರಿಗೆ ತಂದರು. ಅವುಗಳಲ್ಲಿ ರೆಗ್ಯುಲೆಟಿಂಗ್ ಕಾಯ್ದೆ, ಚಾರ್ಟರ್ ಕಾಯ್ದೆಗಳು ಹಾಗೂ ೧೯೦೯, ೧೯೧೯ ಹಾಗೂ ೧೯೩೫ರ ಕಾಯ್ದೆಗಳು ಭಾರತೀಯ ಸಂವಿಧಾನ ರಚನೆಯಲ್ಲಿ ಮಹತ್ವದ ಮೂಲಾಧಾರಗಳಾದವು. ಇವುಗಳನ್ನಾಧರಿಸಿದ ಭಾರತೀಯ ಸಂವಿಧಾನವು ಭಾರತೀಯರ ಬದುಕನ್ನು ಹಸನಾಗಿಸುವಲ್ಲಿ ಕಟಿಬದ್ಧವಾಗಿದೆ ಎಂದರು.ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ಅರ್ಜುನ ಜಂಬಗಿ ಅವರು ಪ್ರಸ್ಥಾವಿಕವಾಗಿ ಮಾತನಾಡಿ ಭಾರತೀಯ ಸಂವಿಧಾನದ ರಚನೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ ಅವರು ಪಟ್ಟ ಶ್ರಮ ಹಾಗೂ ಕೊಡುಗೆಗಳನ್ನು ವಿವರಿಸಿದರು.

ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಸಿ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸರ್ವತೋಮೂಖ ಅಭಿವೃದ್ಧಿಗಾಗಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಈ ವೇಳೆ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಉಪನ್ಯಾಸಕರಾದ ಡಾ. ಸದಾಶಿವ ಮುಗಳಿ, ಡಾ. ನೂತನ ದೇಸಾಯಿ, ವಾಣಿಜ್ಯ ಶಾಸ್ತ್ರದ ಮುಖ್ಯಸ್ಥ ಡಾ. ಮುಕುಂದ ಮುಂಡರಗಿ ಹಾಗೂ ಕಾಲೇಜಿನ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು. ಸಾಕ್ಷೀ ಬಾಳಕರ ಸ್ವಾಗತಿಸಿದರು, ಜ್ಯೋತಿ ಚಾಪಗಾಂವ ಅತಿಥಿ ಪರಿಚಯಿಸಿದರು, ಪ್ರಾರ್ಥಣೆ ಪ್ರಿಯಾಂಕಾ ತಿಲಗರ, ನಿರೂಪಣೆ ವಿದ್ಯಾಶ್ರೀ ಜನಗೌಡ, ಲಕ್ಷ್ಮೀ ಕದಮ ವಂದಿಸಿದರು.

WhatsApp Group Join Now
Telegram Group Join Now
Share This Article