ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರದ ಓಂ ಶಾಂತಿ ಕೇಂದ್ರದ ಹತ್ತಿರ ನೂತನವಾಗಿ ಸ್ಥಾಪಿಸಲಾದ ‘ಅಪ್ಪಾಜಿ ಫೈನಾನ್ಸ್’ ಸಂಸ್ಥೆಯನ್ನು ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಅಪ್ಪಾಜಿ ಫೈನಾನ್ಸ್
ನೂತನ ಉದ್ಘಾಟಿಸಿ ಮಾತನಾಡಿದ ಮಾಜಿ ಎ ಎಸ್ ಶಾಸಕ ನಡಹಳ್ಳಿ ಅವರು, “ಸ್ಥಳೀಯವಾಗಿ ಜನರಿಗೆ ಉತ್ತಮ ಆರ್ಥಿಕ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಅಪ್ಪಾಜಿ ಫೈನಾನ್ಸ್ ಮಹತ್ವದ ಹೆಜ್ಜೆ ಇಟ್ಟಿದೆ. ವಿಶ್ವಾಸಾರ್ಹ ಮತ್ತು ಪಾರದರ್ಶಕ ಸೇವೆಯ ಮೂಲಕ ಸಾರ್ವಜನಿಕರ ಬೆಂಬಲದೊಂದಿಗೆ ಸಂಸ್ಥೆಯು ಅಭಿವೃದ್ಧಿ ಹೊಂದಲಿ,” ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ (ಕುಚಬಾಳ), ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ (ನಡಹಳ್ಳಿ), ಮುಖಂಡರಾದ ಮಲ್ಲಯ್ಯಸ್ವಾಮಿ ಬಿರಾದಾರ (ಚೊಂಡಿ),ನಾಗಪ್ಪ ಗಂಗೂರ, ವಾಯ್ ಎಚ್ ವಿಜಯಕರ, ಶಿವನಗೌಡ ಬಿರಾದಾರ,ಕ್ರೈಂ ಪಿಎಸ್ಐ ಅರ್ ಎಸ್ ಬಂಗಿ,
ಭಾಗವಹಿಸಿ ಸಂಸ್ಥೆಯ ಉನ್ನತಿಗೆ ಹಾರೈಸಿದರು.
ಈ ಸಂದರ್ಭದಲ್ಲಿ
ಸಂಸ್ಥೆಯ ಮಾಲೀಕರಾದ ಸುಭಾಷ ಕ. ಗುಡಿಮನಿ ಹಾಗೂ ವಿದ್ಯಾ ಸು. ಗುಡಿಮನಿ ಅವರು ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಢವಳಗಿ ಗ್ರಾ.ಪಂ. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಂ.ಕೆ. ಗುಡಿಮನಿ, ಮಾಜಿ ತಾ.ಪಂ. ಸದಸ್ಯೆ ಪಾರ್ವತಿ ಮ. ಗುಡಿಮನಿ, ಪೊಲೀಸ್ ಇಲಾಖೆಯ ಬಾಬು ಕ. ಗುಡಿಮನಿ, ಢವಳಗಿ ಎಚ್‌ಪಿ ಪಂಪ್ ಮಾಲೀಕರಾದ ಶೋಭಾ ಬಾ. ಗುಡಿಮನಿ ಸೇರಿದಂತೆ ಗುಡಿಮನಿ ಕುಟುಂಬಸ್ಥರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಢವಳಗಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗುಡಿಮನಿ ಅಭಿಮಾನಿಗಳು, ಹಿತೈಷಿಗಳು ಮತ್ತು ಪಟ್ಟಣದ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


