, ಜಮಖಂಡಿ;
ಸತತ ಪರಿಶ್ರಮದಿಂದ ಉನ್ನತ ಗುರಿ ಮುಟ್ಟಲು ಸಾಧ್ಯ, ಜೀವನದಲ್ಲಿ ಗುರು ಮತ್ತು ಗುರಿ ಇರಬೇಕು ಅಂದರೆ ಅಸಾಧ್ಯವನ್ನು ಸಾಧಿಸ ಬಹುದು ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸುನಂದಾ ಶಿರೂರ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ಮಹಿಳಾ ಸಬಲೀಕರಣ ಘಟಕ, ಸಾಂಸ್ಕೃತಿಕ ವಿಭಾಗ ಹಾಗೂ ಐ.ಕ್ಯೂ.ಎ.ಸಿ. ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿಸ್ತು, ಸಂಯಮ , ದೃಢ ನಿರ್ಧಾರಗಳಿಂದ ಗುರು-ಹಿರಿಯರ ಸನ್ಮಾರ್ಗದಲ್ಲಿ ಸಾಧೆ ಮಾಡಬೇಕು, ವ್ಯಕ್ತಿತ್ವ ವಿಕಸನಕ್ಕೆ ಮಹತ್ವ ನೀಡಬೇಕು ವಿದ್ಯಯ ಜತೆಗೆ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಿ ರಾಜೇಶ್ವರಿ ಹಿರೇಮಠ, ಮಾತನಾಡಿ ಸಂಸ್ಕೃತಿ, ಸಂಸ್ಕಾರಗಳು ಮುಖ್ಯವಾಗಿವೆ. ಪರಿಶ್ರಮ ಮತ್ತು ಆತ್ಮವಿಶ್ವಾಸ ಇದ್ದರೆ ಸಣ್ಣ ಮಟ್ಟಿನಿಂದ ಪ್ರಾರಂಭಿಸಿದ ಕೆಲಸವೂ ದೊಡ್ಡ ಮಟ್ಟಕ್ಕೆ ಬೆಳೆಯಬಹುದು ಎಂದು ಅಭಿಪ್ರಾಯ ಪಟ್ಟರು.
ಸಂಗೀತಾ ನಾವಿ ಪ್ರಾರ್ಥಿಸಿದರು. ಸುಮಾ ವೈ. ಎನ್. ಸ್ವಾಗತಿಸಿದರು. ಡಾ. ಅಶ್ವಿನಿ ಬಬಲಿ ಅತಿಥಿಗಳನ್ನು ಪರಿಚಯಿಸಿದರು ಡಾ. ಎಸ್.ಎನ್. ಬಜಂತ್ರಿ ಸ್ವಾಗತಿಸಿದರು. . ಪ್ರತಿಭಾ ಕಡಕೋಳ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಪ್ರತಿಭಾ ಹಾಗೂ ಭಾಗ್ಯಶ್ರೀ ಅನಿಸಿಕೆ ವ್ಯಕ್ತಪಡಿಸಿದರು. ಡಾ. ಎ. ವಾಯ. ಕಾಂಬಳೆ ಮಹಿಳಾ ದಿನಾಚರಣೆಯ ಪ್ರಯುಕ್ತ ಒಂದುವಾರದ ವರೆಗೆ ವಿದ್ಯಾಲಯದಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸಗಳು ಹಾಗೂ ಕಾರ್ಯಕ್ರಮಗಳ ವರದಿ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಡಾ. ಎಂ. ಎಂ. ಮಂಟೂರ, ಶ್ರೀಮಯಿ ಎನ್. ಎಸ್. ಕೆ. ಡೇಂಬರೆ, ಡಾ. ಬಿ. ಎನ್. ಜಾಧವ, ಪುಷ್ಪಾ ಹುಣಶ್ಯಾಳ, ಡಾ. ವಾಯ. ವಾಯ. ಕೊಕ್ಕನವರ, ಡಾ. ಬಿ. ಎಮ. ಕೊರಬು, ಆರ್. ಬಿ. ಶಿತೋಳೆ, ಸವಿತಾ ಪಾಟೀಲ, ಅನಸೂಯಾ ಮಬ್ರುಮಕರ, ಸುಜಾತಾ ಬಸಪ್ಪಗೋಳ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.ಕೊನೆಗೆ ಯಲ್ಲವ್ವ ಪಾತ್ರೋಟ ವಂದಿಸಿದರು.


